spot_img
Sunday, April 5, 2026
spot_img

ರಾಮಲಲ್ಲಾ ಪ್ರಾಣ ಪ್ರತಿಷ್ಠೆ ಯಶಸ್ವಿಯಾಗಲೆಂದು ಯುವಶಕ್ತಿ ಮಿತ್ರ ಮಂಡಲದಿಂದ ಊರಿನ ದೈವ ದೇವರುಗಳಿಗೆ ಸಾಮೂಹಿಕ ಪ್ರಾರ್ಥನೆ !

ಜನಪ್ರತಿನಿಧಿ ವಾರ್ತೆ (ವಕ್ವಾಡಿ) : ಇಂದು(ಜನವರಿ 22) ಸೋಮವಾರ ಅಯೋಧ್ಯೆಯಲ್ಲಿ ಭಗವಾನ್ ಶ್ರೀ ರಾಮಲಲ್ಲಾನ ಪುನರ್ ಪ್ರತಿಷ್ಠಾಪನೆ ನಡೆಯಲಿದ್ದು, ವಿಗ್ರಹ ಪ್ರತಿಷ್ಠಾಪನೆಯು ಯಾವುದೇ ವಿಘ್ನಗಳಿಲ್ಲದೇ ನೆರವೇರಲಿ, ಮುಂದಿನ ದಿನಗಳಲ್ಲಿ ಶೀಘ್ರವಾಗಿ ಪೂರ್ಣ ದೇವಸ್ಥಾನ ನಿರ್ಮಾಣ ಆಗಲಿ ಎಂದು ಯವಶಕ್ತಿ ಮಿತ್ರಮಂಡಲ(ರಿ.) ಹೆಗ್ಗಾರಬೈಲು, ವಕ್ವಾಡಿ ಸಂಸ್ಥೆಯ ಸರ್ವ ಸದಸ್ಯರು ಗ್ರಾಮದ ದೈವಸ್ಥಾನಳಾದ ಹೆಗ್ಗಾರಬೈಲು ಅವತಾರ ಚಿಕ್ಕು ಮತ್ತು ನಂದಿಕೇಶ್ವರ ಮತ್ತು ಪರಿವಾರ  ದೈವಸ್ಥಾನ, ತೆಂಕಬೆಟ್ಟು ದೇವರಾಡಿ ಬ್ರಹ್ಮಲಿಂಗೇಶ್ವರ ಮತ್ತು  ಚಿಕ್ಕು ಸಪರಿವಾರ ದೈವಸ್ಥಾನ, ಚಿತ್ತೇರಿ ನಾಗಬ್ರಹ್ಮ, ರಕ್ತೇಶ್ವರಿ  ದೈವಸ್ಥಾನ ಹಾಗೂ ಗೋಳಿಹಾಡಿ ನಂದಿಕೇಶ್ವರ ಮತ್ತು ಸಪರಿವಾರ  ದೈವಸ್ಥಾನಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.  

ಭಗವಾನ್ ಸೀತಾರಾಮಚಂದ್ರನು ನಮ್ಮ ದೇಶದ ಅಸ್ಮಿತೆಯಾಗಿದ್ದು, ಪ್ರಭು ರಾಮಚಂದ್ರ ಯಾವುದೇ  ರಾಜಕೀಯ ಸರಕಲ್ಲ,  ಸಾತ್ವಿಕ ರಾಮನ ಗುಣ  ಪ್ರತಿಯೊಬ್ಬರ ಮನಮನೆಯಲ್ಲಿ ನಲೆಸಲಿ, ದೇಶದಲ್ಲಿ ಶಾಂತಿ, ಸೌಹಾರ್ದತೆ, ನೆಮ್ಮದಿ ನೆಲೆಸಲಿ ಎಂದು   ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ನಡೆಸಿದರು.

ಈ ಸಂದರ್ಭದಲ್ಲಿ ಯುವಶಕ್ತಿ ಮಿತ್ರಮಂಡಲದ ಅಧ್ಯಕ್ಷರಾದ ವಿಜಯ  ಪೂಜಾರಿ   ಮತ್ತು ಯುವಕ ಮಂಡಲದ ಸದಸ್ಯರು,  ಮತ್ತು ಗ್ರಾಮಸ್ಥರು ಹಾಗೂ  ನರಸಿಂಹ ಪೂಜಾರಿ ನಿಂಗಿಮನೆ ವಕ್ವಾಡಿ , ಗ್ರಾಮಪಂಚಾಯತ್ ಸದಸ್ಯರಾದ ರಮೇಶ್ ಶೆಟ್ಟಿ ವಕ್ವಾಡಿ, ಬಾಲಕೃಷ್ಣ ಶೆಟ್ಟಿ , ಜೀರ್ಣೋದ್ದಾರ ಸಮಿತಿಯ ಸದಸ್ಯರಾದ ರಮೇಶ್ ಶೆಟ್ಟಿ ಅಧ್ಯಾಪಕರು ವಕ್ವಾಡಿ , ಆನಂದ್ ಶೆಟ್ಟಿ ಕನ್ನಾಲಿಮನೆ, ಹಿರಿಯರಾದ ಸೀತಾರಾಮ್ ಶೆಟ್ಟಿ , ಸತ್ಯರಂಜನ್ ಹೆಗ್ಡೆ, ಜಲಜ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು.  

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!