Sunday, September 8, 2024

ʼಬೆಂಗಳೂರು ಕಂಬಳ ನಮ್ಮ ಕಂಬಳʼಕ್ಕೆ ವಿದ್ಯುಕ್ತ ಚಾಲನೆ : ಸಭಾ ಕಾರ್ಯಕ್ರಮದಲ್ಲಿ ಎದ್ದುಕಂಡ ಸಿಎಂ ಸಿದ್ದರಾಮಯ್ಯ ಅನುಪಸ್ಥಿತಿ

ಜನಪ್ರತಿನಿಧಿ ವಾರ್ತೆ (ಬೆಂಗಳೂರು ) : ಇಲ್ಲಿನಅರಮನೆಯ ಮೈದಾನದಲ್ಲಿ ಆಯೋಜಿಸಿದ ಡಾ. ಪುನೀತ್‌ ರಾಜ್‌ ಕುಮಾರ್‌ ವೇದಿಕೆಯಲ್ಲಿ ʼಬೆಂಗಳೂರು ಕಂಬಳ ನಮ್ಮ ಕಂಬಳʼ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ಡಾ. ಪುನೀತ್‌ ಕುಮಾರ್‌ ಅವರ ಪತ್ನಿ ಅಶ್ವಿನಿ ಪುನೀತ್‌ ರಾಜ್‌ ಕುಮಾರ್ ಕಂಬಳದ ಜೋಡುಕರೆ (ಟ್ರ್ಯಾಕ್‌) ʼರಾಜಾ – ಮಹಾರಾಜʼ ವನ್ನು  ಜ್ಯೋತಿ ಬೆಳಗಿಸುವುದರ ಮೂಲಕ ಕಂಬಳಕ್ಕೆ ವಿದ್ಯುಕ್ತ ಚಾಲನೆ ನೀಡಿದರು.  ಉದ್ಘಾಟನೆಯಲ್ಲಿ ಕಹಳೆ, ಶಂಖ, ಜಾಗಟೆ, ಚಂಡೆ ವಾದ್ಯಗಳು ಮತ್ತಷ್ಟ ರಂಗು ಹೆಚ್ಚಿಸಿದ್ದವು. ವಿಶೇಷವಾಗಿ ಗಂಗಾ ಮಾತೆಗೆ ಗಂಗಾರತಿ ಮಾಡಿ ಕಂಬಳ ಯಶಸ್ಸಿಗೆ ಪ್ರಾರ್ಥನೆ ಸಲ್ಲಿಸಲಾಯಿತು.

ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ, ಬೆಂಗಳೂರು ಕಂಬಳ ನಮ್ಮ ಕಂಬಳ ಯಶಸ್ವಿಯಾಗಲಿ ಎಂದು ಹಾರೈಸಿದರು.

ಸಭಾ ಕಾರ್ಯಕ್ರಮವನ್ನು ವಿಶೇಷವಾಗಿ ಯಕ್ಷಗಾನದ ಗಣಪತಿ ಸ್ತುತಿಯೊಂದಿಗೆ ಆರಂಭಿಸಲಾಯಿತು. ಬಡಗುತಿಟ್ಟಿನ ಖ್ಯಾತ ಭಾಗವತ ಸುರೇಶ್‌ ಶೆಟ್ಟಿ, ಶಂಕರನಾರಾಣ ಮತ್ತು ತಂಡ ಗಣಪತಿ ಸ್ತುತಿಯೊಂದಿಗೆ ಪ್ರಾರ್ಥಿಸಿದರು.

ಸಭಾ ಕಾರ್ಯಕ್ರಮದಲ್ಲಿ ಕಂಬಳ ಸಮಿತಿಯ ಅಧ್ಯಕ್ಷ, ಶಾಸಕ ಅಶೋಕ್‌ ರೈ, ಗೌರವಾಧ್ಯಕ್ಷ ಪ್ರಕಾಶ್‌ ಶೆಟ್ಟಿ, ಸಂಗೀತ ನಿರ್ದೇಶಕ ಗುರುಕಿರಣ್‌, ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ, ಉಡುಪಿ ಜಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ, ಬೆಂಗಳೂರು ಕಂಬಳ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸಭಾಕಾರ್ಯಕ್ರಮದಲ್ಲಿ ಜಮ್ಮು ಮತ್ತು ಕಾಶ್ಮೀರ ರಜೌರಿ ಜಿಲ್ಲೆಯಲ್ಲಿ ಉಗ್ರಗಾಮಿಗಳ ಗುಂಡಿನ ಕಾಳಗದಲ್ ಹುತಾತ್ಮರಾಗ ಕನ್ನಡಿಗ ಯೋಧ ಪ್ರಾಂಜಲ್‌ ಅವರಿಗೆ ಮೌನ ಪ್ರಾರ್ಥನೆ ಸಲ್ಲಿಸಿದರು.  

ಸಭಾ ಕಾರ್ಯಕ್ರಮದ ಉದ್ಘಾಟನೆ ಮಾಡಬೇಕಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು.

ದೈವ ದೇವರುಗಳ ಆರಾಧನೆ ಮೂಲಕ ಆಚರಣೆಗೆ ಬಂದ ಕಂಬಳ

ದಕ್ಷಿಣ ಕನ್ನಡದಲ್ಲಿ ಈ ಕಂಬಳದಲ್ಲಿ ತಲೆತಲೆಮಾರಿನ ಇತಿಹಾಸವಿದೆ.  ಕರಾವಳಿ ಭಾಗದ ದೈವ ದೇವರುಗಳ ಆರಾಧನೆ ಮೂಲಕ ಆಚರಣೆಗೆ ಬಂದ ಕಂಬಳಕ್ಕೆ ಸುಮಾರು ಏಳುನೂರು ವರ್ಷಗಳ ಇತಿಹಾಸವಿದೆ. ೧೭೮ ಜೊತೆ ಕೋಂಗಳನ್ನು ಸ್ಪರ್ಧೆಗೆ ಆಯ್ಕೆ ಮಾಡಿಕೊಳ್ಳಲಾಗಿದೆ. ಈಗ ಬೆಂಗಳೂರಿಗೂ ವಿಸ್ತರಿಸುವ ಪ್ರಾಮಾಣಿಕ ಪ್ರಯತ್ನ ನಮ್ಮದು.

-ಅಶೋಕ್‌ ರೈ

ಶಾಸಕರು ಹಾಗೂ ಅಧ್ಯಕ್ಷರು, ಬೆಂಗಳೂರು ಕಂಬಳ ಸಮಿತಿಯ

ಬೆಂಗಳೂರು ಕಂಬಳದ ವಿಶೇಷತೆ : ಕಂಬಳ ವೀಕ್ಷಿಸಲು ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿತ್ತು. ಒಟ್ಟು ಎರಡು ದಿನಗಳ ಕಾಲ ನಡೆಯುವ ಬೆಂಗಳೂರು ಕಂಬಳದಲ್ಲಿ ಸುಮಾರು ಏಳು ಸಾವಿರ ಜನರು ಕೂತು ಕಂಬಳವನ್ನು ವೀಕ್ಷಿಸಲು ಗ್ಯಾಲರಿಯನ್ನು  ಕರೆಗಳ ಇಕ್ಕೆಲಗಳಲ್ಲಿ ನಿರ್ಮಾಣ ಮಾಡಲಾಗಿದೆ. ಸುಮಾರು ಒಂದುವರೆ ಲಕ್ಷ ಜನರಿಗೆ ʼಕರಾವಳಿʼ ಶೈಲಿಯ ಊಟದ ವ್ಯವಸ್ಥೆಯನ್ನು ಕಲ್ಪಸಲಾಗಿದೆ. ʼಬೆಂಗಳೂರು ಕಂಬಳ ನಮ್ಮ ಕಂಬಳʼದಲ್ಲಿ ಸುಮಾರು ೧೮೦ಕ್ಕೂ ಹೆಚ್ಚು ಮಳಿಗೆಗಳಲ್ಲಿ ಹಲಸಿನ ಹಪ್ಪಳದಿಂದ ಕೋರಿ (ಕೋಳಿ) ರೊಟ್ಟಿಯವರೆಗೆ ಕರಾವಳಿಯ ಸಾಂಪ್ರದಾಯಿಕ ತಿಂಡಿ ತಿನಿಸುಗಳು ಈ ಮಳಿಗೆಗಳಲ್ಲಿ ವಿಶೇಷ ಆಕರ್ಷಣೆ ಆಗಿದ್ದವು. ಭೂತದ ಅಣಿ ಸೇರಿದಂತೆ ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸಲು ವಸ್ತು ಪ್ರದರ್ಶನವೂ ʼಕಂಬಳʼದಲ್ಲಿ ಜನರನ್ನು ಸೆಳೆಯಿತು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!