spot_img
Monday, April 6, 2026
spot_img

ರಾಮ ಮಂದಿರ : ಗರ್ಭಗುಡಿಯೊಳಗೆ ಶ್ರೀರಾಮ ಮೂರ್ತಿಯ ಪ್ರವೇಶ : ಇಂದು ಮೂರ್ತಿ ಪ್ರತಿಷ್ಠಾಪನೆ !?

ಜನಪ್ರತಿನಿಧಿ ವಾರ್ತೆ (ಅಯೋಧ್ಯೆ) : ಅಯೋಧ್ಯೆಯಲ್ಲಿ ಶ್ರೀರಾಮಮಂದಿರದ ಲೋಕಾರ್ಪಣೆಗೆ ಸಜ್ಜಾಗುತ್ತಿದ್ದು, ನಿರ್ಮಾಣಗೊಳ್ಳುತ್ತಿರುವ ದೇವಸ್ಥಾನದ ಒಳಗೆ ಶ್ರೀರಾಮ ಮೂರ್ತಿಯನ್ನು ಗರ್ಭಗುಡಿಯೊಳಗೆ ನಿನ್ನೆ(ಬುಧವಾರ) ರಾತ್ರಿ ಕ್ರೇನ್‌ ಮೂಲಕ ಮೂರ್ತಿಯನ್ನು ಗರ್ಭಗುಡಿಯೊಳಗೆ ತರಲಾಯಿತು.

ಮೂರ್ತಿ ಗರ್ಭಗುಡಿಯೊಳಗೆ ತರುವ ಸಂದರ್ಭದಲ್ಲಿ ವಿಶೇಷ ಪೂಜಾ ವಿಧಿವಿಧಾನಗಳು ನೆರವೇರಿದವು ಎಂದು ಅಂತರಾಷ್ಟ್ರೀಯ ʼಎನ್‌ಎನ್ಐʼ ವರದಿ ಮಾಡಿದೆ.

ಇಂದು (ಗುರುವಾರ) ರಾಮ ಮಂದಿರದ ಗರ್ಭಗುಡಿಯೊಳಗೆ ಪ್ರತಿಷ್ಠಾಪನೆ ಮಾಡುವ ಸಾಧ್ಯತೆ ಇದೆ ಎಂದು ಮಂದಿರ ನಿರ್ಮಾಣ ಸಮಿತಿಯ ಮುಖ್ಯಸ್ಥ ನೃಪೇಂದ್ರ ಮಿಶ್ರ ಮಾಹಿತಿ ನೀಡಿದ್ದಾರೆ.

ಇನ್ನು, ಮೈಸೂರು ಮೂಲದ ಶಿಲ್ಪಿ ಅರುಣ್‌ ಯೋಗಿರಾಜ್‌ ಕೆತ್ತಿರುವ ಕೃಷ್ಣ ಶಿಲೆಯ ಶ್ರೀರಾಮನ ಬಾಲ ಮೂರ್ತಿಯನ್ನು ಗರ್ಭಗುಡಿಯೊಳಗೆ ತರಲಾಯಿತು. 150-160 ಕೆ. ಜಿ ತೂಕ ಇರುವ ಈ ಮೂರ್ತಿಯನ್ನು ಹೂಗಳಿಂದ ಅಲಂಕರಿಸಿದ ಟ್ರಕ್‌ ಮೂಲಕ ಮೆರವಣಿಗೆಯ ಮೂಲಕ ದೇಗುಲದ ಆವರಣಕ್ಕೆ ತರಲಾಯಿತು. ದಾರಿ ಮಧ್ಯೆ ಹನುಮಾನ ಗಡಿಯಲ್ಲಿ ಕೆಲ ಹೊತ್ತು ತಂಗಿ, ಮೆರವಣಿಗೆ ಮುಂದುವರಿತು.

ಜನವರಿ 22 ರಂದು 12:20ರಿಂದ  ರಾಮ ಮಂದಿರದಲ್ಲಿ ಶ್ರೀರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾ ವಿಧಿವಿಧಾನಗಳು ನಡೆಯಲಿದ್ದು, ಪ್ರಾಣ ಪ್ರತಿಷ್ಠಾಪನೆ ಆದಮೇಲೆ ದೇವಸ್ಥಾನ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗಲಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!