spot_img
Monday, April 6, 2026
spot_img

ರಾಮಲಲ್ಲನ ಪ್ರಾಣ ಪ್ರತಿಷ್ಠಾಪನಾ ಮಹೋತ್ಸವದ ಸಂದರ್ಭದಲ್ಲಿ  ಬುರ್ಜ್‌ ಖಲೀಫಾದಲ್ಲಿ ಶ್ರೀರಾಮ ದೇವರ ಫೋಟೋ ಬಿಂಬಿಸಲಾಗಿತ್ತೆಂಬ ನಕಲಿ ಪೋಸ್ಟರ್‌ ವೈರಲ್ !

ಜನಪ್ರತಿನಿಧಿ ವಾರ್ತೆ (ನವ ದೆಹಲಿ) :  ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ರಾಮಲಲ್ಲನಾ ಪ್ರತಿಷ್ಠಾಪನೆಯ ಹಿನ್ನೆಲೆಯಲ್ಲಿ ಜಗತ್ತಿನ ಅತ್ಯಂತ ಎತ್ತರದ ಕಟ್ಟದ ದುಬೈನ ಬುರ್ಜ್‌ ಖಲೀಫಾದಲ್ಲಿ ಶ್ರೀರಾಮ ದೇವರ ಫೋಟೋ ಬಿಂಬಿಸಲಾಗಿದೆ ಎಂಬ ಫೋಟೋವೊಂದು ನಿನ್ನೆ(ಸೋಮವಾರ) ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್‌ ಆಗಿತ್ತು. ಆದರೇ ಇದು ನಕಲಿ ಪೋಟೋ ಎಂದು ಈಗ ತಿಳಿದು ಬಂದಿದೆ.

ಇಂದು(ಮಂಗಳವಾರ) ನಾಡಿನ ಪ್ರತಿಷ್ಠಿತ ಪತ್ರಿಕಾ ಮಾಧ್ಯಮವೊಂದರಲ್ಲೂ ಈ ಸುದ್ದಿ ಪ್ರಕಟವಾಗಿತ್ತು ಎನ್ನುವುದು ಇಲ್ಲಿ ಉಲ್ಲೇಖಾರ್ಹ.

ಕೆಲವು ವಿಶೇಷ ಸಂದರ್ಭಗಳಲ್ಲಿ ಬುರ್ಜ್‌ ಖಲೀಫಾ ಕಟ್ಟದಲ್ಲಿ ಚಿತ್ರಣಗಳನ್ನು ಮೂಡಿಸಿದಾಗ ಆ ಬಗ್ಗೆ ಅಧಿಕೃತವಾಗಿ ಬುರ್ಜ್‌ ಖಲಿಫಾದ ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ನೀಡಲಾಗುತ್ತದೆ. ಆದರೇ, ನಿನ್ನೆ(ಸೋಮವಾರ) ಶ್ರೀರಾಮ ದೇವರ ಫೋಟೋ ಬಿಂಬಿಸಿರುವುದರ ಬಗ್ಗೆ ಯಾವುದೇ ಮಾಹಿತಿ ಬುರ್ಜ್‌ ಖಲಿಫಾದ ಯಾವುದೇ ಅಧಿಕೃತ ಮೂಲಗಳು ನೀಡದೇ ಇರುವುದರಿಂದ ನಿನ್ನೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಪೋಟೋ ನಕಲಿ ಎಂಬ ಅಸಲಿ ವಿಚಾರ ಈಗ ಬೆಳಕಿಗೆ ಬಂದಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆದ ಪೋಟೋವನ್ನು ಬುರ್ಜ್‌ ಖಲೀಫಾದ ಸ್ಟಾಕ್‌ ಫೊಟೋವೊಂದನ್ನು ಬಳಸಿಕೊಂಡು ಅದರ ಮೇಲೆ ಶ್ರೀರಾಮ ದೇವರ ಫೋಟೋ ಸೂಪರ್‌ಇಂಪೋಸ್‌ ತಂತ್ರಜ್ಞಾನ ಬಳಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡಲಾಗಿತ್ತು.

ರಿವರ್ಸ್‌ ಇಮೇಜ್‌ ಸರ್ಚ್‌ ಮಾಡಿದಾಗ ಈ ವೈರಲ್‌ ಫೋಟೋದಲ್ಲಿರುವ ಬುರ್ಜ್‌ ಖಲಿಫಾದ ಚಿತ್ರ ದೊರಕಿದೆ. ಆ ಫೋಟೋದ ನಸುತ್ತಲೂ ಇರುವ ಚಿತ್ರಣ ಹಾಗೂ ವೈರಲ್‌ ಆಗಿರುವ ಫೋಟೋದಲ್ಲಿ  ಬುರ್ಜ್‌ ಖಲಿಫಾ ಕಟ್ಟಡದ ಸುತ್ತಲಿನ ಚಿತ್ರಣ ಹಾಗೂ ಬೆಳಕು ಒಂದೇ ಆಗಿದೆ. ಆ ಪೋಟೋ ಬಳಸಿಕೊಂಡು ರಾಮ ದೇವರ ಫೋಟೋ ಸೂಪರ್‌ಇಂಪೋಸ್‌ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಮಾಡಲಾಗಿದೆ ಎಂಬ ಮಾಹಿತಿ ಈಗ ಹೊರಬಿದ್ದಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!