spot_img
Monday, April 6, 2026
spot_img

ಕರ್ನಾಟಕ ಲೋಕಸೇವಾ ಆಯೋಗದಲ್ಲೂ ಹಿತಾಸಕ್ತಿಗಳ ಸಂಘರ್ಷ, ಸಾವಿರಾರು ನೇಮಕಾತಿಗಳ ಸ್ಥಿತಿ ಡೋಲಾಯಮಾನ : ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಕಿಡಿ

ಜನಪ್ರತಿನಿಧಿ ವಾರ್ತೆ (ಬೆಂಗಳೂರು) : ಕರ್ನಾಟಕ ಲೋಕಸೇವಾ ಆಯೋಗದಲ್ಲೂ ಹಿತಾಸಕ್ತಿಗಳ ಸಂಘರ್ಷ ಶುರುವಾಗಿದ್ದು ಸಾವಿರಾರು ನೇಮಕಾತಿಗಳ ಸ್ಥಿತಿ ಡೋಲಾಯಮಾನವಾಗಿದೆ ಎಂದು ವಿರೋಧ ಪಕ್ಷ ಬಿಜೆಪಿ ಆಡಳಿತರೂಢ  ಕಾಂಗ್ರೆಸ್‌ ವಿರುದ್ಧ ಹರಿಹಾಯ್ದಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣ ʼಎಕ್ಸ್‌ʼನಲ್ಲಿ ಪತ್ರಿಕಾ ವರದಿಯೊಂದನ್ನು ಉಲ್ಲೇಖಿಸಿ ಕಾಂಗ್ರೆಸ್‌ ವಿರುದ್ಧ ಟೀಕೆ ಮಾಡಿರುವ ಬಿಜೆಪಿ, ನೇಮಕಾತಿ‌ಗಳು ನಡೆಯುವಲ್ಲೆಲ್ಲವೂ ರಾಜ್ಯ ಕಾಂಗ್ರೆಸ್ ಬಂದಾಗಿನಿಂದ ಅಲ್ಲೋಲ ಕಲ್ಲೋಲಗಳೇ ನಡೆಯುತ್ತಿವೆ ಎಂದು ಟೀಕೆ ಮಾಡಿದೆ.

ಕೆಪಿಎಸ್‌ಸಿ ಒಳಗೂ ನಡೆಯುತ್ತಿರುವ ಜಟಾಪಟಿ ನೋಡಿದರೆ ಹಲೋ ಅಪ್ಪ ಎಂದು ಅಲ್ಲಿಗೂ ಫೋನ್ ಹೋದಂತಿದೆ. ಕೆಪಿಎಸ್‌ಸಿಯಲ್ಲೂ #ATMSarkara ಹೊಸ ಎಟಿಎಂ ತೆರೆದಿರುವುದು ಸ್ಪಷ್ಟವಾಗಿದೆ ಎಂದು ಆಕ್ರೋಶ ಹೊರಹಾಕಿದೆ.

ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಅಧ್ಯಕ್ಷರು ಹಾಗೂ ಕಾರ್ಯದರ್ಶಿ ತಿಕ್ಕಾಟ ವಿಕೋಪಕ್ಕೆ ಹೋಗಿದ್ದು, ಆಯೋಗದ ಅನುಮೋದನೆಗೆ ರವಾನಿಸಲಾಗಿದ್ದ ವಿವಿಧ ಇಲಾಖೆಗಳಿಗೆ ಸುಮಾರು ಒಂದು ಸಾವಿರ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿಯ ಕಡತವನ್ನು ಅಧ್ಯಕ್ಷರು ಹಿಂತಿರುಗಿಸಿದ್ದಾರೆ ಎಂಬ ವರದಿಯನ್ನು ಉಲ್ಲೇಖಿಸಿದ ಬಿಜೆಪಿ ಕಾಂಗ್ರೆಸ್‌ ಆಡಳಿತದ ವಿರುದ್ಧ ಕಿಡಿ ಕಾರಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!