spot_img
Tuesday, April 28, 2026
spot_img

ನಿರೀಕ್ಷಾ ದಿನಕರ ಶೆಟ್ಟಿ ಮುಂಬಾರು ಇವರಿಗೆ ರಾಜ್ಯಮಟ್ಟದ ಯೋಗ ರತ್ನ ಪ್ರಶಸ್ತಿ

ಕುಂದಾಪುರ: ಕಾವ್ರಾಡಿ ಗ್ರಾಮದ ಪಡುವಾಲ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 4ನೇ ತರಗತಿ ವಿದ್ಯಾರ್ಥಿನಿ ನಿರೀಕ್ಷಾ ದಿನಕರ ಶೆಟ್ಟಿ ಅವರಿಗೆ ಕರ್ನಾಟಕ ನೇತಾಜಿ ಸೇವಾ ಟ್ರಸ್ಟ್ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಕೊಡಮಾಡುವ ರಾಜ್ಯಮಟ್ಟದ ಯೋಗ ರತ್ನ ಪ್ರಶಸ್ತಿ ಲಭಿಸಿದೆ.

ಪ್ರತಿಭಾವಂತ ವಿದ್ಯಾರ್ಥಿನಿಯಾಗಿ ಗುರುತಿಸಿಕೊಂಡಿರುವ ನಿರೀಕ್ಷಾ ಮನೆಯಲ್ಲಿಯೇ ಗುರುವಿಲ್ಲದೆ ಯೋಗ ಶಿಕ್ಷಣವನ್ನು ಸ್ವ-ಪ್ರಯತ್ನದಿಂದ ಕಲಿತು ಕುಂದಾಪುರ ಭಾಗದಲ್ಲಿ ಹಲವು ಯೋಗ ಪ್ರದರ್ಶನ ನೀಡಿ, ರಾಜಧಾನಿ ಬೆಂಗಳೂರಿನಲ್ಲೂ ತನ್ನ ಪ್ರತಿಭೆಯನ್ನು ಪ್ರದರ್ಶಿಸಿ ಮೆಚ್ಚುಗೆಗೆ ಪಾತ್ರರಾದವರು. ಕಲಿಕೆ, ಕ್ರೀಡೆಯಲ್ಲಿಯೂ ಕೂಡಾ ಪ್ರತಿಭಾನ್ವಿತ ವಿದ್ಯಾರ್ಥಿನಿ.

ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕರ್ನಾಟಕ ನೇತಾಜಿ ಸೇವಾ ಟ್ರಸ್ಟ್ ವತಿಯಿಂದ ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ ನಡೆದ ರಾಜ್ಯದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಗೌರವಿಸುವ ಕಾರ್ಯಕ್ರಮದಲ್ಲಿ ನಿರೀಕ್ಷಾ, ದಿನಕರ ಶೆಟ್ಟಿ ಮುಂಬಾರು, ಇವರಿಗೆ ರಾಜ್ಯಮಟ್ಟದ ಯೋಗ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.

ನಿರೀಕ್ಷಾ ಅವರು ಕೃಷಿಕ, ಸಮಾಜ ಸೇವಕ ಮುಂಬಾರು ದಿನಕರ ಶೆಟ್ಟಿ ಮತ್ತು ಅಕ್ಷತಾ ಶೆಟ್ಟಿ ದಂಪತಿಯ ಪುತ್ರಿ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!