spot_img
Tuesday, April 28, 2026
spot_img

ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾಟ: ಕೋ-ಆಪರೇಟಿವ್ ಫ್ರೆಂಡ್ಸ್ ತಂಡಕ್ಕೆ ಗೆಲುವು

ಕೋಟ: ಶಿವ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಸ್ಥೆ ಕೋಟ ಇದರ ಆಶ್ರಯದಲ್ಲಿ ಕ್ರಿಕೆಟ್ ವೀಕ್ಷಕ ವಿವರಣೆಗಾರ ಶಿವನಾರಾಯಣ ಐತಾಳರ ಸಂಯೋಜನೆಯಲ್ಲಿ ಸಾಲಿಗ್ರಾಮದ ಹಳೆಕೋಟೆ ಮೈದಾನದಲ್ಲಿ ಅಕ್ಟೋಬರ್ 28 ಮತ್ತು 29ರಂದು ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾಟ ನಡೆಯಿತು.

ಪಂದ್ಯಾಟದಲ್ಲಿ ಕೋ-ಆಪರೇಟಿವ್ ಫ್ರೆಂಡ್ಸ್, ಕಂದಾಯ ಇಲೆವೆನ್, ತುಳು ಸಿನೆಮಾ ಸ್ಟಾರ್‍ಸ್, ಡಾಕ್ಟರ್ ಇಲೆವೆನ್, ವಕೀಲರು ಕುಂದಾಪುರ, ಲೆಕ್ಕ ಪರಿಶೋಧಕರು, ದೈಹಿಕ ಶಿಕ್ಷಕರು, ಕ್ಲೂಸ್ ಮಣಿಪಾಲ್, ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ್, ರೋಟರಿ, ರೋಬೋ ಸಾಪ್ಟ್ ಉಡುಪಿ, ಅಚೀವರ್ಸ್ ಕುಂದಾಪುರ ತಂಡಗಳು ಭಾಗವಹಿಸಿದ್ದವು.

ವಿನ್ನರ್ಸ್ ಆಗಿ ಕೋ-ಆಪರೇಟಿವ್ ಫ್ರೆಂಡ್ಸ್ ತಂಡ ಹೊರಹೊಮ್ಮಿತು. ದೈಹಿಕ ಶಿಕ್ಷಕರ ತಂಡ ರನ್ನರ್ಸ್ ಪ್ರಶಸ್ತಿ ಪಡೆಯಿತು.
ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕ ಯಶ್‌ಪಾಲ್ ಸುವರ್ಣ, ಉದ್ಯಮಿ ಗೌತಮ್ ಶೆಟ್ಟಿ, ಸತೀಶ್ ಕುಂದರ್, ರೋಟರಿ ಕ್ಲಬ್‌ನ ವೆಂಕಟೇಶ್ ಆಚಾರ್ಯ ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!