Sunday, September 8, 2024

ಕಾಂಗ್ರೆಸ್ ನಾಯಕರ ಸಹಿಯ ಗ್ಯಾರಂಟಿ ಕಾರ್ಡ್ ಜಾರಿಯಾಗಿದೆ, ಈಗ ಮಾಜಿ ಶಾಸಕರು ಉತ್ತರಿಸಬೇಕಾಗಿದೆ-ವಿಕಾಸ ಹೆಗ್ಡೆ


ಕುಂದಾಪುರ: ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟರು ಚುನಾವಣಾ ಪ್ರಚಾರ ಸಭೆಯ ವೇದಿಕೆಗಳಲ್ಲಿ ಹೇಳುತ್ತಿದ್ದರು ಕಾಂಗ್ರೆಸ್ ಗ್ಯಾರಂಟಿ ಕಾರ್ಡ್‌ನಲ್ಲಿ ಸಿದ್ದರಾಮಯ್ಯ ಮತ್ತು ಶಿವ ಕುಮಾರ್ ಸಹಿ ಇದೆ ಅದನ್ನು ನಂಬಬೇಡಿ ಅದರಲ್ಲಿ ಜಿಲ್ಲಾಧಿಕಾರಿ ಅಥವಾ ತಹಶೀಲ್ದಾರ್ ಸಹಿ ಇದ್ದರೆ ನಂಬಬಹುದು ಎಂದು… ಸುದೀರ್ಘ ಅವಧಿಗೆ ಶಾಸನ ಸಭೆಯಲ್ಲಿ ಸದಸ್ಯರಾಗಿದ್ದ ಮಾಜಿ ಶಾಸಕರಿಗೆ ಶಾಸಕಾಂಗ, ಕಾರ್ಯಾಂಗದ ಜವಾಬ್ದಾರಿ, ಕರ್ತವ್ಯದ ಅರಿವಿಲ್ಲದೇ ಇದ್ದದ್ದು ದುರಂತ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಐದು ಗ್ಯಾರಂಟಿಗಳನ್ನು ಜಾರಿಗೊಳಿಸುವುದಾಗಿ ಹೇಳಿ ಅದನ್ನು ಜಾರಿಗೊಳಿಸುವ ಬದ್ಧತೆಗೆ ಗ್ಯಾರಂಟಿ ಕಾರ್ಡ್‌ಗೆ ಗ್ಯಾರಂಟಿಯಾಗಿ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ರವರು ಸಹಿ ಮಾಡಿದ್ದು, ಯಾವುದೇ ಕಾರ್ಯಕ್ರಮ ಅಥವಾ ಯೋಜನೆಯನ್ನು ಒಂದು ಸರ್ಕಾರ ಜಾರಿಗೆ ತರಬೇಕು ಬಿಟ್ಟರೆ ಅದು ಅಧಿಕಾರಿಗಳ ಕೆಲಸವಲ್ಲ್ಲ, ಸರ್ಕಾರದ ಯೋಜನೆಯ ಅನುಷ್ಟಾನದ ಕೆಲಸ ಮಾತ್ರ ಅಧಿಕಾರಿಗಳದ್ದು, ಈಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ ಹಾಗೂ ಕೊಟ್ಟ ಮಾತಿನಂತೆ ಐದು ಗ್ಯಾರಂಟಿಗಳನ್ನು ಜಾರಿ ಮಾಡಿಯಾಗಿದೆ, ಸರ್ಕಾರದಿಂದ ಘೋಷಣೆಯಾದ ಈ ಐದು ಕಾರ್ಯಕ್ರಮಗಳನ್ನು ಅರ್ಹ ಫಲಾನುಭವಿಗಳಿಗೆ ಮುಟ್ಟಿಸುವ ಕಾರ್ಯ ಕಾರ್ಯಾಂಗದ್ದು, ಮಾಜಿ ಶಾಸಕರಿಗೆ ಅನುಭವದ ಕೊರತೆಯೋ ಇಲ್ಲಾ ಚುನಾವಣೆ ಗೆಲುವಿಗೆ ಮತದಾರರ ದಾರಿ ತಪ್ಪಿಸಿದ್ದೋ ಮಾಜಿ ಶಾಸಕರೇ ಉತ್ತರಿಸಬೇಕೆಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಪತ್ರಿಕಾ ಹೇಳಿಕೆ ಮೂಲಕ ಆಗ್ರಹಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!