spot_img
Wednesday, January 22, 2025
spot_img

ಬೈಲೂರು ಸ.ಹಿ.ಪ್ರಾ ಶಾಲೆಯಲ್ಲಿ ಕನ್ನಡ ನಡೆನುಡಿ ಕವನ ರಚನಾ ಕಮ್ಮಟ

ಕುಂದಾಪುರ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೈಲೂರು ಇಲ್ಲಿ ನ.೪ರಂದು ಕನ್ನಡ ನಡೆನುಡಿ ಸರಣಿ ಸಾಹಿತ್ಯ ರಚನಾ ಕಮ್ಮಟದ ಮೊದಲ ಕಾರ್ಯಕ್ರಮ ಜರಗಿತು.

ಕವನ ರಚನಾ ಕಮ್ಮಟದ ಸಂಪನ್ಮೂಲ ವ್ಯಕ್ತಿಯಾಗಿ ಸಾಹಿತಿಗಳು, ಕೆದೂರು ಸರಕಾರಿ ಪ್ರೌಢಶಾಲೆ ಶಿಕ್ಷಕರಾದ ರಮೇಶ ಕುಲಾಲ ನಾಲ್ತೂರು ಭಾಗವಹಿಸಿ ಮಕ್ಕಳಿಗೆ ಕವನ ರಚನೆಯ ಮಹತ್ವವನ್ನು ತಿಳಿಸುತ್ತಾ ”ಕವನ ರಚನೆ ಮಕ್ಕಳನ್ನು ಸಂವೇದನಾಶೀಲರನ್ನಾಗಿ ಮಾಡುತ್ತದೆ. ಹಾಗೂ ಸಾಹಿತ್ಯ ರಚನೆಯ ಹವ್ಯಾಸವು ವಿರಾಮ ಕಾಲದ ಸದುಪಯೋಗ ಪಡಿಸಿಕೊಳ್ಳಲು ಸಹಕಾರಿಯಾಗುತ್ತೆ” ಎಂದು ಅಭಿಪ್ರಾಯ ಪಟ್ಟರು. ಮಕ್ಕಳಿಗೆ ಸರಳವಾದ ಪ್ರಾಸ ಪದಗಳನ್ನು ಬಳಸಿಕೊಂಡು ಕವನ ರಚಿಸುವ ವಿವಿಧ ತಂತ್ರಗಳನ್ನು ತಿಳಿಸಿಕೊಟ್ಟರು.

ಈ ಸಂದರ್ಭದಲ್ಲಿ ಮಕ್ಕಳಿಗೆ ಜಾನಪದ ಗೀತೆಗಳ ಗಾಯನ ಸ್ಪರ್ಧೆ ಏರ್ಪಡಿಸಲಾಗಿತ್ತು. ೭ನೇ ತರಗತಿ ವಿದ್ಯಾರ್ಥಿಗಳು ಸಿದ್ಧಪಡಿಸಿದ ಗೋಡೆ ಪತ್ರಿಕೆ ‘ನುಡಿತೇರು’ ಇದನ್ನು ರಮೇಶ ಕುಲಾಲ ನಾಲ್ತೂರು ಅನಾವರಣ ಮಾಡಿದರು.

ಶಾಲಾ ಮುಖ್ಯ ಶಿಕ್ಷಕಿ ಗಿರಿಜಾ ಡಿ. ಮತ್ತು ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಶ್ರುತಿ ಶೆಟ್ಟಿ ಪುಸ್ತಕದ ಸ್ಮರಣಿಕೆಯನ್ನು ನೀಡಿ ರಮೇಶ ಕುಲಾಲರನ್ನು ಗೌರವಿಸಿದರು. ಸಹ ಶಿಕ್ಷಕ ಆನಂದ ಕುಲಾಲ ಕಾರ್ಯಕ್ರಮ ಸಂಯೋಜಿಸಿ ನಿರೂಪಿಸಿದರು. ಸಹ ಶಿಕ್ಷಕಿ ಸಂಧ್ಯಾ ಕೆ, ಅತಿಥಿ ಶಿಕ್ಷಕಿ ಪ್ರಮೀಳಾ ಮತ್ತು ಗೌರವ ಶಿಕ್ಷಕಿ ನಯನ ಕಾರ್ಯಕ್ರಮ ಸಂಯೋಜಿಸಲು ಸಹಕರಿಸಿದರು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!