spot_img
Monday, April 27, 2026
spot_img

ಲಿಖಿತಾ ಶೆಟ್ಟಿ ಬೂದಾಡಿ ಇವರಿಗೆ ‘ಕನಸು ಕಾರ್ತಿಕ್ ರಂಗ ಪುರಸ್ಕಾರ’

ಕುಂದಾಪುರ: ಸಾಕಷ್ಟು ವರ್ಷಗಳ ಕಾಲ ಅರೆಹೊಳೆ ಪ್ರತಿಷ್ಠಾನದ ವ್ಯವಸ್ಥಾಪಕರಾಗಿದ್ದು, ಮಂದಾರ ಬ್ರಹ್ಮಾವರ, ರಂಗಪಯಣ ಬೆಂಗಳೂರು ಹಾಗೂ ಅರೆಹೊಳೆ ಪ್ರತಿಷ್ಠಾನದ ಕಲಾ ತಂಡಗಳಲ್ಲಿ ಪ್ರದಾನ ಕಲಾವಿದರಾಗಿ ಮತ್ತು ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಾ ಕಳೆದ ವರ್ಷ ಜನವರಿಯಂದು ನಿಧನರಾದ ಯುವ ರಂಗ ಕಲಾವಿದ ಕಾರ್ತಿಕ್ ಬ್ರಹ್ಮಾವರ, ಇವರ ನೆನೆಪಿನಲ್ಲಿ ಅರೆಹೊಳೆ ಪ್ರತಿಷ್ಠಾನವು ಈ ವರ್ಷದಿಂದ ಪ್ರತೀ ವರ್ಷ ‘ಕನಸು ಕಾರ್ತಿಕ್ ಯುವ ರಂಗ ಪುರಸ್ಕಾರ‘ವನ್ನು ನೀಡುತ್ತಿದೆ.

2023ನೇ ಸಾಲಿನ ಈ ಪ್ರಶಸ್ತಿಗೆ ಕುಂದಾಪುರ ಕನ್ನಡದ ಕಾರ್ಯಕ್ರಮಗಳ ಮೂಲಕ ಮನೆಮಾತಾಗಿರುವ ಯುವ ಕಲಾವಿದೆ, ಬರಹಗಾರ್ತಿ, ರಂಗಭೂಮಿ, ಚಲನಚಿತ್ರ ಕಲಾವಿದೆ ಲಿಖಿತಾ ಶೆಟ್ಟಿ ಬೂದಾಡಿ ಇವರನ್ನು ಆಯ್ಕೆ ಮಾಡಲಾಗಿದೆ ಎಂದು ಅರೆಹೊಳೆ ಪ್ರತಿಷ್ಠಾನದ ಗೌರವಾಧ್ಯಕ್ಷ ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡೈಜಿವರ್ಲ್ಡ್ ವಾಹಿನಿಯ ‘ಚಂಯ್ಕ್ ಪಂಯ್ಕ್’ ಕಾರ್ಯಕ್ರಮದ ಮೂಲಕ ಜನಪ್ರಿಯರಾಗಿರುವ ಲಿಖಿತಾ ಶೆಟ್ಟಿ ಬೂದಾಡಿ, ತನ್ನ ಸಹಕಲಾವಿದರೊಂದಿಗೆ ತನ್ನದೇ ಆದ ತಂಡವನ್ನು ಕಟ್ಟಿಕೊಂಡು ಕುಂದಾಪುರ ಕನ್ನಡದ ಅನೇಕ ಕಾರ್ಯಕ್ರಮಗಳನ್ನ ನೀಡುತ್ತಿದ್ದು, ನಾಟಕದಲ್ಲಿಯೂ ನಟಿಸಿರುವ ಇವರು, ಬರಹಗಾರ್ತಿಯೂ ಆಗಿದ್ದಾರೆ. ಕಾರ್ತಿಕ್ ಬ್ರಹ್ಮಾವರ್ ಜೊತೆಗೆ ಸಹ ಇವರು ‘ಚಂಯ್ಕ್ ಪಂಯ್ಕ್’ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದರು.

ಇದನ್ನೆಲ್ಲಾ ಗುರುತಿಸಿ ಇವರಿಗೆ ೨೦೨೩ನೇ ಸಾಲಿನ ಕನಸು ಕಾರ್ತಿಕ್ ಯುವ ರಂಗ ಪುರಸ್ಕಾರ’ವನ್ನು, ಡಿಸೆಂಬರ್ 3-2023ರಂದು ಅರೆಹೊಳೆಯ ಡಾ.ಹಂದಟ್ಟು ಹರೀಶ್ ಹಂದೆ ರಂಗ ಮಂದಿರದಲ್ಲಿ ನಡೆಯಲಿರುವ ತ್ರಿದಿನ ನಾಟಕೋತ್ಸವದ ಮೊದಲ ದಿನದಂದು ಪ್ರದಾನಿಸಲಾಗುವುದು. ಪ್ರಶಸ್ತಿಯು ಪ್ರಶಸ್ತಿ ಪತ್ರ, ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ ಎಂದು ಪ್ರಕಟಣೆ ತಿಳಿಸಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!