spot_img
Saturday, May 23, 2026
spot_img

ರಾಮ, ಲಕ್ಷ್ಮಣ, ಸೀತೆ, ಆಂಜನೇಯರ ಮುದ್ರೆವುಳ್ಳ 200 ವರ್ಷಗಳ ಹಿಂದಿನ ನಾಣ್ಯ

ಕುಂದಾಪುರ: ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ಲೋಕಾರ್ಪಣೆಯಾಗುತ್ತಿರುವ ಸಂದರ್ಭದಲ್ಲಿ ವಿಶಿಷ್ಟ, ಅಪೂರ್ವ ವಸ್ತುಗಳ ಸಂಗ್ರಹಕಾರ ಗಂಗೊಳ್ಳಿಯ ಜಿ.ಬಿ.ಕಲೈಕಾರ್ ಸಂಗ್ರಹದಲ್ಲಿರುವ ಎರಡು ಶತಮಾನಗಳ ಹಿಂದಿನ ಪ್ರಾಚೀನವಾದ ರಾಮ, ಲಕ್ಷ್ಮಣ, ಸೀತೆ, ಆಂಜನೇಯರ ಪುರಾತನ ತಾಮ್ರದ ನಾಣ್ಯ ಎಲ್ಲರ ಗಮನ ಸೆಳೆಯುತ್ತಿದೆ.

ನಿವೃತ್ತ ಶಿರಸ್ತೇದಾರರಾಗಿರುವ ಭಾಸ್ಕರ ಕಲೈಕಾರ್ ಪ್ರವೃತ್ತಿಯಲ್ಲಿ ವಿಶಿಷ್ಟ, ಪ್ರಾಚೀನ ವಸ್ತುಗಳ, ನಾಣ್ಯಗಳ ಸಂಗ್ರಹಕಾರರಾಗಿದ್ದು, ಅನೇಕ ಸಭೆ ಸಮಾರಂಭಗಳಲ್ಲಿ ತಮ್ಮಲ್ಲಿರುವ ಪ್ರಾಚೀನ ವಸ್ತುಗಳನ್ನು, ನಾಣ್ಯಗಳನ್ನು ಹಾಗೂ ಇನ್ನಿತರ ವಸ್ತುಗಳನ್ನು ವಸ್ತು ಪ್ರದರ್ಶನದಲ್ಲಿರಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದರು. ತಾವು ದುಡಿದ ಬಹುಪಾಲನ್ನು ಇಂತಹ ವಸ್ತುಗಳ ಸಂಗ್ರಹಕ್ಕೆ ವಿನಿಯೋಗಿಸಿರುವ ಜಿ.ಬಿ.ಕಲೈಕಾರ್, ಧನ್ಯತಾ ಭಾವದಲ್ಲಿದ್ದಾರೆ. ಗಂಗೊಳ್ಳಿಯಲ್ಲಿರುವ ತಮ್ಮ ಮನೆಯ ಪ್ರಥಮ ಅಂತಸ್ತಿನಲ್ಲಿ ನಿರ್ಮಿಸಿರುವ ಮ್ಯೂಸಿಯಂನಲ್ಲಿ ತಾವು ಸಂಗ್ರಹಿಸಿದ ಅಪರೂಪದ ವಸ್ತುಗಳನ್ನು, ಪುರಾತನ ನಾಣ್ಯ, ಪ್ರಾಚೀನ ವಸ್ತುಗಳನ್ನು, ಗ್ರಾಮ್‌ಫೋನ್, ಟಿ.ವಿ., ರೇಡಿಯೋ, ಇತರ ದೇಶಗಳ ನೋಟುಗಳು, ಅಂಚೆ ಚೀಟಿಗಳನ್ನು ಉಚಿತ ಪ್ರದರ್ಶನಕ್ಕೆ ಇಟ್ಟಿದ್ದಾರೆ.

೧೮೧೯ನೇ ಇಸವಿಯ ಬ್ರಿಟಿಷ್ ಸರಕಾರದ ಅವಧಿಯಲ್ಲಿ ಬಳಕೆಯಲ್ಲಿದ್ದ ನಾಣ್ಯಗಳೂ ಸೇರಿದಂತೆ ಶ್ರೀ ರಾಮನ ಚಿತ್ರವಿರುವ ನಾಣ್ಯದ ಸಂಗ್ರಹ ಇವರಲ್ಲಿದೆ. ಶ್ರೀರಾಮ, ಸೀತೆ, ಲಕ್ಷ್ಮಣ ನಿಂತಿರುವ ಭಂಗಿಯಲ್ಲಿ ಹನುಮಂತ ಕುಳಿಯ ಭಂಗಿಯಲ್ಲಿರುವ ಉಬ್ಬು ಚಿತ್ರವಿರುವ ಈ ನಾಣ್ಯ ಗಮನ ಸೆಳೆಯುವಂತಿದೆ. ಕುಂದಾಪುರದ ಗುಜರಿ ಪಾಂಡು ಎಂಬುವರಿಂದ ಸುಮಾರು 30ವರ್ಷಗಳ ಹಿಂದೆ ಈ ನಾಣ್ಯವನ್ನು ಜಿ.ಬಿ.ಕಲೈಕಾರ್ ಖರೀದಿಸಿ ತಮ್ಮ ಸಂಗ್ರಹದಲ್ಲಿರಿಸಿಕೊಂಡಿದ್ದರು. ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ಲೋಕಾರ್ಪಣೆಯಾಗುತ್ತಿರುವ ಸಂದರ್ಭದಲ್ಲಿ ಇವರ ಸಂಗ್ರಹದಲ್ಲಿದ್ದ ಈ ನಾಣ್ಯ ಎಲ್ಲರ ಗಮನ ಸೆಳೆಯುತ್ತಿರುವುದು ಸುಳ್ಳಲ್ಲ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!