Sunday, September 8, 2024

ನ.3ರಂದು ಹಟ್ಟಿಅಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ‘ಹರಿದ್ವರ್ಣ’ ರಾಷ್ಟ್ರೀಯ ಕಾರ್ಯಾಗಾರ

ಕುಂದಾಪುರ: (ಜನಪ್ರತಿನಿಧಿ ವಾರ್ತೆ) ರಜತ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯುತ್ತಿರುವ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ ಹಟ್ಟಿಯಂಗಡಿ ಈ ವರ್ಷ ಹಲವು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿದ್ದು ಆ ನಿಟ್ಟಿನಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ICSE ಮತ್ತು CBSE ಶಾಲೆಗಳ ಸಂಘ ಹಾಗೂ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ಜಂಟಿ ಆಶ್ರಯದಲ್ಲಿ “ಹರಿದ್ವರ್ಣ” ರಾಷ್ಟ್ರೀಯ ಕಾರ್ಯಾಗಾರವು ನ.3ರಂದು ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ಜರುಗಲಿದೆ ಎಂದು ಶಾಲೆಯ ಉಪಪ್ರಾಂಶುಪಾಲರಾದ ರಾಮ ದೇವಾಡಿಗ ಹೇಳಿದರು.

ಅವರು ಕುಂದಾಪುರ ಪ್ರೆಸ್‍ಕ್ಲಬ್‍ನಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, ಈ ಕಾರ್ಯಾಗಾರವು ಪರಿಸರ ಸುಸ್ಥಿರತೆ ಮತ್ತು ಪರಿಸರ ಪ್ರಜ್ಞೆಯ ಶಿಕ್ಷಣಕ್ಕೆ ಬದ್ಧವಾಗಿರುವ ಶಾಲಾ ಮುಖ್ಯಸ್ಥರ ಸಭೆಯಾಗಿದೆ. ಈ ಸಮ್ಮೇಳನವು ಪ್ರಾಂಶುಪಾಲರು, ಶಾಲಾ ನಿರ್ವಾಹಕರು ಮತ್ತು ಶಿಕ್ಷಕರಿಗೆ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಲು, ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳಲು ಮತ್ತು ತಮ್ಮ ಶಾಲಾ ಸಮುದಾಯಗಳಲ್ಲಿ ಹಸಿರು ತತ್ವಗಳನ್ನು ಸಂಯೋಜಿಸಲು ನವೀನ ತಂತ್ರಗಳನ್ನು ಅನ್ವೇಷಿಸಲು ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಸಮ್ಮೇಳನದಲ್ಲಿ ಭಾಗವಹಿಸುವವರು ಸುಸ್ಥಿರ ಪಠ್ಯಕ್ರಮ ಅಭಿವೃದ್ಧಿ, ಪರಿಸರ ಸ್ನೇಹಿ ಶಾಲಾ ಮೂಲಸೌಕರ್ಯ, ಹವಾಮಾನ ಕ್ರಿಯೆಯ ಉಪಕ್ರಮಗಳು ಮತ್ತು ಶಿಕ್ಷಣದಲ್ಲಿ ಪರಿಸರ ನ್ಯಾಯದಂತಹ ವಿಷಯಗಳನ್ನು ಒಳಗೊಂಡ ಚರ್ಚೆಗಳು ಮತ್ತು ಕಾರ್ಯಾಗಾರಗಳಲ್ಲಿ ತೊಡಗುತ್ತಾರೆ. ಇದು ನೆಟ್ವರ್ಕಿಂಗ್, ಸಹಯೋಗ ಮತ್ತು ಸ್ಫೂರ್ತಿಗಾಗಿ ವೇದಿಕೆಯನ್ನು ಒದಗಿಸುತ್ತದೆ. ಪಾಲ್ಗೊಳ್ಳುವವರಿಗೆ ಸಮಾನ ಮನಸ್ಕ ವೃತ್ತಿಪರರೊಂದಿಗೆ ಸಂಪರ್ಕ ಸಾಧಿಸಲು, ಯಶಸ್ವಿ ಹಸಿರು ಶಾಲೆಯ ಮಾದರಿಗಳಿಂದ ಕಲಿಯಲು ಮತ್ತು ಸಮರ್ಥನೀಯತೆಯಲ್ಲಿ ಪರಿಣಾಮಕಾರಿ ನಾಯಕತ್ವದ ಒಳನೋಟಗಳನ್ನು ಪಡೆಯಲು ಅನುವು ಮಾಡಿಕೊಡುತ್ತದೆ. ಶಿಕ್ಷಣ ಕ್ಷೇತ್ರದೊಳಗೆ ಪರಿಸರದ ಬಗ್ಗೆ ಜವಾಬ್ದಾರಿಯ ಪ್ರಜ್ಞೆಯನ್ನು ಬೆಳೆಸುವುದು ಈ ಸಮ್ಮೇಳನದ ಮುಖ್ಯ ಉದ್ದೇಶವಾಗಿದೆ. ಇದು ಪರಿಸರ ಉಸ್ತುವಾರಿಯನ್ನು ಚಾಂಪಿಯನ್ ಮಾಡಲು ಶಾಲಾ ನಾಯಕರಿಗೆ ಅಧಿಕಾರ ನೀಡುತ್ತದೆ. ಸಮರ್ಥನೀಯತೆಯನ್ನು ಪರಿಣಾಮಕಾರಿಯಾಗಿ ಕಲಿಸುವ ಸಾಧನಗಳೊಂದಿಗೆ ಶಿಕ್ಷಕರನ್ನು ಸಜ್ಜುಗೊಳಿಸುತ್ತದೆ. ಅಂತಿಮವಾಗಿ ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಯ ಪ್ರಯೋಜನಕ್ಕಾಗಿ ಪರಿಸರ ಪ್ರಜ್ಞೆ ಮತ್ತು ಪರಿಸರ ಜವಾಬ್ದಾರಿಯುತ ಶಾಲೆಗಳನ್ನು ರಚಿಸಲು ಕೊಡುಗೆ ನೀಡುತ್ತದೆ ಎಂದರು.

ಶಾಲಾ ಮುಖ್ಯೋಪಾಧ್ಯಾಯಿನಿ ಸುಜಾತಾ ಸದಾರಾಮ್ ಮಾತನಾಡಿ, ಬೆಳಿಗ್ಗೆ 9 ಘಂಟೆಗೆ ಕಾರ್ಯಕ್ರಮವನ್ನು ಬೆಂಗಳೂರು ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಕೆ.ಸಿದ್ದಪ್ಪ ಉದ್ಘಾಟಿಸಿ ಮಾತನಾಡಲಿದ್ದಾರೆ. ಬೆಳಿಗ್ಗೆ 10 ರಿಂದ 11-15 ತನಕ ನಡೆಯುವ ಮೊದಲ ಕಾರ್ಯಾಗಾರದಲ್ಲಿ ಇಂಡಿಯನ್ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್, ಹೈದರಾಬಾದ್, ತೆಲಂಗಾಣ ಇದರ ಹಿರಿಯ ಸಲಹೆಗಾರರಾದ ಸಂದೀಪ್ ವುಲ್ಲಿಕಾಂತಿ ಹಸಿರು ಶಾಲೆಗಳ ಪರಿಕಲ್ಪನೆಗಳು ಮತ್ತು ಪ್ರಯೋಜನಗಳು ಎಂಬ ವಿಷಯದಲ್ಲಿ ಮಾಹಿತಿಗಳನ್ನು ನೀಡಲಿದ್ದಾರೆ. ದ್ವಿತೀಯ ಕಾರ್ಯಾಗಾರದಲ್ಲಿ ಅಹಮದಾಬಾದ್, ಗುಜರಾತ್ ಪರಿಸರ ಶಿಕ್ಷಣಕ್ಕಾಗಿ ಪರಿಸರ-ಶಾಲೆಗಳ ಕಾರ್ಯಕ್ರಮ ಕೇಂದ್ರದ ಯೋಜನಾ ಅಧಿಕಾರಿ ಶ್ರೇಯಸ್ ಸಜೀವನ್, ಇವರು ಸುಸ್ಥಿರ ಶಾಲೆ” ಎಂಬ ವಿಷಯದಲ್ಲಿ ತಮ್ಮ ಅನುಭವವನ್ನು ಹಂಚಿಕೊಳ್ಳಲಿದ್ದಾರೆ.

ಮಧ್ಯಾಹ್ನ 2-00 ರಿಂದ ನಡೆಯುವ ಮೂರನೆಯ ಕಾರ್ಯಾಗಾರದಲ್ಲಿ ವೀರೇಂದ್ರ ರಾವತ್ ಸಂಸ್ಥಾಪಕ, ಗ್ರೀನ್ ಮೆಂಟರ್, ಅಹಮದಾಬಾದ್, ಗುಜರಾತ್ ಇವರು “ಪ್ರತಿ ಮಗುವಿಗೆ ಹಸಿರು ಶಾಲೆ” ಎಂಬ ವಿಷಯದಲ್ಲಿ ಪ್ರಬಂಧ ಮಂಡಿಸಿ ಮಾತನಾಡಲಿದ್ದಾರೆ. ಸಂಜೆ 3-30 ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಕವಿತಾ ಉಮಾಶಂಕರ್ ಮಿಶ್ರಾ ಪ್ರಗತಿಪರ ರೈತರು ರಾಯಚೂರು ಇವರು ಸಮಾರೋಪ ಸಮಾರಂಭದ ಮುಖ್ಯ ಭಾಷಣ ಮಾಡಲಿದ್ದಾರೆ ಎಂದರು.

ಈ ವರ್ಷ ರಾಷ್ಟ್ರಮಟ್ಟದಲ್ಲಿ ನಡೆಯುತ್ತಿರುವ ಈ ಗ್ರೀನ್ ಸ್ಕೂಲ್ ಕಾನ್ಸರೆನ್ಸ್ ಕಾರ್ಯಾಗಾರವು ಎಸ್.ಡಿ.ಎಂ ಇಂಗ್ಲೀಷ್ ಮೀಡಿಯಮ್ ಸ್ಕೂಲ್, ಉಜಿರೆ ಇದರ ಪ್ರಾಂಶುಪಾಲರು ಹಾಗೂ ಎಐಸಿಎಸ್ ಅಧ್ಯಕ್ಷರಾದ ಮನಮೋಹನ ನಾಯ್ಕ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಡಾ. ಗೀತಾಶಶಿಧರ್, ಕಾರ್ಯದರ್ಶಿಗಳು, ಎಐಸಿಎಸ್ ಪ್ರಾಂಶುಪಾಲರು ಆನಂದತೀರ್ಥ ವಿದ್ಯಾಲಯ, ಉಡುಪಿ, ಡಾ. ಎನ್. ಪಿ. ನಾರಾಯಣ ಶೆಟ್ಟಿ, ನಿವೃತ್ತ ಪ್ರಾಂಶುಪಾಲರು, ಭಂಡಾರ್ಕಾರ್ಸ್ ಆರ್ಟ್ಸ್ ಮತ್ತು ಸೈನ್ಸ್ ಕಾಲೇಜು, ಕುಂದಾಪುರ ಹಾಗೂ ಶಾಲಾ ಪ್ರಾಂಶುಪಾಲರೂ ಹಾಗೂ ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿಗಳೂ ಆದ ಶರಣ ಕುಮಾರ, ಉಪಸ್ಥಿತರಿರುವರು. ಈ ಕಾರ್ಯಾಗಾರದಲ್ಲಿ 80ಕ್ಕೂ ಹೆಚ್ಚು ಶಾಲೆಯ ಪ್ರಾಂಶುಪಾಲರು, ಉಪಪ್ರಾಂಶುಪಾಲರು, ಹಿರಿಯ ಶಿಕ್ಷಕರು ಭಾಗವಹಿಸಲಿದ್ದಾರೆ ಎಂದರು.
ಸುದ್ಧಿಗೋಷ್ಠಿಯಲ್ಲಿ ಕಾರ್ಯಕ್ರಮ ಸಂಯೋಜಕಿ ಲತಾ ದೇವಾಡಿಗ ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!