Sunday, September 8, 2024

ತೇಜಸ್‌ ನಮ್ಮ ರಾಷ್ಟ್ರೀಯ ಸಾಮರ್ಥ್ಯದ ಬಗ್ಗೆ ನನಗೆ ಹೊಸ ಆಶಾ ಮನೋಭಾವ ಮೂಡಿಸಿದೆ : ಮೋದಿ  

ಜನಪ್ರತಿನಿಧಿ ವಾರ್ತೆ (ಬೆಂಗಳೂರು) : ಬೆಂಗಳೂರಿನ ಎಚ್​​ಎಎಲ್​ನಲ್ಲಿ (HAL) ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ರಾಜಧಾನಿ ಬೆಂಗಳೂರಿಗೆ ಆಗಮಿಸಿದ್ದು, ರಕ್ಷಣಾ ವಲಯದಲ್ಲಿ ಮೇಕ್​ ಇನ್​ ಇಂಡಿಯಾ ಸಾಧನೆಯ ಶಿಖರದಲ್ಲಿದೆ. ಯಾಕೆಂದರೆ 2022-23 ಭಾರತದ ರಕ್ಷಣಾ ರಫ್ತು 15,920 ಕೋಟಿ ರೂಪಾಯಿ ಆಗಿದೆ. ಇದಕ್ಕೆ ಪ್ರಮುಖ ಕಾರಣ ತೇಜಸ್​​ ಲಘುಯುದ್ಧ ವಿಮಾನಗಳಿಗೆ ವಿದೇಶಗಳಲ್ಲೂ ಬೇಡಿಕೆ ಹೆಚ್ಚಾಗಿರೋದು. ಈಗಾಗಲೇ ಅಮೆರಿಕದ ಜೆಇ ಏರೋಸ್ಪೇಸ್ ಹಾಗೂ ಎಚ್​​ಎಎಲ್​ ಜಂಟಿ ಉತ್ಪಾದನೆ ಒಪ್ಪಂದ ಮಾಡಿಕೊಂಡಿದ್ದು, ಉತ್ಪಾದನೆಯೂ ಶುರುವಾಗಿದ್ದು, ಇವನ್ನೆಲ್ಲಾ ಖುದ್ದಾಗಿ ಪರಿಶೀಲನೆ ಮಾಡಿದ್ದಾರೆ.

ತೇಜಸ್‌ ಯುಧ್ದ ವಿಮಾನದಲ್ಲಿ ಪ್ರಧಾನಿ ಮೋದಿ ಒಂದು ಪ್ರಯಾಣ ಮಾಡಿದ ತಮ್ಮ ಸಂತೋಷವನ್ನು ಅವರು ತಮ್ಮ ಅಧಿಕೃತ ʼಎಕ್ಸ್‌ʼ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ. “ತೇಜಸ್‌ ನಲ್ಲಿನ ಒಂದು ಪಯಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಈ ಅನುಭವವು ವಿಸ್ಮಯಕಾರಿಯಾಗಿದೆ. ಇದು ನಮ್ಮ ದೇಶದ ಸ್ಥಳೀಯ ಸಾಮರ್ಥ್ಯಗಳಲ್ಲಿ ನನ್ನ ವಿಶ್ವಾಸವನ್ನು ಗಣನೀಯವಾಗಿ ಹೆಚ್ಚಿಸಿತು ಮತ್ತು ನಮ್ಮ ರಾಷ್ಟ್ರೀಯ ಸಾಮರ್ಥ್ಯದ ಬಗ್ಗೆ ನನಗೆ ಹೊಸ ಹೆಮ್ಮೆ ಮತ್ತು ಆಶಾ ಮನೋಭಾವವನ್ನು ಮೂಡಿಸಿದೆ” ಎಂದು ಅವರು ಬರೆದುಕೊಂಡಿದ್ದಾರೆ.

ತೇಜಸ್‌ನಲ್ಲಿ ಪ್ರಧಾನಿ ಮೋದಿ ಪೋಟೊಘೇ ಫೋಸ್‌ ಕೊಟ್ಟಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!