spot_img
Wednesday, January 22, 2025
spot_img

ಅರಬ್ ರಾಷ್ಟ್ರದಲ್ಲಿ ಕುಂದಗನ್ನಡ ಉತ್ಸವ| ಕುಂದಾಪುರ ರತ್ನ ಪ್ರಶಸ್ತಿ ಪ್ರದಾನ| ಮಂದರ್ತಿ ಮೇಳದ ಯಕ್ಷಗಾನ

ಅಜ್ಮನ್: ಅರಬ್ ರಾಷ್ಟ್ರದ ಕುಂದಾಪುರ ಕನ್ನಡಿಗರು ಸೇರಿ ಕಟ್ಟಿದ ನಮ್ಮ ಕುಂದಾಪುರ ಕನ್ನಡ ಬಳಗ ಗಲ್ಪ್ ಸಂಘಟನೆಯ ವತಿಯಿಂದ ಅಜ್ಮನ್ ಹೆಬಿಟೆಟ್ ಸ್ಕೂಲ್ ಸಭಾಂಗಣದಲ್ಲಿ ಆಯೋಜಿಸಿದ್ದ ಕುಂದಗನ್ನಡ ಉತ್ಸವ-2023 ಕುಂದಾಪುರ ರತ್ನ ಪ್ರಶಸ್ತಿ ಪ್ರದಾನ ಹಾಗೂ ಯಕ್ಷಗಾನ ಪ್ರದರ್ಶನ ಸಮಾರಂಭ ಯಶಸ್ವಿಯಾಗಿ ಜರುಗಿತು.

ಸೌದಿ ಅರೇಬಿಯಾದಲ್ಲಿ ನೆಲೆಸಿರುವ ಮಂದರ್ತಿ ಮೂಲದ ಉದ್ಯಮಿ ವಿಶ್ವನಾಥ್ ಹೆಗ್ಡೆ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗಲ್ಫ್ ರಾಷ್ಟ್ರದಲ್ಲಿರುವ ಕುಂದಗನ್ನಡಿಗರ ಸಾಧನೆ ಮತ್ತು ಪರಿಶ್ರಮ ಜಗತ್ತಿಗೆ ಮಾದರಿಯಾಗಿದೆ. ವೃತ್ತಿ ಬದುಕಿನ ಜೊತೆಗೆ ತಾಯಿನೆಲದ ಅಭಿಮಾನ ಹಾಗೂ ಸಂಘಟಿತ ಶ್ರಮದ ಮೂಲಕ ಕುಂದಾಪುರದ ಜನತೆಗೆ ನೆರವಾಗುವ ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಪ್ ಸಂಘಟನೆಯು ಕುಂದಾಪುರದ ಹೆಮ್ಮೆ‌ಎಂದರು.

ನಮ್ಮ ಕುಂದಾಪ್ರ ಕನ್ನಡ ಬಳಗದ ಅಧ್ಯಕ್ಷ ಸಾದನ್ ದಾಸ್ ಮಾತನಾಡಿ, ಕುಂದಾಪುರ ಕನ್ನಡ ಬಳಗ ಗಲ್ ರಾಷ್ಟ್ರದಲಿ ಕುಂದಗನ್ನಡಗರಿಗೆ ಧ್ವನಿಯಾಗುವ ಜೊತೆಗೆ ಪ್ರತಿ ವರ್ಷ ಹತ್ತಾರು ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಕಾರ ಗ್ರಾಮೀಣ ಶಾಲೆಗಳಿಗೆ ಕೊಡುಗೆ, ಸಾಧಕರಿಗೆ ಸನ್ಮಾನ ದುಬೈನಲ್ಲಿ ಕುಂದಗನ್ನಡಗರ ಸಮಸ್ಯೆಗಳಿಗೆ ಸ್ಪಂದನೆ ಸೇರಿದಂತೆ ನಿರಂತರ ಹಲವು ಕಾರ್ಯಕ್ರಮಗಳನ್ನು ನಡೆಸುತ್ತಿದೆ.ಕುಂದಗನ್ನಡ ಉತ್ಸವದ ಮೂಲಕ ಅದ್ದೂರಿಯ ಕುಂದಾಪುರ ಕನ್ನಡಿಗ ಸಮ್ಮಿಲನ ಕಾರ್ಯಕ್ರಮ ದುಬೈನಲ್ಲಿ ಯಶಸ್ವಿಯಾಗಿ ಸಾಕಾರಗೊಂಡಿದೆ‌ಎಂದರು.

ಕುಂದಾಪ್ರರತ್ನ ಪ್ರಶಸ್ತಿ ಪ್ರದಾನ:
ಸಾಮಾಜಿಕ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಗುರುತಿಸಿಕೊಂಡ ಸಾಧಕರಿಗೆ ಕುಂದಾಪುರ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ನಾಟಿ ವೈದ್ಯ ಮ್ಯಾಕ್ಸಿಮ್ ಓಲಿವೆರ ಹಾಗೂ ಪ್ರಾಣಿ ರಕ್ಷಕ ಸಂಜೀವ ದೇವಾಡಿಗ ಅವರನ್ನು ಕುಂದಾಪುರ ರತ್ನ ಪ್ರಶಸ್ತಿ ನೀಡಿ ಸಮ್ಮಾನಿಸಲಾಯಿತು.

ಮಂದಾರ್ತಿ ಮೇಳದ ಯಕ್ಷಗಾನ:
ಗಲ್ಫ್ ರಾಷ್ಟ್ರಕ್ಕೆ ಮೊದಲ ಭಾರಿಗೆ ಮಂದಾರ್ತಿ ಮೇಳವನ್ನು ಆಮಂತ್ರಿಸಿ ಪ್ರದರ್ಶನ ಆಯೋಜಿಸಲಾಗಿತ್ತು. ಉತ್ಸವದಲ್ಲಿ ಪಾಪಣ್ಣ ವಿಜಯ ಗುಣಸುಂದರಿ ಯಕ್ಷಗಾನ ಅದ್ದೂರಿಯಾಗಿ ಪ್ರದರ್ಶನಗೊಂಡಿತು. ಇದೇ ವೇಳೆ ಉದ್ಯಮಿ ವಿಶ್ವನಾಥ್ ಹೆಗ್ಡೆ, ಗಲ್ಫ್ ರಾಷ್ಟ್ರದಲ್ಲಿ ಭಗವದ್ಗೀತೆ ಪಠಣ ಅಭಿಯಾನ ಮಾಡಿದ ಸುದೇಶ್ ಬೈಂದೂರು ಮೊದಲಾದವರನ್ನು ಸನ್ಮಾನಿಸಲಾಯಿತು. ವಿವಿಧ ಆಟೋಟ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ವಿವಿಧ ದೇಶದ ಪ್ರತಿನಿಧಿಗಳು ಭಾಗಿ:
ನಮ್ಮ ಕುಂದಾಪ್ರ ಕನ್ನಡ ಬಳಗದ ವಿವಿಧ ದೇಶದ ಪ್ರತಿನಿಧಿಗಳು ಸೇರಿದಂತೆ ನೂರಾರು ಮಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನಮ್ಮ ಕುಂದಾಪ್ರಕನ್ನಡ ಬಳಗ ಉಪಾಧ್ಯಕ್ಷ ದಿನೇಶ್ ದೇವಾಡಿಗ, ಕಾರ್ಯದರ್ಶಿ ಸುಧಾಕರ ಪೂಜಾರಿ, ಖಜಾಂಚಿ ಸುಜಿತ್ ಶೆಟ್ಟಿ, ಕರ್ನಾಟಕ ರಾಜ್ಯ ಅರಣ್ಯಾಧಿಕಾರಿಗಳ ಸಂಘದ ಮಾಜಿ ಅಧ್ಯಕ್ಷ ರಘುರಾಮ್ ದೇವಾಡಿಗ, ನಿವ್ರತ್ತ ಶಿಕ್ಷಕ ಹರೀಶ್ ಶೆಟ್ಟಿ, ಮಂದಾರ್ತಿ ದೇವಸ್ಥಾನದ ಸಚಿನ್ ಶೆಟ್ಟಿ, ಉದ್ಯಮಿ ವೆಂಕಟೇಶ್‌ಕಿಣಿ, ಕತಾರಿನ ಭಾರತೀಯ ಸಾಂಸ್ಕೃತಿಕ ಕೇಂದ್ರದ ಉಪಾಧ್ಯಕ್ಷ ಸುಬ್ರಹ್ಮಣ್ಯ ಹೆಬ್ವಾಗಿಲು, ಸೌದಿ ಅರೇಬಿಯಾ ಸಂತೋಷ ಶೆಟ್ಟಿ, ಓಮನ್ ದೇಶದ ರಮಾನಂದ ಪ್ರಭು, ಶೀನ ದೇವಾಡಿಗ ತ್ರಾಸಿ, ನಮ್ಮ ಕುಂದಾಪ್ರ ಕನ್ನಡ ಬಳಗದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ನಮ್ಮ ಕುಂದಾಪ್ರ ಕನ್ನಡ ಬಳಗದ ವಿಘ್ನೇಶ್ ಸಾಂಸ್ಕ್ರತಿಕ ಕಾರ್ಯಕ್ರಮ ನಿರೂಪಿಸಿದರು. ಪತ್ರಕರ್ತ ಅರುಣ್‌ಕುಮಾರ್ ಶಿರೂರು, ಆರತಿ ಅಡಿಗ ಕಾರ್ಯಕ್ರಮ ನಿರ್ವಹಿಸಿದರು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!