Saturday, September 14, 2024

ಮಾನಂಜೆ ವ್ಯವಸಾಯ ಸೇವಾ ಸಹಕಾರಿ ಸಂಘ: ಸಿದ್ಧಾಪುರ ಶಾಖೆಯ ಸ್ವಂತ ಕಟ್ಟಡ ‘ಬ್ರಾಹ್ಮೀ’ ಉದ್ಘಾಟನೆ


ಸಿದ್ಧಾಪುರ, ಜೂ.9: ಅವಿಭಜಿತ ದ.ಕ ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರ ಬಲಿಷ್ಠವಾಗಿ ಬೆಳೆಯುತ್ತಿದೆ. ಪಾರದರ್ಶಕವಾದ ಆಡಳಿತ ನೀಡುತ್ತಾ, ಶ್ರದ್ಧೆ, ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸುತ್ತಿವೆ. ಆ ಹಿನ್ನೆಲೆಯಲ್ಲಿ ಮಾನಂಜೆ ವ್ಯವಸಾಯ ಸೇವಾ ಸಹಕಾರಿ ಸಂಘದ ಸೇವೆ ಸಾಧನೆಯೇ ಸಾಕ್ಷಿ. ಅವಿಭಜಿತ ದ.ಕ ಜಿಲ್ಲೆಯಲ್ಲಿಯೇ ಈ ಸಂಸ್ಥೆ ಅತ್ಯುತ್ತಮ ಸಂಘವೆನ್ನುವ ಹಿರಿಮೆಗೆ ಪಾತ್ರವಾಗಿದೆ ಎಂದು ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು ಇದರ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ ಹೇಳಿದರು.

ಅವರು ಜೂ.9 ಶುಕ್ರವಾರ ಮಾನಂಜೆ ವ್ಯವಸಾಯ ಸೇವಾ ಸಹಕಾರಿ ಸಂಘ ನಿ, ಇದರ ಸಿದ್ಧಾಪುರ ಶಾಖೆಯ ಸ್ವಂತ ಕಟ್ಟಡ ಬ್ರಾಹ್ಮೀ ಯನ್ನು ಉದ್ಘಾಟಿಸಿ ಮಾತನಾಡಿದರು.

ಎರಡು ದಶಕಗಳಿಂದಿಚೆ ಸಹಕಾರ ಸಂಘಗಳ ಸುದೃಢವಾಗಿ ಬೆಳೆಯುತ್ತಿವೆ. ಹಿಂದೆ ಸದಸ್ಯರಿಗೆ ಸಾಲ ನೀಡಲು ಹಣದ ಸಮಸ್ಯೆಯಾಗುತ್ತಿತ್ತು. ಈಗ ದ.ಕ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಸಂಪನ್ಮೂಲಗಳ ಕ್ರೋಢೀಕರಿಸಿ ನೀಡುತ್ತಿದೆ. ಅವಿಭಜಿತ ಜಿಲ್ಲೆಯ ಎಲ್ಲ ಸಹಕಾರಿ ಸಂಘಗಳು ಕೂಡಾ ಇವತ್ತು ಸುದೃಢವಾಗಿ ಬೆಳೆಯುತ್ತಿವೆ. ಅದಕ್ಕೆ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರ ನಾಯಕತ್ವವೂ ಕೂಡಾ ಕಾರಣ ಎನ್ನಬಹುದು. 28 ಶಾಖೆಯನ್ನು ಹೊಂದಿದ್ದ ಎಸ್.ಸಿ.ಡಿಸಿಸಿ ಬ್ಯಾಂಕ್ ಇವತ್ತು 110 ಶಾಖೆಗಳನ್ನು ಹೊಂದಿದೆ. ಹವಾನಿಯಂತ್ರಿತ ವ್ಯವಸ್ಥೆಯನ್ನು ಒಳಗೊಂಡಿವೆ ಎಂದು ಹೇಳಿದ ಅವರು ಈ ಭಾಗದ ಸಹಕಾರ ಕ್ಷೇತ್ರದಲ್ಲಿ ಜಿ.ಎಸ್ ಆಚಾರ್, ಎ.ಜಿ ಕೊಡ್ಗಿಯವರ ಕೊಡುಗೆಯನ್ನು ಸ್ಮರಿಸಿಕೊಂಡರು.

ಭದ್ರತಾ ಕೊಠಡಿಯನ್ನು ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನ ಶ್ರೀ ಕ್ಷೇತ್ರ ಕಮಲಶಿಲೆ ಇಲ್ಲಿನ ಅನುವಂಶಿಕ ಆಡಳಿತ ಮೊಕ್ತೇಸರ ಎಸ್.ಸಚ್ಚಿದಾನಂದ ಚಾತ್ರ ಉದ್ಘಾಟಿಸಿ. ಸಹಕಾರ ಸಂಘಗಳು ಸೇವಾಮನೋಧರ್ಮದಡಿ ಕಾರ್ಯನಿರ್ವಹಿಸಿ, ಕೃಷಿ, ಉದ್ಯಮ, ವ್ಯವಹಾರಕ್ಕೆ ಸಹಕಾರ ಸಂಘಗಳ ಕೊಡುಗೆ ಪ್ರಮುಖವಾದುದು ಎಂದರು.

ಭದ್ರತಾ ಕೋಶದ ಉದ್ಘಾಟನೆಯನ್ನು ಕ್ಯಾಂಪ್ಕೋ ಲಿಮಿಟೆಡ್ ಮಂಗಳೂರು ಇದರ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ನೆರವೇರಿಸಿ, ಮಾನಂಜೆ ನಾರಾಯಣ ರಾಯರ ದೀರ್ಘ ಚಿಂತನೆಯೊಂದಿಗೆ ಆರಂಭವಾದ ಈ ಸಂಸ್ಥೆ ಹಲವು ಅಧ್ಯಕ್ಷರು, ನಿರ್ದೇಶಕರ ಪರಿಶ್ರಮದಿಂದ ಬೆಳವಣಿಗೆ ಹೊಂದಿದೆ. ಕಾಲಕಾಲಕ್ಕೆ ರೈತರಿಗೆ, ಗ್ರಾಹಕರಿಗೆ ಸೇವೆಯನ್ನು ಶ್ರದ್ದೆಯಿಂದ ಒದಗಿಸಿಕೊಡುವ ಮೂಲಕ ಮಾನಂಜೆ ವ್ಯವಸಾಯ ಸೇವಾ ಸಹಕಾರಿ ಸಂಘ ಪ್ರತಿಷ್ಠಿತ ಸಹಕಾರ ಸಂಘಗಳ ಸಾಲಿನಲ್ಲಿ ಸೇರಿದೆ ಎಂದರು.

ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾದ ಬಿ.ಜಯಕರ ಶೆಟ್ಟಿ ಇಂದ್ರಾಳಿ ಅವರು ಲಾಕರ್ ಕೀ ಹಸ್ತಾಂತರಿಸಿ ಮಾತನಾಡಿ, ಸಹಕಾರಿ ಸಂಘಗಳು ಸಾಲ ನೀಡುವುದೇ ಪ್ರಾಮುಖ್ಯವಲ್ಲ. ಸಾಲ ಮರುಪಾವತಿ ಕೂಡಾ ಅಷ್ಟೇ ಮಹತ್ವದ್ದಾಗಿದೆ. ಗ್ರಾಮೀಣ ಪ್ರದೇಶದ ಕಟ್ಟಕಡೆಯ ವ್ಯಕ್ತಿಗೂ ಸಹಕಾರ ಕ್ಷೇತ್ರದ ಎಲ್ಲ ರೀತಿಯ ಸಹಕಾರ ನೀಡುತ್ತಿದೆ. ದ.ಕ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಮಾರ್ಗದರ್ಶನ ಇವತ್ತು ಎಲ್ಲಾ ಗ್ರಾಮೀಣ ಪ್ರದೇಶದ ಸಹಕಾರ ಸಂಸ್ಥೆಗಳ ಬೆಳವಣಿಗೆಗೆ ಕಾರಣವಾಗುತ್ತಿದೆ ಎಂದರು.

ಸ್ವ-ಸಹಾಯ ಗುಂಪುಗಳ ಸಾಲ ವಿತರಣೆಯನ್ನು ಸಿದ್ಧಾಪುರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶೇಖರ ಕುಲಾಲ ನೆರವೇರಿಸಿದರು. ಠೇವಣಿ ಪತ್ರವನ್ನು ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರಾದ ಎಸ್.ರಾಜು ಪೂಜಾರಿ ವಿತರಿಸಿದರು. ಸಾಲ ಪತ್ರವನ್ನು ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರಾದ ಎಂ.ಮಹೇಶ್ ಹೆಗ್ಡೆ ವಿತರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಾನಂಜೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಎಸ್.ಶಂಕರನಾರಾಯಣ ಯಡಿಯಾಳ ಮಾತನಾಡಿ, 2013ರಲ್ಲಿ ಈ ಸಂಸ್ಥೆಯ ಅಧ್ಯಕ್ಷರಾಗಿದ್ದ ವಾಸುದೇವ ಯಡಿಯಾಳ, ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿದ್ದ ಶ್ರೀಕಾಂತ ಕನ್ನಂತ ಸಮಯದಲ್ಲಿ ಸಿದ್ಧಾಪುರ ಶಾಖೆ ಆರಂಭಗೊಂಡಿತು. ಕಳೆದ ಎರಡು ವರ್ಷದಿಂದ ಈ ಸಂಸ್ಥೆಗೆ ಸ್ವಂತ ಕಟ್ಟಡ ನಿರ್ಮಿಸಬೇಕು ಎನ್ನುವ ನಿಟ್ಟಿನಲ್ಲಿ ನಮ್ಮ ಆಡಳಿತ ಮಂಡಳಿ ಕಾರ್ಯ್ಮೋನ್ಮುಖವಾಗಿ ಸಿದ್ಧಾಪುರ ಮುಖ್ಯರಸ್ತೆಯಲ್ಲಿ 24 ಸೆಂಟ್ಸ್ ಸ್ಥಳ ಖರೀದಿ ಮಾಡಲಾಯಿತು. ಇದು ಮಾನಂಜೆ ವ್ಯವಸಾಯ ಸೇವಾ ಸಹಕಾರಿ ಸಂಘದ ಹಿರಿಮೆ. ಮುಂದೆ ಅಭಿವೃದ್ದಿಗೆ ಬಹು ಸಾಧ್ಯತೆಗಳು ಇಲ್ಲಿವೆ ಎಂದರು.

ನಾನು ಅಧ್ಯಕ್ಷ ಸ್ಥಾನ ವಹಿಸಿಕೊಂಡಾಗ ನನ್ನಲ್ಲಿ ಮೂರು ಮಹತ್ವದ ಕನಸುಗಳಿದ್ದವು. ಸಂಸ್ಥೆಯ ಸಂಸ್ಥಾಪಕರಾದ ಮಾನಂಜೆ ನಾರಾಯಣ ರಾವ್ ಪ್ರತಿಮೆ ಸ್ಥಾಪನೆ, ಸಿದ್ದಾಪುರದಲ್ಲಿ ಸ್ವಂತ ಶಾಖಾ ಕಟ್ಟಡ ನಿರ್ಮಾಣ, ಹಾಗೂ ಮೂರು ಲಕ್ಷದ ತನಕ ಬೆಳೆಸಾಲ ಮಾಡಿದ ಸಂಘದ ಸದಸ್ಯ ಮರಣ ಹೊಂದಿದರೆ ಆ ಸಾಲಮನ್ನಾ ಮಾಡುವ ನಿಟ್ಟಿನಲ್ಲಿ ಆಡಳಿತಾತ್ಮಕವಾದ ಪ್ರಯತ್ನಗಳು ನಡೆಯುತ್ತಿದ್ದು ಮಹಾಸಭೆಯಲ್ಲಿ ಅನುಮೋದನೆ ಪಡೆಯಲಾಗುವುದು ಎಂದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕುಂದಾಪುರ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಅರುಣ ಕುಮಾರ್ ಎಸ್.ವಿ., ಕುಂದಾಪುರ ತಾಲೂಕು ಕೃಷಿ ಉತ್ಪನ್ನ ಮಾರಾಟ ಸಹಕಾರಿ ಸಂಘದ ಅಧ್ಯಕ್ಷರಾದ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ಮಾನಂಜೆ ವ್ಯವಸಾಯ ಸೇವಾ ಸಹಕಾರಿ ಸಂಘದ ಹಿರಿಯ ಸದಸ್ಯರಾದ ಎಸ್.ವಾಸುದೇವ ಯಡಿಯಾಳ, ಸಂಘದ ಮಾಜಿ ಅಧ್ಯಕ್ಷ ರಾಘವೇಂದ್ರ ರಾವ್ ಭಾಗವಹಿಸಿದ್ದರು.

ಸಂಘದ ಉಪಾಧ್ಯಕ್ಷರಾದ ರಘುರಾಮ ಶೆಟ್ಟಿ, ನಿರ್ದೇಶಕರಾದ ಎಂ.ಎಸ್.ವಿಷ್ಣುಮೂರ್ತಿ, ರವಿ ಗಾಣಿಗ, ಹೆಚ್.ರಾಜೀವ ಪೂಜಾರಿ, ರತ್ನಾಕರ ಶೆಟ್ಟಿ, ಜಯರಾಮ ನಾಯ್ಕ, ನಾಗಪ್ಪ ಪೂಜಾರಿ, ಇ.ಸುಬ್ರಾಯ ಹೆಗ್ಡೆ, ಶ್ರೀಮತಿ ಅಂಬಿಕಾ ಮಯ್ಯ, ಶ್ರೀಮತಿ ಜ್ಯೋತಿ, ಎಸ್,.ರಾಜು, ಯು.ಕರುಣಾಕರ ನಾಯ್ಕ, ಯು.ಪ್ರಭಾಕರ ನಾಯ್ಕ, ಹಾಗೂ ಜಿಲ್ಲಾ ಬ್ಯಾಂಕ್ ಪ್ರತಿನಿಧಿ ಎ.ಉದಯ ಶೆಟ್ಟಿ, ಶಾಖಾ ವ್ಯವಸ್ಥಾಪಕರಾದ ಎಸ್.ಸತ್ಯನಾರಾಯಣ ಕನ್ನಂತ, ತಾಲೂಕಿನ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು, ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕಟ್ಟಡ ನಿರ್ಮಾಣದಲ್ಲಿ ತೊಡಗಿಸಿಕೊಂಡ ಇಂಜಿನಿಯರ್ ಎಸ್.ಚಂದ್ರಶೇಖರ ಯಡಿಯಾಳ, ಕಟ್ಟಡದ ವಿನ್ಯಾಸ ರೂಪಿಸಿದ ಸತೀಶ್ ಭಟ್, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು ಇದರ ಉಪಾಧ್ಯಕ್ಷರಾದ ವಿನಯ ಕುಮಾರ್ ಸೂರಿಂಜೆ ಅವರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷರಾದ ಎಸ್.ಶಂಕರನಾರಾಯಣ ಯಡಿಯಾಳ ಅವರನ್ನು ಸನ್ಮಾನಿಸಲಾಯಿತು.

ಗುಲಾಬಿ ಮತ್ತು ತಂಡದವರು ಪ್ರಾರ್ಥನೆ ಮಾಡಿದರು. ಸಂಘದ ನಿರ್ದೇಶಕ ಜಯರಾಮ ನಾಯ್ಕ ಸ್ವಾಗತಿಸಿದರು. ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಬಿ.ಮಂಜುನಾಥ ನಾಯ್ಕ ಸಂಘದ ವರದಿ ವಾಚಿಸಿದರು. ಸಂಸ್ಥೆಯ ಎ.ಜಿ.ಎಂ. ಚೆನ್ನ ಪೂಜಾರಿ ವಂದಿಸಿದರು. ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರ್ವಹಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!