spot_img
Monday, April 27, 2026
spot_img

ನವೋದಯ ಟ್ರಸ್ಟ್ : ವಿಮೆ ಚೆಕ್ ವಿತರಣೆ


ಮಂಗಳೂರು: ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್ ಪ್ರಾಯೋಜಿತ ನವೋದಯ ಸ್ವಸಹಾಯ ಸಂಘದ ಸದಸ್ಯರಿಬ್ಬರು ಈಚೆಗೆ ಆಕಸ್ಮಿಕ ಮರಣ ಹೊಂದಿದ್ದು,  ಈ ಕುಟುಂಬದ ವಾರಿಸುದಾರರಿಗೆ ವಿಮೆ ಚೆಕ್ ನ್ನು  ಶನಿವಾರ ಸಂಸ್ಥೆಯ ಮೇನೆಜಿಂಗ್ ಟ್ರಸ್ಟಿ ಹಾಗೂ ಎಸ್ ಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ವಿತರಣೆ ಮಾಡಿದರು.

ಉಳ್ಳಾಲ ತಾಲೂಕಿನ ದೇರಳಕಟ್ಟೆ ನವಶಕ್ತಿ ನವೋದಯ ಸ್ವಸಹಾಯ ಸಂಘದ ಸದಸ್ಯ ಗಣೇಶ ಬಿ ಮತ್ತು ಮಂಗಳೂರು ತಾಲೂಕಿನ ದೇರೆಬೈಲ್ ಮಂದಾರ ನವೋದಯ ಸ್ವಸಹಾಯ ಸಂಘದ ಸದಸ್ಯ ಲೋಕನಾಥ್ ಇತ್ತೀಚೆಗೆ ಆಕಸ್ಮಿಕ ಮರಣ ಹೊಂದಿದ್ದರು.

ಮೃತ ಗಣೇಶ್ ಬಿ. ಅವರ ಪತ್ನಿ ಶ್ರೀಮತಿ ವಾಣಿ ಹಾಗೂ ಮೃತ ಲೋಕನಾಥ್ ಅವರ ಪತ್ನಿ ಶ್ರೀಮತಿ ತುಳಸಿ ಅವರಿಗೆ ವಿಮಾ ಯೋಜನೆಯ ತಲಾ ಒಂದು ಲಕ್ಷದ ಚೆಕ್‌ನ್ನು ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರು ವಿತರಿಸಿದರು. ಈ ಸಂದರ್ಭದಲ್ಲಿ ಎಸ್.ಸಿಡಿಸಿಸಿ ಬ್ಯಾಂಕಿನ ನಿರ್ದೇಶಕ ಭಾಸ್ಕರ್ ಎಸ್.ಕೋಟ್ಯಾನ್, ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್, ಟ್ರಸ್ಟಿ ಸುನಿಲ್ ಕುಮಾರ್ ಬಜಗೋಳಿ, ಟ್ರಸ್ಟ್‌ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪೂರ್ಣಿಮಾ ಶೆಟ್ಟಿ ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!