spot_img
Tuesday, April 28, 2026
spot_img

ಭಂಡಾರ್ಕಾರ್ಸ್: ಬಿ.ಬಿ.ಎ ವಿಭಾಗದಿಂದ ಬ್ರ್ಯಾಂಡ್ ವಿಸ್ಟಾ ವ್ಯಾಪಾರ ಪ್ರದರ್ಶನ

ಕುಂದಾಪುರ ಭಂಡಾರ್ಕಾರ್ಸ್ ಪದವಿ ಕಾಲೇಜಿನ ಬಿಸಿನೆಸ್ ಮ್ಯಾನೇಜಮೆಂಟ್ ವಿಭಾಗದ ಆಶ್ರಯದಲ್ಲಿ ಒಂದು ದಿನದ ಆರಂಭ -23 ಕಾರ್ಯಕ್ರಮದಡಿ “ಬ್ರ್ಯಾಂಡ್ ವಿಸ್ಟಾ” ಪ್ರದರ್ಶನ ಮತ್ತು ವ್ಯಾಪಾರ ಮೇಳ ನಡೆಯಿತು.

ಭಂಡಾರ್ಕಾರ್ಸ್ ಕಾಲೇಜಿನ ವಿಶ್ವಸ್ಥ ಮಂಡಳಿಯ ಹಿರಿಯ ಸದಸ್ಯರಾದ ಕೆ. ಶಾಂತಾರಾಮ್ ಪ್ರಭು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಇಂತಹ ಪಾಠಪೂರಕ ಸೃಜನಶೀಲ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಹೊಸ ಉತ್ಸಾಹವನ್ನು ತುಂಬುತ್ತದೆ. ಪ್ರಾಯೋಗಿಕವಾಗಿ ಕಲಿಯಲು ಸಾಕಷ್ಟು ಅವಕಾಶಗಳನ್ನು ಒದಗಿಸುತ್ತದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮೋದಿಕೇರ್ ಇದರ ಗ್ಲೋಬಲ್ ರೆಡ್ ಡೈಮಂಡ್ ನಿರ್ದೇಶಕರಾದ ರವೀಂದ್ರ ಶಿರಿಯಾನ್ ಮಾತನಾಡಿ ತಮ್ಮ ಅನುಭವವನ್ನು ಹಂಚಿಕೊಂಡರು. ಒಬ್ಬ ಯಶಸ್ವಿ ವ್ಯಕ್ತಿಯಾಗಿ ರೂಪುಗೊಳ್ಳಲು ಪಡಬೇಕಾದ ನಿಷ್ಠೆ ಮತ್ತು ಶ್ರಮ ಆಶಯಗಳಲ್ಲಿ ತಾನು ಕಂಡುಕೊಂಡ ಅನುಭವವನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಭಂಡಾರ್ಕಾರ್ಸ್ ಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯರಾದ ರಾಜೇಂದ್ರ ತೋಳಾರ್, ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಶುಭಕರಾಚಾರಿ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ.ಎಂ.ಗೊಂಡ ಬಿಸಿನೆಸ್ ಮ್ಯಾನೇಜಮೆಂಟ್ ವಿಭಾಗದ ಉಪನ್ಯಾಸಕ ಪ್ರೊ.ಪ್ರಶಾಂತ್ ಹೆಗ್ಡೆ ಉಪಸ್ಥಿತರಿದ್ದರು.

ಬಿಸಿನೆಸ್ ಮ್ಯಾನೇಜಮೆಂಟ್ ವಿಭಾಗದ ಉಪನ್ಯಾಸಕ ಅಂಜನ್ ಕುಮಾರ್ ಎಂ.ಎಲ್. ವಂದಿಸಿದರು.
ವಿದ್ಯಾರ್ಥಿನಿ ಮುಸ್ಕಾನ್ ಕಾರ್ಯಕ್ರಮ ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!