Sunday, September 8, 2024

ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ ಹಟ್ಟಿ‌ಅಂಗಡಿಯಲ್ಲಿ ಬಹುಮಾನ ವಿತರಣೆ

ಕುಂದಾಪುರ: ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ, ಹಟ್ಟಿ‌ಅಂಗಡಿಯಲ್ಲಿ ವಾರ್ಷಿಕೋತ್ಸವದ ಅಂಗವಾಗಿ ನಡೆದ ವಿವಿಧ ಸಾಂಸ್ಕೃತಿಕ-ಶೈಕ್ಷಣಿಕ-ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣಾ ಸಮಾರಂಭವು ಸಂಪನ್ನಗೊಂಡಿತು.

ಕಾರ್ಯಕ್ರಮದಲ್ಲಿ ಪ್ರಧಾನ ಅತಿಥಿಗಳಾಗಿ ಆಗಮಿಸಿದ ಹಿರಿಯ ಪತ್ರಕರ್ತ ಜಿ.ಯು.ಭಟ್ ಬಹುಮಾನಗಳನ್ನು ವಿತರಿಸಿ, ಮಾತನಾಡುತ್ತಾ ಮಕ್ಕಳನ್ನು ಪ್ರೀತಿಯಿಂದ ಬೆಳೆಸುವ ತಂದೆ ತಾಯಿ ತನ್ನ ಮಗು ತನಗಷ್ಟೇ ಮೀಸಲೆಂದು ಭಾವಿಸದೇ ಮಗು ತನ್ನ ಸಂಸಾರಕ್ಕೂ, ಊರಿಗೂ, ರಾಜ್ಯ, ದೇಶ, ವಿಶ್ವಕ್ಕೂ ಒಳಿತನ್ನು ಮಾಡಬೇಕೆಂದು ಬಯಸುತ್ತಾರೆ. ಆದ್ದರಿಂದ ಮಕ್ಕಳೇ ಬಾಲ್ಯದ ಜೀವನದಲ್ಲಿ ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿದರೆ, ಮುಂದಿನ ಎಪ್ಪತ್ತು ವರ್ಷ ನೆಮ್ಮದಿಯಿಂದ ಬದುಕಬಹುದು. ಎನ್ನುತ್ತಾ ಸಿದ್ಧಗಂಗಾಮಠದ ಶಿವಕುಮಾರ ಸ್ವಾಮಿಗಳು ರಚಿಸಿದ ಕವನದ ಮೂಲಕ ಮಕ್ಕಳಿಗೆ ಜೀವನದ ಸ್ಪೂರ್ತಿಯನ್ನು ತುಂಬಿದರು.

ಅತಿಥಿಗಳಾಗಿ ಆಗಮಿಸಿದ ಕರ್ನಾಟಕ ಬ್ಯಾಂಕ್ ಕುಂದಾಪುರದ ಹಿರಿಯ ಶಾಖಾಪ್ರಬಂಧಕರಾದ ಶರತ್ ಆರ್ ಬಹುಮಾನಗಳನ್ನು ವಿತರಿಸಿ, ಮಾತನಾಡುತ್ತಾ ಸ್ಪರ್ಧೆಗಳಲ್ಲಿ ಗೆಲುವು ಮುಖ್ಯವಲ್ಲ. ಸ್ಪರ್ಧೆಗಳಲ್ಲಿ ಭಾಗವಹಿಸುವುದು ಮುಖ್ಯ. ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಎರಡು ಮೂರು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದು ತಿಳಿದು ಸಂತೋಷವಾಯಿತು. ಎನ್ನುತ್ತಾ ಶುಭಾಶಂಸನೆಗೈದರು.
ಶಾಲೆಯ ವಿದ್ಯಾರ್ಥಿನಿ ಕು| ಅಹನಿ ಕಾರ್ಯಕ್ರಮ ನಿರೂಪಿಸಿದರೆ, ಕು| ಯುಕ್ತಾ ಸ್ವಾಗತವನ್ನು, ಭವ್ಯಶ್ರೀ ಶೆಟ್ಟಿ ವಂದಿಸಿದರು. ಶಾಲಾ ಶಿಕ್ಷಕಿಯರಾದ ರಂಜಿತಾ, ಶೈಲಜಾ, ವಿದ್ಯಾ, ಸುಶ್ಮಿತಾ, ಪ್ರತೀಕ್ಷಾ, ಬಹುಮಾನ ವಿಜೇತರ ಪಟ್ಟಿಯನ್ನು ವಾಚಿಸಿದರು.

ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿಗಳು ಹಾಗೂ ಶಾಲಾ ಪ್ರಾಂಶುಪಾಲರೂ ಆದ ಶರಣ ಕುಮಾರರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಶಾಲಾ ಆಡಳಿತಾಧಿಕಾರಿ ವೀಣಾರಶ್ಮಿ ಎಮ್., ಭಟ್ಕಳದ ಹಿರಿಯ ಪತ್ರಕರ್ತರಾದ ರಾಧಾಕೃಷ್ಣ ಭಟ್, ಹಿಂದುಸ್ತಾನಿ ಗಾಯಕಿ ಶ್ರೀಮತಿ ತಾರಾ, ಉಪಪ್ರಾಂಶುಪಾಲರಾದ ರಾಮ ದೇವಾಡಿಗ, ಶಾಲಾ ಶಿಕ್ಷಕ-ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!