spot_img
Monday, April 6, 2026
spot_img

ಎಷ್ಟು ಸುಂದರವಾದ ಮೂರ್ತಿ ಇದು, ನೀವು ಎಷ್ಟು ಶ್ರಮ ವಹಿಸಿದ್ದೀರಿ ಈ ಶಿಲೆಯಲ್ಲಿ ರಾಮನನ್ನು ಕೆತ್ತಲು.. : ಅರುಣ್‌ ಯೋಗಿರಾಜ್‌ ರನ್ನು ಹೊಗಳಿದ ಕಂಗನಾ  

ಜನಪ್ರತಿನಿಧಿ ವಾರ್ತೆ (ನವ ದೆಹಲಿ ) : ದೇಶದ ಶ್ರೇಷ್ಠ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಶ್ರೀ ಪುರಸ್ಕೃತ , ಬಾಲಿವುಡ್‌ ನಟಿ ಕಂಗನಾ ರನೌತ್‌ ಅಯೋಧ್ಯೆಯ ಶ್ರೀರಾಮನ ಬಾಲ ಮೂರ್ತಿಯ ಬಗ್ಗೆ ಸಂತಸ ವ್ಯಕ್ತ ಪಡಿಸಿದ್ದಾರೆ.

ತಮ್ಮ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಹರ್ಷ ವ್ಯಕ್ತಪಡಿಸಿದ ಕಂಗನಾ, ʼಶ್ರೀರಾಮ ಬಾಲಕನಾಗಿ ಹೀಗೆಯೇ ಕಾಣಿಸುತ್ತಾನೆ ಎಂದು ನಾನು ಯಾವಾಗಲೂ ಕಲ್ಪಿಸಿಕೊಳ್ಳುತ್ತಿದ್ದೆ. ನನ್ನ ಕಲ್ಪನೆ ಈ ಮೂರ್ತಿಯ ಮೂಲಕ ಇಂದು ಸತ್ಯವಾಗಿದೆʼ ಎಂದು ಅವರು ಹೇಳಿದ್ದಾರೆ.

ಅವರ ಇನ್ಟಾಗ್ರಾಂ ಖಾತೆಯ ಮತ್ತೊಂದು ಪೋಸ್ಟ್‌ ನಲ್ಲಿ ಶ್ರೀರಾಮಲಲ್ಲನ ಬಾಲ ಮೂರ್ತಿಯನ್ನು ಕೆತ್ತಿದ ಕರ್ನಾಟಕದ ಮೈಸೂರು ಮೂಲದ ಅರುಣ್‌ ಯೋಗಿರಾಜ್‌ ಅವರನ್ನು ಟ್ಯಾಗ್‌ ಮಾಡಿ ಅವರನ್ನು ಪ್ರಶಂಸಿದ ಕಂಗನಾ, ʼಎಷ್ಟು ಸುಂದರವಾದ ಮನಮೋಹಕವಾದ ಮೂರ್ತಿ ಇದು. ಅರುಣ್‌ ಯೋಗಿರಾಜ್‌ ಜಿ ನೀವು ಎಷ್ಟು ಶ್ರಮ ವಹಿಸಿದ್ದೀರಿ ಈ ಶಿಲೆಯಲ್ಲಿ ಸ್ವಯಂ ಪರಮೇಶ್ವರನ ಸ್ವರೂಪವನ್ನು ಕೆತ್ತಲು. ಇದು ನಿಜಕ್ಕೂ ನಿಮ್ಮ ಮೇಲಿನರಾಮನ ಕೃಪೆಯಿಂದ ಮಾತ್ರ ಸಾಧ್ಯವಾಗಿದೆ. ಶ್ರೀರಾಮ ನಿಮಗೆ ಈ ಮೂಲಕ ದರ್ಶನ ನೀಡಿದ್ದಾನೆ. ಇದೊಂದು ನಿಜಕ್ಕೂ ಧ್ಯಾನವೇ ಸರಿʼ ಎಂದು ಅವರು ಶಿಲ್ಪಿ ಅರುಣ್‌ ಯೋಗಿರಾಜ್‌ ಅವರನ್ನು ಹಾಡಿ ಕೊಂಡಾಡಿದ್ದಾರೆ.

ಜನವರಿ 22 ರಂದು ಅಯೋಧ್ಯೆಯಲ್ಲಿ ನಡೆಯಲಿರುವ ಶ್ರೀ ರಾಮಲಲ್ಲನ ಪ್ರಾಣ ಪ್ರತಿಷ್ಠಾ ಮಹೋತ್ಸವಕ್ಕೆ ಕಂಗನಾ ಅವರಿಗೆ ಆಹ್ವಾನ ಬಂದಿದ್ದು, ಈ ಬಗ್ಗೆ ಈ ಹಿಂದೆ ಅವರು ಈ ವಿಚಾರವನ್ನು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!