spot_img
Tuesday, April 28, 2026
spot_img

ಸಿದ್ದಾಪುರದಲ್ಲಿ ಕನ್ನಡ ರಾಜ್ಯೋತ್ಸವ: ವಿವಿಧ ಕ್ಷೇತ್ರದ ಸಾಧಕರಿಗೆ ಗೌರವ ಸನ್ಮಾನ

ಸಿದ್ದಾಪುರ: ಪ್ರಗತಿಪರ ಕೃಷಿಕ ರಾಜೇಂದ್ರ ಬೆಚ್ಚಳ್ಳಿ ಅವರ ನೇತೃತ್ವದಲ್ಲಿ ೫೦ರ ಸಂಭ್ರಮದ ಕರ್ನಾಟಕ-ಕನ್ನಡ ರಾಜ್ಯೋತ್ಸವ ಆಚರಣೆಯಂದು ಪತ್ರಿಕಾ ಹಾಗೂ ಸಾಹಿತ್ಯ ರಂಗದಲ್ಲಿ ಸೇವೆ ಸಲ್ಲಿಸಿದ ಸಾಧಕರನ್ನು ಗೌರವಿಸುವ ಕಾರ್ಯಕ್ರಮ ಸಿದ್ದಾಪುರದ ನಾಯಕ್ ಟ್ರೇಡರ್ಸ್ ಕಟ್ಟಡದಲ್ಲಿ ಜರುಗಿತು.

ಡಾ.ಜಗದೀಶ್ ಶೆಟ್ಟಿ ಮಾತನಾಡಿ ಕನ್ನಡ ನಾಡು ನುಡಿಗೆ ಸೇವೆ ಸಲ್ಲಿಸಿದ ಗ್ರಾಮೀಣ ಪ್ರತಿಭೆಗಳನ್ನು ರೈತ ಕುಟುಂಬದಿಂದ ಬಂದ ರಾಜೇಂದ್ರ ಬೆಚ್ಚಳ್ಳಿ ಅವರು ವರ್ಷದ ವಿವಿಧ ಆಚರಣೆಗಳಲ್ಲಿ ಸಾಧಕರನ್ನು ಗುರುತಿಸುತ್ತಿರುವುದು ಇತರರಿಗೆ ಮಾದರಿ ಎಂದರು.

ಈ ಸಂದರ್ಭದಲ್ಲಿ ಸಾಹಿತ್ಯ ಕ್ಷೇತ್ರದ ಡಾ. ಶ್ರೀಕಾಂತ್ ರಾವ್ ಸಿದ್ದಾಪುರ, ಬಾಲಪ್ರತಿಬೆ ವಿಧಾತ್ರಿ ರವಿಶಂಕರ್, ಪತ್ರಕರ್ತರಾದ ಸತೀಶ್ ಆಚಾರ್ ಉಳ್ಳೂರು, ನಾಗೇಶ್ ಕುಮಾರ್ ಜಿ ಅವರನ್ನು ಸನ್ಮಾನಿಸಲಾಯಿತು.

ಗ್ರಾಮವಿಕಾಸ ಸಮಿತಿ ಸಿದ್ದಾಪುರ ಇದರ ಅಧ್ಯಕ್ಷರಾದ ಎಸ್ ಪಾಂಡುರಂಗ ಪೈ, ಉದ್ಯಮಿ ಶ್ರೀಕಾಂತ ನಾಯಕ್, ಭಾರತೀಯ ಕಿಸಾನ್ ಸಂಘದ ಸಿದ್ದಾಪುರ ವಲಯ ಅಧ್ಯಕ್ಷರಾದ ಭೋಜರಾಜ್ ಶೆಟ್ಟಿ ಗೆದ್ದೋಡು, ಕಾರ್ಯಕ್ರಮ ರೂವಾರಿ ರಾಜೇಂದ್ರ ಬೆಚ್ಚಳ್ಳಿ, ಉದ್ಯಮಿ ಟಿ.ಜಿ ಪಾಂಡುರಂಗ ಪೈ ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!