spot_img
Monday, April 6, 2026
spot_img

ಸರ್ಕಾರಿ ಬಂಗಲೆಯನ್ನು ಈ ಕೂಡಲೆ ಖಾಲಿ ಮಾಡಲು ಮಹುವಾ ಮೊಯಿತ್ರಾಗೆ ಮತ್ತೊಮ್ಮೆ ನೋಟೀಸ್‌ ನೀಡಿದ ನಿರ್ದೇಶನಾಲಯ !

ಜನಪ್ರತಿನಿಧಿ ವಾರ್ತೆ (ನವ ದೆಹಲಿ) :  ಡಿಸೆಂಬರ್ 2023 ರಲ್ಲಿ ಲೋಕಸಭೆಯಿಂದ ಉಚ್ಚಾಟನೆಗೆ ಒಳಪಟ್ಟ ತೃಣಮೂಲ ಸಂಸದ ಮಹುವಾ ಮೊಯಿತ್ರಾ ಅವರು ತಮ್ಮ ಸರ್ಕಾರಿ ಬಂಗಲೆಯನ್ನು ತಕ್ಷಣವೇ ಖಾಲಿ ಮಾಡುವಂತೆ ಎಸ್ಟೇಟ್ ನಿರ್ದೇಶನಾಲಯ ಆದೇಶ ಹೊರಡಿಸಿದೆ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಮೂಲಗಳು ತಿಳಿಸಿವೆ.

ಈ ಹಿಂದೆ ಜನವರಿ 7 ರೊಳಗೆ ಮನೆಯನ್ನು ಖಾಲಿ ಮಾಡುವಂತೆ ಮಹುವಾ ಅವರನ್ನು ಕೇಳಲಾಗಿತ್ತು. ಜನವರಿ 8 ರಂದು, ಎಸ್ಟೇಟ್ ನಿರ್ದೇಶನಾಲಯ ತಮ್ಮ ಸರ್ಕಾರಿ ವಸತಿಗಳನ್ನು ಏಕೆ ಖಾಲಿ ಮಾಡಿಲ್ಲ ಎಂಬುದಕ್ಕೆ ಮೂರು ದಿನಗಳಲ್ಲಿ ಉತ್ತರವನ್ನು ಕೋರಿ ನೋಟಿಸ್ ನೀಡಿದ್ದರು. ಜನವರಿ 12ರಂದು ಆಕೆಗೆ ಮತ್ತೊಂದು ನೋಟಿಸ್ ಕೂಡ ಜಾರಿ ಮಾಡಲಾಗಿತ್ತು.

ಜನವರಿ 4 ರಂದು, ದೆಹಲಿ ಹೈಕೋರ್ಟ್ ಮೊಯಿತ್ರಾ ಅವರಿಗೆ ಮಂಜೂರು ಮಾಡಲಾದ ಸರ್ಕಾರಿ ವಸತಿಗಳನ್ನು ಬಳಸಲು ಅವಕಾಶ ನೀಡುವ ವಿನಂತಿಯೊಂದಿಗೆ DoE (Directorate of Estates) ಅನ್ನು ಸಂಪರ್ಕಿಸುವಂತೆ ಹೇಳಿತ್ತು.

ಪ್ರಶ್ನೆಗಾಗಿ ನಗದು ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಸಭೆಯಿಂದ ಉಚ್ಚಾಟನೆಗೊಂಡ ಬಳಿಕ ಮಹುವಾ ಮೊಯಿತ್ರಾ ಅವರಿಗೆ ಮಂಜೂರಾಗಿದ್ದ ಮನೆಯನ್ನು ಖಾಲಿ ಮಾಡುವಂತೆ ನೊಟೀಸ್‌ ನೀಡಿಲಾಗಿತ್ತು. ಈ ನೋಟಿಸ್​​​ ವಿರುದ್ಧ ಮಹುವಾ ಮೊಯಿತ್ರಾ ಅವರು ದೆಹಲಿ ಹೈಕೋರ್ಟ್​​​ ಮೊರೆ ಹೋಗಿದ್ದರು. ಈ ಅರ್ಜಿಯನ್ನು ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್​​​​​ ಅರ್ಜಿಯನ್ನು ವಜಾಗೊಳಿಸಿತ್ತು,.

ಜನವರಿ 7 ರೊಳಗೆ ಮನೆ ಖಾಲಿ ಮಾಡುವ ಸೂಚನೆಯನ್ನು ರದ್ದು ಮಾಡುವಂತೆ ಕೋರ್ಟ್​​​ ನಿರ್ದೇಶನ ನೀಡಬೇಕು ಎಂದು ಮಹುವಾ ಮನವಿಯನ್ನು ಸಲ್ಲಿಸಿದರು. ಈ ಅರ್ಜಿಯನ್ನು ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್​​​, ನಿಮ್ಮ ಮನವಿಯನ್ನು ಜನವರಿ 7 ರೊಳಗೆ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಸಲ್ಲಿಸಬೇಕು ಎಂದು ಹೇಳಿದೆ. ಜತೆಗೆ ಕಾನೂನಿನ ಪ್ರಕಾರ ಮಾತ್ರ ಮಹುವಾ ಮೊಯಿತ್ರಾ ಅವರನ್ನು ಸರ್ಕಾರಿ ಮನೆಯಿಂದ ಹೊರಹಾಕಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ನ್ಯಾಯಾಲಯವು ಸರ್ಕಾರಕ್ಕೆ ನಿರ್ದೇಶಿಸಿತು.

ತೆರವು ಮಾಡುವ ಮೊದಲು ನಿವಾಸಿಗಳಿಗೆ ನೋಟಿಸ್ ನೀಡುವುದನ್ನು ಕಾನೂನು ಕಡ್ಡಾಯಗೊಳಿಸುತ್ತದೆ ಮತ್ತು ಕಾನೂನಿನ ಪ್ರಕಾರ ಅರ್ಜಿದಾರರನ್ನು ಹೊರಹಾಕಲು ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅದು ಹೇಳಿದೆ.

ಮೊಯಿತ್ರಾ ಅವರು ಉದ್ಯಮಿ ದರ್ಶನ್ ಹಿರಾನಂದನಿ ಅವರಿಂದ ಉಡುಗೊರೆಗಳನ್ನು ಸ್ವೀಕರಿಸಿದರು ಮತ್ತು ಸಂಸತ್ತಿನ ವೆಬ್‌ಸೈಟ್‌ನ ಬಳಕೆದಾರರ ಐಡಿ ಮತ್ತು ಪಾಸ್‌ವರ್ಡ್ ಅನ್ನು ಅವರೊಂದಿಗೆ ಹಂಚಿಕೊಂಡ ಆರೋಪದಲ್ಲಿ ಕಳೆದ ವರ್ಷ ಡಿಸೆಂಬರ್ 8 ರಂದು “ಅನುಚಿತ ನಡವಳಿಕೆ” ಯಲ್ಲಿ ತಪ್ಪಿತಸ್ಥರೆಂದು ಪರಿಗಣಿಸಿ ಲೋಕಸಭೆಯಿಂದ ಹೊರಹಾಕಲ್ಪಟ್ಟರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!