Sunday, September 8, 2024

ಬ್ರಹ್ಮಾವರ ಕ್ರಾಸ್ ಲ್ಯಾಂಡ್ ಕಾಲೇಜು: ಅಗ್ನಿಪಥ ಪ್ರೇರಣಾ ಕಾರ್ಯಕ್ರಮ

ಬ್ರಹ್ಮಾವರ : ಜವಾಬ್ದಾರಿಯನ್ನು ತೆಗೆದುಕೊಳ್ಳುವ ಮನಸ್ಸು ಎಲ್ಲರಲ್ಲೂ ಇರಬೇಕು. ಅವಕಾಶ ಎಲ್ಲರಿಗೂ ಸಿಗುತ್ತದೆ. ಆದರೆ ಅದನ್ನು ಬಳಸಿಕೊಳ್ಳಲು ಮುಂದೆ ಬರಬೇಕು. ಇಂತಹ ಮನಸ್ಸುಗಳನ್ನು ಯುವ ಜನತೆ ಕಟ್ಟಿಕೊಂಡಲ್ಲಿ ನಮ್ಮ ದೇಶ ಬಲಿಷ್ಟವಾಗುತ್ತದೆ ಎಂದು ಬಾರ್ಕೂರು ಹನಹಳ್ಳಿಯ ಕೋಟಿ ಚೆನ್ನಯ್ಯ ಅಗ್ನಿಪಥ್ ಸೇನಾ ತರಬೇತಿಯ ಮುಖ್ಯ ತರಬೇತುದಾರ ರವಿಚಂದ್ರ ಶೆಟ್ಟಿ ಹೇಳಿದರು.

ಬ್ರಹ್ಮಾವರ ಕ್ರಾಸ್‌ಲ್ಯಾಂಡ್ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಅಗ್ನಿಪಥ ಪ್ರೇರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸೇನೆಗೆ ಸೇರುವುದರಿಂದ ಆಗುವ ಅನುಕೂಲಗಳು, ಅನುಭವಗಳು, ಆತ್ಮಸಂತೃಪ್ತಿ, ಸರ್ಕಾರಿ ಉದ್ಯೋಗವನ್ನು ಗಿಟ್ಟಿಸಿಕೊಳ್ಳಲು ಯಾವ ರೀತಿ ಪರಿಶ್ರಮ ಪಡಬೇಕು, ತಯಾರಿ ಯಾವ ರೀತಿ ಇರಬೇಕೆಂದು ಸೇನೆಗೆ ಸೇರಲು ಇರಬೇಕಾದ ಅರ್ಹತೆ, ಅಲ್ಲಿನ ಅನುಭವಗಳ ಬಗ್ಗೆ ಅವರು ತಿಳಿಸಿದರು.

ನಿವೃತ್ತ ಯೋಧ ಹಾಗೂ ತರಬೇತುದಾರ ಕೃಷ್ಣಪ್ಪ ಪರ್ಕಳ ಮಾತನಾಡಿ ಜೀವನದಲ್ಲಿ ಗುರಿ, ಶಿಸ್ತು ಇರಬೇಕು. ಮೊಬೈಲ್ ಗೀಳಿನಿಂದ ಹೊರಬಂದು ಜೀವನದಲ್ಲಿ ಏನಾದರೂ ಸಾಧಿಸುವ ಛಲವನ್ನು ಹೊಂದುವಂತೆ ಮನಸ್ಸನ್ನು ಬದಲಾಯಿಸಕೊಳ್ಳಬೇಕು. ಪೋಷಕರು ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದರು.
ಪದವಿ ಪೂರ್ವ ರಾಷ್ಟ್ರೀಯ ಸೇವಾ ಯೋಜನೆಯ ಮಂಗಳೂರು ವಿಭಾಗದ ವಿಭಾಗಾಧಿಕಾರಿ ಸವಿತಾ ಎರ್ಮಾಳ್ ಉಪಸ್ಥಿತರಿದ್ದರು.

ಇದೇ ಸಂದರ್ಭ ಸಂಪನ್ಮೂಲ ವ್ಯಕ್ತಿಗಳನ್ನು ಅವರ ಸೇವೆಯ ಗೌರವಾರ್ಥ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಕಾಲೇಜಿನ ಪ್ರಾಂಶುಪಾಲ ಜಾನ್ಸನ್ ಜೇಕಬ್ ಅಧ್ಯಕ್ಷತೆ ವಹಿಸಿದ್ದರು.
ಉಪನ್ಯಾಸಕರಿಯರಾದ ಜ್ಯೋತಿ ಸ್ವಾಗತಿಸಿದರು. ಮಮತಾ ವಂದಿಸಿದರು. ಸರಿತಾ ಕಾರ್ಯಕ್ರಮ ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!