spot_img
Tuesday, April 28, 2026
spot_img

ನ.4ರಂದು ಬ್ರಹ್ಮಾವರದಲ್ಲಿ ಮೊಗೆಬೆಟ್ಟು ಯಕ್ಷರಜತ ಸಂಭ್ರಮ ಗುರುಭ್ಯೋನಮಃ

ಕೋಟ: ಕಳೆದ 25 ವರ್ಷಗಳಿಂದ ಯಕ್ಷಗಾನ ರಂಗಭೂಮಿಯಲ್ಲಿ ಗುರುವಾಗಿ, ಭಾಗವತರಾಗಿ, ಪ್ರಸಂಗಕರ್ತರಾಗಿ ಗುರುತಿಸಿಕೊಂಡ ಅಭಿಜಾತ ಕಲಾ ಸಾಧಕ ಪ್ರಸಾದ್ ಕುಮಾರ್ ಮೊಗೆಬೆಟ್ಟು ಅವರು ಗುರುತನ, ಭಾಗವತಿಕೆ, ಪ್ರಸಂಗರಚನೆ ಈ ಮೂರು ವಿಭಾಗದಲ್ಲಿ ತನ್ನ ವಯೋಮಾನ ಮತ್ತು ಕಲಾಯಾನಕ್ಕೆ ಮಿಗಿಲಾದ ಸರ್ವಾಂಗೀಣ ಸಾಧನೆಯ ಮೂಲಕ ಪ್ರಸಿದ್ಧರಾದ ತಾರಾಮೌಲ್ಯ ಕಲಾವಿದ. ಅವರ ಕಲಾಯಾನಕ್ಕೆ 25 ತುಂಬುತ್ತಿರುವ ಸಂದರ್ಭದಲ್ಲಿ ಅವರ ಶಿಷ್ಯವೃಂದ -ಅಭಿಮಾನಿ ಬಳಗ, ಗೀತಾನಂದ ಫೌಂಡೇಶನ್ ರಿ ಮಣೂರು, ಮಯ್ಯ ಯಕ್ಷಶ್ರೀ ಪ್ರತಿಷ್ಠಾನ ರಿ, ಅಣಲಾಡಿ ಮಠ, ಸಾಸ್ತಾನ ಇವರ ಪ್ರಸ್ತುತಿಯಲ್ಲಿ ನಾಡೋಜ ಡಾ.ಜಿ.ಶಂಕರ್ ಶುಭಾಶೀರ್ವಾದದೊಂದಿಗೆ ಸಮಗ್ರ ಯಕ್ಷಕಲಾಭಿಮಾನಿಗಳ ಸಹಕಾರದಲ್ಲಿ ಪ್ರಸಾದ್ ಕುಮಾರ್ ಮೊಗೆಬೆಟ್ಟು ಅವರು ಕಲಾ ಬದುಕಿನ ಬೆಳ್ಳಿಹಬ್ಬ ಸಂಭ್ರಮಾಚರಣೆ ಗುರುವಂದನೆ-ಅಭಿನಂದನೆ 25 ಮೊಗೆಬೆಟ್ಟು ಯಕ್ಷರಜತ ಸಂಭ್ರಮ ಗುರುಭ್ಯೋನಮಃ ಕಾರ್ಯಕ್ರಮ ನವಂಬರ್ 4 ಶನಿವಾರ ಮಧ್ಯಾಹ್ನ 2 ಗಂಟೆಯಿಂದ ಬ್ರಹ್ಮಾವರದ ಶ್ಯಾಮಿಲಿ ಶನಾಯದಲ್ಲಿ ನಡೆಯಲಿದೆ ಎಂದು ಮೊಗೆಬೆಟ್ಟು ಯಕ್ಷರಜತ ಸಂಭ್ರಮ ಸಂಚಾಲಕ ರಾಘವೇಂದ್ರ ಕರ್ಕೇರ ಕೋಡಿ ತಿಳಿಸಿದರು.

ಅವರು ಕೋಟದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಮಧ್ಯಾಹ್ನ 2 ಗಂಟೆಯಿಂದ ಕೀರ್ತಿಶೇಷ ಗುರು ಗೋರ್ಪಾಡಿ ವಿಠಲ ಪಾಟೀಲ್ ವೇದಿಕೆಯಲ್ಲಿ ಸಾಂಸ್ಕೃತಿಕ ಯಕ್ಷವೈಭವ ಅನಾವರಣವನ್ನು ಉಡುಪಿ ಕ್ಷೇತ್ರದ ಶಾಸಕ ಯಶಪಾಲ ಸುವರ್ಣ ದೀಪಪ್ರಜ್ವಲನೆ ಮಾಡಲಿದ್ದಾರೆ. ಕಾಪು ಕ್ಷೇತ್ರದ ಶಾಸಕ ಗುರ್ಮೆ ಸುರೇಶ ಶೆಟ್ಟಿ ಶುಭಾಸಂಸನೆಗೈಯಲಿದ್ದಾರೆ. 2.30ರಿಂದ ಬಡುಗುತಿಟ್ಟಿನ ಸುಪ್ರಸಿದ್ಧ ಕಲಾವಿದರಿಂದ ಸುಧನ್ವಾರ್ಜುನ ಯಕ್ಷಗಾನ ನಡೆಯಲಿದೆ. ಸಂಜೆ 5 ಗಂಟೆಗೆ ಮೊಗೆಬೆಟ್ಟು ಯಕ್ಷರಜತ ಸಂಭ್ರಮ ಗುರುಭ್ಯೋನಮಃ ಕಾರ್ಯಕ್ರಮವನ್ನು ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕರಾದ ನಾಡೋಜ ಡಾ.ಜಿ.ಶಂಕರ್ ಉದ್ಘಾಟಿಸಲಿದ್ದಾರೆ. ಗೀತಾನಂದ ಫೌಂಡೇಶನ್ ಪ್ರವರ್ತಕರಾದ ಆನಂದ ಸಿ.ಕುಂದರ್ ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ಲೋಕಸೇವಾ ಆಯೋಗದ ನಿಕಟಪೂರ್ವ ಅಧ್ಯಕ್ಷ ಡಾ.ಟಿ.ಶ್ಯಾಂ ಭಟ್ ರಜತ ಗೌರವ ಪ್ರದಾನ ಮಾಡಲಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾ ಪೋಷಕರಾದ ಕೃಷ್ಣಮೂರ್ತಿ ಮಂಜರು ಆಶೀರ್ವಚನ ನೀಡಲಿದ್ದಾರೆ. ಮಯ್ಯ ಯಕ್ಷಶ್ರೀ ಪ್ರತಿಷ್ಠಾನದ ಋಷಿಕುಮಾರ ಮಯ್ಯ ಶುಭನುಡಿ ನೀಡಲಿದ್ದಾರೆ. ಶಾಸಕ ಕಿರಣ್ ಕುಮಾರ್ ಕೊಡ್ಗಿ, ವಿಧಾನಪರಿಷತ್ ಸದಸ್ಯ ಶ್ರೀನಿವಾಸ ಪೂಜಾರಿ ಕೋಟ ಸೇರಿದಂತೆ ಹಲವಾರು ಗಣ್ಯರು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಪತ್ರಕರ್ತ ಚಿತ್ತೂರು ಪ್ರಭಾಕರ ಆಚಾರ್ಯ ಅಭಿನಂದನಾ ಭಾಷಣ ಮಾಡಲಿದ್ದಾರೆ ಎಂದರು.

ಬಳಿಕ ವಿಶೇಷ ಆಕರ್ಷಣೆಯ, ಪ್ರಸಿದ್ಧ ಹಿಮ್ಮೇಳದವರ ವೇಷ, ಪ್ರಖ್ಯಾತ ಮುಮ್ಮೇಳದವರ ಹಿಮ್ಮೇಳದಲ್ಲಿ ಕುಶಲವ ಯಕ್ಷಗಾನ ಪ್ರದರ್ಶನ ನೆಡೆಯಲಿದೆ. ಕಾರ್ಯಕ್ರಮದಲ್ಲಿ 1500 ಹೆಚ್ಚು ಮೊಗೆಬೆಟ್ಟು ಅವರ ಶಿಷ್ಯವೃಂದ ಭಾಗವಹಿಸುವ ನಿರೀಕ್ಷೆ ಇದೆ ಎಂದು ಹೇಳಿದರು.

ಸುದ್ಧಿಗೋಷ್ಠಿಯಲ್ಲಿ ಯಕ್ಷಗುರು ಪ್ರಸಾದ್ ಕುಮಾರ್ ಮೊಗೆಬೆಟ್ಟು, ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀನಾಥ ಉರಾಳ ಚಿತ್ರಪಾಡಿ, ಕಾರ್ಯಾಧ್ಯಕ್ಷ ಸಚಿನ್ ಶೆಟ್ಟಿ ವಡ್ಡರ್ಸೆ, ಹರೀಶ ದೇವಾಡಿಗ ಗಿಳಿಯಾರು, ಉಪಾಧ್ಯಕ್ಷ ಪ್ರಭಾಕರ ಮೆಂಡನ್ ಕೋಡಿ, ರಾಘವೇಂದ್ರ ಸುವರ್ಣ ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!