spot_img
Tuesday, April 28, 2026
spot_img

ಹೆಚ್.ಐ.ವಿ ಸೋಂಕಿತರ ಕುಂದು ಕೊರತೆ ನೀಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ : ಶಾಸಕ ಗಂಟಿಹೊಳೆ  

ಕುಂದಾಪುರದಲ್ಲಿ ಹೆಚ್‌.ಐ.ವಿ ಸೋಂಕಿತರ ಸಮಾವೇಶ | ಜಿಲ್ಲಾಧಿಕಾರಿಗಳಿಗೆ ಅಹವಾಲು ಸಲ್ಲಿಕೆ

ಜನಪ್ರತಿನಿಧಿ ವಾರ್ತೆ : ಇದೊಂದು ಔಚಿತ್ಯ ಕಾರ್ಯಕ್ರಮ. ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಈ ಕಾರ್ಯಕ್ರಮ ಪೂರಕವಾಗಿದೆ. ಈ ಸಮುದಾಯದ ಸಮಸ್ಯೆಗಳನ್ನು ಪರಿಹಾರ ಮಾಡುವುದಕ್ಕಾಗಿ ಸರ್ಕಾರ ಮಟ್ಟದಲ್ಲಿ  ಒಂದಿಷ್ಟು ಯೋಜನೆಗಳಿವೆ. ಆದರೇ, ಆ ಯೋಜನೆಗಳು ತಲುಪುವಲ್ಲಿಗೆ ತಲುಪಿತ್ತಿದೆಯೋ ಇಲ್ಲವೋ ಎಂದು ತಿಳಿದುಕೊಳ್ಳುವುದಕ್ಕೆ ಇಂತಹ  ಕಾರ್ಯಕ್ರಮಸಹಕಾರಿ ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಗುರುರಾಜ್‌ ಗಂಟಿಹೊಳೆ ಹೇಳಿದರು.

ಆಸರೆ ಚಾರಿಟೇಬಲ್ ಟ್ರಸ್ಟ್ (ರಿ.) ವಂಡ್ಸೆ, ದೀಪಜ್ಯೋತಿ ನೆಟ್ ವರ್ಕ್ ಆಫ್ ಪಾಸಿಟಿವ್ ಪೀಪಲ್ (ರಿ.) ಉಡುಪಿ ಹಾಗೂ ಆಶ್ರಯ ಸಮುದಾಯ ಸಂಘಟನೆ (ರಿ.) ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಕುಂಭಾಶಿ ರಾಧಾಬಾಯಿ ವೆಂಕಟರಮಣ ಪ್ರಭು ರಂಗಮಂಟಪ ಭಂಡಾರ್ಕಾರ್ಸ್ ಕಾಲೇಜು, ಕುಂದಾಪುರದಲ್ಲಿ ಹೆಚ್.ಐ.ವಿ ಸೋಂಕಿತರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಸಾಧ್ಯವಾಗುವ ಎಲ್ಲಾ ಪರಿಹಾರವನ್ನು ಸರ್ಕಾರದ ಅಧಿಕಾರಿ ವರ್ಗ ಹಾಗೂ ಮುಖ್ಯಸ್ಥರೊಂದಿಗೆ ಚರ್ಚಿಸಿ ಅವರ ಕುಂದು ಕೊರತೆ ನೀಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಅವರು ಭರವಸೆ ನೀಡಿದರು.

ಜಿಲ್ಲಾಧಿಕಾರಿಗಳ ಪರವಾಗಿ ಅಹವಾಲನ್ನು ಸ್ವೀಕರಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಉಡುಪಿ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಮಮತಾದೇವಿ, ಸಮುದಾಯದಿಂದ ನೀಡಲಾಗಿರುವ ಅಹವಾಲುಗಳಿಗೆ ಆಡಳಿತದಿಂದ, ಅಧಿಕಾರಿಗಳ ಮಟ್ಟದಿಂದ ಪ್ರಾಮಾಣಿಕವಾಗಿ ಸ್ಪಂದಿಸುವ ಕೆಲಸ ಜಿಲ್ಲಾಡಳಿತದಿಂದ ಶೀಘ್ರವಾಗಿ ಕ್ರಮ ತೆಗೆದುಕೊಳ್ಳುತ್ತೇವೆ. ಸಮುದಾಯದ ವಿಧವಾ ವೇತನ,  ನಿವೇಶನ ಸೇರಿ ಎಲ್ಲಾ ಸಮಸ್ಯೆಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ ಪರಿಹಾರ ಒದಗಿಸುವ ಬಗ್ಗೆ ಪ್ರಯತ್ನಿಸಲಾಗುವುದು ಎಂದು ಅವರು ಆಶ್ವಾಸನೆ ನೀಡಿದರು.

ತಾಂತ್ರಿಕ ಸಮಸ್ಯೆಗಳಿಗೆ ಶೀಘ್ರ ಪರಿಹಾರಕ್ಕೆ ಕ್ರಮ : ಶಾಸಕ ಕಿರಣ್‌ ಕುಮಾರ್‌ ಕೊಡ್ಗಿ

ತಾಲೂಕು ಮಟ್ಟದಲ್ಲಿ ಪರಿಹಾರ ಮಾಡಿಕೊಡಲಾಗುವ ಹೆಚ್‌.ಐ.ವಿ ಸೋಂಕಿತರಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳಿಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರ ಪರಿಹಾರಕ್ಕೆ ಕ್ರಮ ಕೈಗೊಳ್ಳುವ ಪ್ರಯತ್ನ ಮಾಡುತ್ತೇವೆ. ಜಿಲ್ಲಾಡಳಿತ ಮಟ್ಟದಲ್ಲಿ ಆಗಬೇಕಾಗಿರುವ ಪರಿಹಾರಕ್ಕೂ ಜಿಲ್ಲಾಡಳಿತದ ಗಮನಕ್ಕೆ ತಂದು ಪರಿಹಾರ ಒದಗಿಸಿಕೊಡುವ ಪ್ರಯತ್ನ ಮಾಡುತ್ತೇವೆ. ಕೆಲವು ತಾಂತ್ರಿಕ ಸಮಸ್ಯೆಗಳಿಗೆ ಖುದ್ದಾಗಿ ಅಧಿಕಾರಿಗಳೊಂದಿಗೆ ಸಾಧ್ಯಸಾಧ್ಯತೆಗಳ ಮಾತುಕತೆ ನಡೆಸಿ ಸೂಕ್ತ ಪರಿಹಾರ ನೀಡುವಲ್ಲಿ ಶ್ರಮ ವಹಿಸುತ್ತೇನೆ ಎಂದು ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ಭರವಸೆ ನೀಡಿದರು.

ಕಾರ್ಯಕ್ರಮದ ಅದ್ಯಕತೆಯನ್ನು ಸಾಮಾಜಿಕ ಕಾರ್ಯಕರ್ತೆ ಜ್ಯೋತಿ ಪೂಜಾರಿ ವಹಿಸಿದ್ದರು. ಆಸರೆ ಚಾರಿಟೇಬಲ್ ಟ್ರಸ್ಟ್ ವಂಡ್ಸೆ ಇದರ ಅಧ್ಯಕ್ಷರಾದ ಸಂಜೀವ್ ವಂಡ್ಸೆ ಪ್ರಾಸ್ತಾವಿಕ ಮಾತನಾಡಿ, ಅಹವಾಲು ಸಲ್ಲಿಸಿದರು‌.  ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಏಡ್ಸ್‌ ನಿಯಂತ್ರಣಾಧಿಕಾರಿ ಡಾ. ಚಿದಾನಂದ ಸಂಜು, ಕುಂದಾಪುರ ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರೇಮಾನಂದ್‌ ಕೆ., ಭಂಡಾರ್ಕಾರ್ಸ್ ಕಾಲೇಜಿನ ಪ್ರಾಂಶುಪಾಲ ಡಾ. ಶುಭಕರಾಚಾರಿ,‌ ದೀಪಜ್ಯೋತಿ ನೆಟ್‌ವರ್ಕ್ ಅಧ್ಯಕ್ಷ್ಯ ಸಂತೋಷ್‌ ಶೆಟ್ಟಿ, ಆಶ್ರಯ ಸಮುದಾಯ ಸಂಘಟನೆಯ ಅಧ್ಯಕ್ಷ ಸುದರ್ಶನ್‌ ಮತ್ತಿತರರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಹೆಚ್‌.ಐ.ವಿ ಸೋಂಕಿತರ  ಕುಂದು ಕೊರತೆಗಳ ಬಗ್ಗೆ ಸಂವಾದ ನಡೆಯಿತು. ನಂತರ ʼಕಲಾ ಚಿಗುರುʼ ತಂಡದಿಂದ ʼನಿರ್ಣಯʼ ಕಿರುಚಿತ್ರ ಪ್ರದರ್ಶನ ನಡೆಯಿತು.

ಹೆಚ್‌.ಐ.ವಿ ಸೋಂಕಿತರ ಸಮಾವೇಶ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳಿಗೆ ನೀಡಿದ ಅಹವಾಲುಗಳು :

  •  ಸರ್ಕಾರದಿಂದ ಹೆಚ್.ಐ.ವಿ ಸೋಂಕಿತರಿಗೆ ವಸತಿ ನಿವೇಶನ ಒದಗಿಸುವ ಕುರಿತು. 
  • ಒ.ವಿ.ಸಿ (ಹೆಚ್‌ಐವಿ ಸೋಂಕಿತ ಮಕ್ಕಳಿಗೆ ನೀಡುತ್ತಿರುವ ಮಾಶಾಸನವು ಕೇವಲ ೧೮ ವರ್ಷ ಮಾತ್ರವಲ್ಲದೇ ಅದರ ನಂತರ ೧೮ ವರ್ಷ ಮೇಲ್ಪಟ್ಟವರಿಗೂ ಅವರ ಜೀವಿತಾವಧಿಯವರೆಗೆ ಮುಂದುವರಿಸುವ ಕುರಿತು.)
  • ಎ.ಆರ್.ಟಿ ಔಷಧಿ ತೆಗೆದುಕೊಂಡು ಬರಲು ಪ್ರಯಾಣ ವೆಚ್ಚ ಹಿಂದೆ ನೀಡುತ್ತಿದ್ದುದ್ದನ್ನು ಈಗ ಪುನರಾರಂಭಿಸುವಂತೆ ಮನವಿ.
  • ಹೆಚ್.ಐ.ವಿ ಸೋಂಕಿತ ಮಕ್ಕಳಿಗೆ ಉಚಿತ ಶೈಕ್ಷಣಿಕ ನೆರವು ನೀಡುವಂತೆ ಮನವಿ (ಬ್ಯಾಗ್‌, ಪುಸ್ತಕ, ಪೆನ್ನು ಇತ್ಯಾದಿ)
  • ಹೆಚ್.ಐ.ವಿ ಸೋಂಕಿತರು ಮತ್ತು ಬಾಧಿತರ ಮಕ್ಕಳಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡಬೇಕಾಗಿ ಕೋರಿಕೆ.
  • ಹೆಚ್.ಐ.ವಿ ಸೋಂಕಿತರಿಗೆ ಜಿಲ್ಲಾಧಿಕಾರಿಗಳ ವಿಶೇಷ ಅನುದಾನದಲ್ಲಿ ಪೌಷ್ಠಿಕ ಆಹಾರ ಸಿಗುವಂತೆ ಮನವಿ.
  • ಸ್ವ-ಉದ್ಯೋಗ ನಡೆಸಲು ಸರಕಾರ ನೀಡುತ್ತಿರುವ ಧನಶ್ರೀ ಯೋಜನೆ ಫಲಾನುಭವಿಗಳ ಸಂಖ್ಯೆ ಹೆಚ್ಚಿಸಬೇಕಾಗಿ ಮನವಿ.
  • ಎ.ಆರ್.ಟಿ ಕೇಂದ್ರದಲ್ಲಿ ಮೂಲಭೂತ ಸೌಕರ್ಯಗಳನ್ನು ಸರಿಪಡಿಸುವಂತೆ ಕೋರಿಕೆ.
  • ಹೆಚ್‌.ಐ.ವಿ ಸೋಂಕಿತರಿಗೆ ಅಸೌಖ್ಯದಲ್ಲಿ ಇರುವಾಗ ತುರ್ತು ಚಿಕಿತ್ಸೆ ವೆಚ್ಚ ನೀಡಬೇಕು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!