Sunday, September 8, 2024

ಸನ್ಮಾರ್ಗದಲ್ಲಿ ಸಮಾಜವನ್ನು ನಡೆಸುವ ಜವಾಬ್ಧಾರಿ ನಮ್ಮೆಲ್ಲರ ಜವಾಬ್ಧಾರಿ: ನರೇಂದ್ರ ಕುಮಾರ್ ಕೋಟ

ಕುಂದಾಪುರ: ಮಕ್ಕಳಿಗೆ ಕಲೆಯ ಬೆಳಕು ತೋರಿದರೆ ಸಮಾಜ ಬೆಳಗುತ್ತದೆ. ಜೊತೆಗೆ ಅವರಿಗಷ್ಟು ಅವಕಾಶ ದೊರೆತರೆ ಕಲಿತ ಕಲೆಗೆ ಸಾರ್ಥಕ್ಯ ದೊರೆತ ಹಾಗೆ. ದೇವರಂತಿರುವ ಮಕ್ಕಳಿಗೆ ಅವಕಾಶ ಕಲ್ಪಿಸಿದರೆ ಮಕ್ಕಳ ಭವಿಷ್ಯ ಭವಿತವ್ಯವಾಗಬೇಕು. ಸನ್ಮಾರ್ಗದಲ್ಲಿ ಸಮಾಜವನ್ನು ಕೊಂಡೊಯ್ಯುವ ಜವಾಬ್ಧಾರಿ ಎಲ್ಲರ ಮೇಲಿದೆ. ಇಂತಹ ಕಲಾ ಪ್ರಸ್ತುತಿಯ ಮೂಲಕ ಒಂದಷ್ಟು ಹೊತ್ತು ಕುಳಿತುಕೊಳ್ಳುವ, ಕಲೆಯನ್ನು ಆಸ್ವಾದಿಸುವ ಅವಕಾಶ ಲಭ್ಯವಾಗುತ್ತದೆ ಎಂದು ಕೋಟದ ಸಾಂಸ್ಕೃತಿಕ ರಾಯಭಾರಿ ನರೇಂದ್ರಕುಮಾರ್ ಕೋಟ ಅಭಿಪ್ರಾಯಪಟ್ಟರು.

ಕೋಟದ ಕಾರಂತ ಥೀಂಪಾರ್ಕನಲ್ಲಿ ತಿಂಗಳ ಸಡಗರ- ಕಾರಂತ ಬಾಲ ಪುರಸ್ಕಾರ- ಸಂವಾದ ಕಾರ್ಯಕ್ರಮದಲ್ಲಿ ಕೊಮೆ ತೆಕ್ಕಟ್ಟೆಯ ಯಶಸ್ವಿ ಕಲಾವೃಂದದ ಬಾಲ ಕಲಾವಿದರು ಯಕ್ಷ-ಗಾನ-ವೈಭವವನ್ನು ಪ್ರಸ್ತುತಿ ಪಡಿಸಿದಾಗ ಚಿಣ್ಣರನ್ನು ಗೌರವಿಸಿ ಮಾತನ್ನಾಡಿದರು.

ಇದೇ ಸಂದರ್ಭದಲ್ಲಿ ಯಶಸ್ವಿ ಕಲಾವೃಂದದ ಪುಟಾಣಿ ವಿ.ಬಿ. ಪರಿಣಿತ ವೈದ್ಯಳಿಗೆ ಖ್ಯಾತ ಸಾಹಿತಿ ಬಿ. ಆರ್. ಲಕ್ಷ್ಮಣ್‌ರಾವ್ ಬಾಲ ಪುರಸ್ಕಾರ ನೀಡಿ ಗೌರವಿಸಿದರು. ಮಾಜಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೆ. ಸತೀಶ್ ಕುಂದರ್, ಸಾಂಸ್ಕೃತಿಕ ಚಿಂತಕರಾದ ಶ್ರೀಮತಿ ಪೂರ್ಣಿಮಾ ಸುರೇಶ್ ಉಪಸ್ಥಿತರಿದ್ದರು.

ಬಳಿಕ ಯಶಸ್ವೀ ಕಲಾವೃಂದದ ಬಾಲ ಕಲಾವಿದರಿಂದ ಯಕ್ಷ ಗಾನ ವೈಭವ ಕಾರ್ಯಕ್ರಮ ರಂಗದಲ್ಲಿ ಪ್ರಸ್ತುತಿಗೊಂಡಿತು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!