spot_img
Monday, April 27, 2026
spot_img

ಕೋಡಿ ಗ್ರಾಮ ಬಡ ಮೀನುಗಾರರ ಹಕ್ಕುಪತ್ರಕ್ಕೆ ರಿಯಾಯಿತಿ ದರ ನಿಗದಿಗೊಳಿಸುವಂತೆ ಕಂದಾಯ ಸಚಿವ ಬೈರೇಗೌಡರಿಗೆ ಶಾಸಕ ಕಿರಣ್ ಕೊಡ್ಗಿ ಮನವಿ


ಕುಂದಾಪುರ: ಉಡುಪಿ ಜಿಲ್ಲೆ ಕುಂದಾಪುರ ವಿಧಾನ ಸಭಾ ಕ್ಷೇತ್ರದ ಕೋಡಿ ಕನ್ಯಾಣ ಗ್ರಾಮ ಪಂಚಾಯತ್ ಕೋಡಿ ಗ್ರಾಮದ ಬಡ ಮೀನುಗಾರರ ಹಕ್ಕು ಪತ್ರಕ್ಕೆ ನಿಗದಿಗೊಳಿಸಿದ ದರವನ್ನು ರಿಯಾಯಿತಿಗೊಳಿಸಿ ಹಕ್ಕು ಪತ್ರ ನೀಡಲು ಶಾಸಕ ಕಿರಣ್ ಕೊಡ್ಗಿ ಅವರು ಕಂದಾಯ ಸಚಿವ ಕೃಷ್ಣ ಬೈರೇಗೌಡರನ್ನು ವಿಕಾಸ ಸೌಧದಲ್ಲಿ ಭೇಟಿಯಾಗಿ ಮನವಿ ನೀಡಿದರು.

ಸುಮಾರು ೪೦೦ಕ್ಕೂ ಮಿಕ್ಕಿ ಅರ್ಜಿದಾರರ ಪೈಕಿ ಈಗಾಗಲೇ ಹಲವರಿಗೆ ಮಂಜೂರಾತಿ ನೀಡಲಾಗಿದ್ದು, ಕಂದಾಯ ಇಲಾಖೆ ನಿಗದಿಕರಿಸಿದ ಮೊತ್ತ ಪಾವತಿಸಲು ಬಡವರಿಗೆ ಕಷ್ಟ ಆದ್ದರಿಂದ, ಮಲ್ಪೆ ಪಡುಕರೆಯ ಕೊಳ ಗ್ರಾಮದಲ್ಲಿ ನೀಡಿರುವ ರಿಯಾಯಿತಿ ದರದ ಮಾದರಿಯಲ್ಲಿ ಕೋಡಿ ಗ್ರಾಮದ ಮೀನುಗಾರರಿಗೆ ಹಣ ಪಾವತಿಗೆ ಅವಕಾಶ ಮಾಡಿಕೊಡಬೇಕು ಎಂದು ಶಾಸಕ ಕೊಡ್ಗಿ ಕಂದಾಯ ಸಚಿವರಿಗೆ ಮನವಿ ಮಾಡಿದರು.

ಹಿಂದಿನ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಅವರು ಇಲಾಖೆಯ ಮುಂದೆ ಮಂಡಿಸಿದ ಮಾಹಿತಿಗಳನ್ನು ಸಚಿವರಿಗೆ ನೀಡಿದ ಕೊಡ್ಗಿಯವರು ಬಹುಬೇಗ ದರ ರಿಯಾಯಿತಿ ಆದೇಶ ನೀಡುವಂತೆ ಮನವಿ ಮಾಡಿದ್ದಾರೆ. ಶಾಸಕ ಕಿರಣ್ ಕೊಡ್ಗಿ ಅವರೊಂದಿಗೆ ಮಾಜಿ ಸಚಿವ ಶ್ರೀ ಕೋಟ ಶ್ರೀನಿವಾಸ ಪೂಜಾರಿಯವರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!