spot_img
Monday, April 6, 2026
spot_img

ರಾಜ್ಯ ಕಾಂಗ್ರೆಸ್‌ ಸರ್ಕಾರದ ಹಿಂದೂ ವಿರೋಧಿ ಹಾಗೂ ಜಿಹಾದಿ ಬಚಾವೋ ಮನಸ್ಥಿತಿಯ ಪ್ರದರ್ಶನ ಮಾಡಿದೆ : ಬಿಜೆಪಿ ಆಕ್ರೋಶ

ಜನಪ್ರತಿನಿಧಿ ವಾರ್ತೆ (ಬೆಂಗಳೂರು) : ಟಿಪ್ಪು- ಔರಂಗಜೇಬ್‌ – ತಲ್ವಾರ್‌ ಕಟೌಟ್‌ ಹಾಕಿದವರಿಗೆ ಸಮ್ಮಾನ – ಶ್ರೀ ರಾಮನ ಕಟೌಟ್‌ ಹಾಕಿದವರ ಬಂಧನ. ಇದು ರಾಜ್ಯ ಕಾಂಗ್ರೆಸ್‌ ಸರ್ಕಾರದ ಹಿಂದೂ ವಿರೋಧಿ ಹಾಗೂ ಜಿಹಾದಿ ಬಚಾವೋ ಮನಸ್ಥಿತಿಯ ಪ್ರದರ್ಶನ ಎಂದು ರಾಜ್ಯ ಬಿಜೆಪಿ ಕಾಂಗ್ರೆಸ್‌ ವಿರುದ್ಧ ಹರಿಹಾಯ್ದಿದೆ.

ರಾಜಾಜಿನಗರದಲ್ಲಿ ಅನುಮತಿ ಪಡೆದು ಶ್ರೀರಾಮನ ಕಟೌಟ್‌ ಹಾಕಿದರೂ, ಪೊಲೀಸರು ಕಟೌಟ್ ಹಾಕಿದವರ ವಿರುದ್ದ ಎಫ್.ಐ.ಆರ್‌ ದಾಖಲಿಸಿರುವ ವಿಚಾರಕ್ಕೆ ಕಾಂಗ್ರೆಸ್‌ ಆಡಳಿತದ ವಿರುದ್ಧ ತನ್ನ ಅಧಿಕೃತ ʼಎಕ್ಸ್‌ʼ  ಖಾತೆಯಲ್ಲಿ ಟೀಕೆ ಮಾಡಿದೆ.

ಸಿಎಂ ಸಿದ್ದರಾಮಯ್ಯ ಅವರೇ, ಗೃಹ ಸಚಿವ ಡಾ. ಪರಮೇಶ್ವರ ಅವರೇ, ಇಂತಹ ಲಕ್ಷಾಂತರ ಎಫ್.ಐ.ಆರ್‌ ಗಳನ್ನು ಹಾಕಿಸಿಕೊಂಡೇ ಹಿಂದೂ ಸಮಾಜ ಇಂದು ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಿಸಿದೆ.

ನೀವುಗಳು ಅಧಿಕಾರ ದುರುಪಯೋಗಪಡಿಸಿಕೊಂಡು ಕೇಸ್‌‌ಗಳನ್ನು ದಾಖಲಿಸಬಹುದು, ಆದರೆ ಹಿಂದೂಗಳಲ್ಲಿರುವ ರಾಮಭಕ್ತಿಯನ್ನು ಬೆದರಿಸಿ ದೂರಗೊಳಿಸುತ್ತೇವೆಂಬ ಭ್ರಮೆಯಿಂದ ಹೊರ ಬನ್ನಿ ಎಂದು ಹೇಳಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!