Sunday, September 8, 2024

ಗಂಗೊಳ್ಳಿಯಲ್ಲಿ ಕನ್ನಡ ರಾಜ್ಯೋತ್ಸವ

 ಗಂಗೊಳ್ಳಿ: ನಮ್ಮ ಮಾತೃಭಾಷೆಯಾದ ಕನ್ನಡದ ಬಗೆಗೆ ನಿರಂತರವಾದ ಪ್ರೀತಿ ಕಾಳಜಿಯನ್ನು ಇಟ್ಟುಕೊಂಡು ಅದನ್ನು ನಿತ್ಯದ ಜೀವನದಲ್ಲಿ ಹೆಚ್ಚು ಬಳಸೋಣ ಎಂದು ನಿವೃತ್ತ ಪೋಸ್ಟ್ ಮಾಸ್ಟರ್ ಸೀತಾರಾಮ ಗಾಣಿಗ  ಅಭಿಪ್ರಾಯಪಟ್ಟರು 

 ಅವರು ಬೆಂಗಳೂರು ಹೋಟೆಲ್ ನ್ಯೂಸ್ ಮಾಸಪತ್ರಿಕೆ ಮತ್ತು ಕರ್ನಾಟಕ ಕರಾವಳಿ ನಾಗರಿಕ ಹಿತರಕ್ಷಣಾ ವೇದಿಕೆಯ ವತಿಯಿಂದ ಗಂಗೊಳ್ಳಿಯಲ್ಲಿ ನಡೆದ 68ನೇ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದಂದು ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು. 

 ಈ ಸಂದರ್ಭದಲ್ಲಿ  ಶಂಕರ  ಜಿ.ಭಾಸ್ಕರ,  ಲಕ್ಷ್ಮಣ,  ಗುರು ಪಟೇಲ್, ಗಣೇಶ, ಭಾಸ್ಕರ ಪೂಜಾರಿ, ಆನಂದ ಪೂಜಾರಿ ನಾಗರಾಜ ಶೇರುಗಾರ್, ಯಶವಂತ ಖಾರ್ವಿ,ನಾಗರಾಜ್  ಶೇರುಗಾರ್, ಭಾಸ್ಕರ ಬಿಲ್ಲವ, ಲಕ್ಷ್ಮಣ ಬಿಲ್ಲವ  ಗೋವಿಂದ ನಾಯಕ್ , ಸಂತೋಷ ಖಾರ್ವಿ, ಅಶೋಕ ಖಾರ್ವಿ,  ಅಂತೋನಿ, ಸುರೇಶ್ ಜಿ, ಶಂಕರ ಬಿಲ್ಲವ ಮೊದಲಾದವರು ಉಪಸ್ಥಿತರಿದ್ದರು.

  ಕರ್ನಾಟಕ ಕರಾವಳಿ ನಾಗರಿಕ ಹಿತ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ವೆಂಕಟೇಶ್ ಪೂಜಾರಿ ಕೊಡೇರಿ ಮನೆ ಸ್ವಾಗತಿಸಿದರು. ಸರಸ್ವತಿ ವಿದ್ಯಾಲಯದ ಉಪನ್ಯಾಸಕ ನರೇಂದ್ರ ಎಸ್ ಗಂಗೊಳ್ಳಿ ಕಾರ್ಯಕ್ರಮ ನಿರ್ವಹಿಸಿದರು. ಗಂಗೊಳ್ಳಿಯ ಬಿಲ್ಲವರ ಹಿತರಕ್ಷಣಾ  ವೇದಿಕೆಯ ಅಧ್ಯಕ್ಷ ಗೋಪಾಲ ಪೂಜಾರಿ ವಂದಿಸಿದರು.ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಕನ್ನಡ ಗೀತೆಗಳನ್ನು ಹಾಡಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!