spot_img
Monday, April 27, 2026
spot_img

ನರೇಂದ್ರ ಮೋದಿ ಬೆಂಗಳೂರಿಗೆ ಆಗಮನ | ಕರ್ನಾಟಕಕ್ಕೆ ಕೊಡಬೇಕಾದ ಬರ ಪರಿಹಾರವನ್ನು ತಂದಿದ್ದೀರಾ? : ಕಾಂಗ್ರೆಸ್‌ ಪ್ರಶ್ನೆ

ಜನಪ್ರತಿನಿಧಿ ವಾರ್ತೆ (ಬೆಂಗಳೂರು) : ಬೆಂಗಳೂರಿನ ಎಚ್​​ಎಎಲ್​ನಲ್ಲಿ (HAL) ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ರಾಜಧಾನಿ ಬೆಂಗಳೂರಿಗೆ ಆಗಮಿಸಿದ್ದಾರೆ.

ರಕ್ಷಣಾ ವಲಯದಲ್ಲಿ ಮೇಕ್​ ಇನ್​ ಇಂಡಿಯಾ ಸಾಧನೆಯ ಶಿಖರದಲ್ಲಿದೆ. ಯಾಕೆಂದರೆ 2022-23 ಭಾರತದ ರಕ್ಷಣಾ ರಫ್ತು 15,920 ಕೋಟಿ ರೂಪಾಯಿ ಆಗಿದೆ. ಇದಕ್ಕೆ ಪ್ರಮುಖ ಕಾರಣ ತೇಜಸ್​​ ಲಘುಯುದ್ಧ ವಿಮಾನಗಳಿಗೆ ವಿದೇಶಗಳಲ್ಲೂ ಬೇಡಿಕೆ ಹೆಚ್ಚಾಗಿರೋದು. ಈಗಾಗಲೇ ಅಮೆರಿಕದ ಜೆಇ ಏರೋಸ್ಪೇಸ್ ಹಾಗೂ ಎಚ್​​ಎಎಲ್​ ಜಂಟಿ ಉತ್ಪಾದನೆ ಒಪ್ಪಂದ ಮಾಡಿಕೊಂಡಿದ್ದು, ಉತ್ಪಾದನೆಯೂ ಶುರುವಾಗಿದ್ದು, ಇವನ್ನೆಲ್ಲಾ ಖುದ್ದಾಗಿ ಪರಿಶೀಲನೆ ಮಾಡಲು ಇಂದು(ಶನಿವಾರ) ಹಿಂದೂಸ್ತಾನ್​ ಏರೋನಾಟಿಕ್ಸ್​​ ಲಿಮಿಟೆಡ್​ಗೆ ಪ್ರಧಾನಮಂತ್ರಿಗಳು ಬಂದಿದ್ದು, ಇದರ ಜೊತೆಗೆ ಸುಖೋಯ್​​-30 ಲಘು ಯುದ್ಧ ವಿಮಾನಗಳು, MKI ಹಾಗೂ LCA ವಿಮಾನಗಳ ಉತ್ಪಾದನೆಯನ್ನೂ ಪರಿಶೀಲಿಸಿದ್ದಾರೆ. ಹಾಗೇ ALH-ಧ್ರುವ, ಚೇತಕ್, ಚೀಟಲ್, LCH ಹೆಲಿಕಾಪ್ಟರ್‌ಉತ್ಪಾದನೆ ಹೇಗಿದೆ? ರಿಪೇರಿ ಕೆಲಸ, ಮಿರಾಜ್​​, ಜಾಗ್ವಾರ್​ ಅಪ್​ಗ್ರೇಡ್​​ಗಳನ್ನೂ ಪರಿಶೀಲನೆ ನನಡೆಸಿದ್ದಾರೆ.

ಬೆಂಗಳೂರಿಗೆ ಆಗಮಿಸಿದ ನರೆಂದ್ರ ಮೋದಿಯನ್ನು ರಾಜ್ಯ ಕಾಂಗ್ರೆಸ್‌ ತನ್ನ ಅಧಿಕೃತ ಸಾಮಾಜಿಕ ಜಾಲತಾಣ ʼಎಕ್ಸ್‌ʼ ನಲ್ಲಿ ಪ್ರಶ್ನಿಸಿದ್ದು, ಮಧ್ಯಪ್ರದೇಶ, ರಾಜಸ್ಥಾನಗಳ ಚುನಾವಣೆ ಪ್ರಚಾರ ಮುಗಿಸಿ ಸದ್ದಿಲ್ಲದೆ ಬೆಂಗಳೂರಿಗೆ ಬಂದಿರುವ ಮೋದಿ  ಅವರೇ, ಕರ್ನಾಟಕಕ್ಕೆ ಕೊಡಬೇಕಾದ ಬರ ಪರಿಹಾರವನ್ನು ತಂದಿದ್ದೀರಾ? ನರೇಗಾ ಬಾಕಿ ಹಣ ತಂದಿದ್ದೀರಾ? ಕೇಂದ್ರ ಯೋಜನೆಗಳಿಗೆ ನಯಾಪೈಸೆ ಅನುದಾನ ಬಿಡುಗಡೆಯಾಗಿಲ್ಲ, ಆ ಹಣ ತಂದಿದ್ದೀರಾ? ತೆಲಂಗಾಣದ ಚುನಾವಣಾ ಪ್ರಚಾರಕ್ಕೆ ಹೋಗುವ ಆತುರದಲ್ಲಿ ನಿಮ್ಮ ಜವಾಬ್ದಾರಿಯನ್ನು ಮರೆತು ಬಂದಿರಾ?! ಎಂದು ಕೇಳಿದೆ.

ಇನ್ನು, ಚುನಾವಣೆ ಸಂದರ್ಭದಲ್ಲಿ ಕನ್ನಡಿಗರ ಮೇಲೆ ಉಕ್ಕಿ ಹರಿಯುವ ನಿಮ್ಮ ಪ್ರೀತಿ ಚುನಾವಣೆಯ ನಂತರ ಮಾಯವಾಗಿರುವುದೇಕೆ? ಎಂದು ಕೇಳುವುದರ ಮೂಲಕ ಮೋದಿಯನ್ನು ಕಾಂಗ್ರೆಸ್‌ ಟೀಕೆ ಮಾಡಿದೆ.  

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!