spot_img
Friday, August 14, 2026
spot_img

ಸೌಡ ಹೊಳೆಯಲ್ಲಿ ಮುಳುಗಿ ಯುವಕ ಸಾವು

ಕುಂದಾಪುರ: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಐವರ್ನಾಡು ಗ್ರಾಮದ ಮಡ್ತಿಲ ಮೀರನಾಥ್ ಗೌಡ ಎಂಬುವರ ಮಗ ಸುಹಾಸ್ಂ.ಎಂ. (21) ಎಂಬಾತ ಶುಕ್ರವಾರ ಮಧ್ಯಾಹ್ನ ಕುಂದಾಪುರ ತಾಲೂಕಿನ ಬಿದ್ಕಲ್ ಕಟ್ಟೆ ಸಮೀಪದ ಸೌಡ ಎಂಬಲ್ಲಿ ಹೊಳೆಗೆ ಸ್ನೇಹಿತರೊಂದಿಗೆ ಈಜಲು ತೆರಳಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಈಜುತ್ತಿರುವ ಸಂದರ್ಭ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದ ಸುಹಾಸ್ ಪತ್ತೆಗೆ ಸಾಕಷ್ಟು ಪ್ರಯತ್ನ ಮಾಡಲಾಗಿತ್ತು. ಶನಿವಾರ ಮೃತದೇಹ ಪತ್ತೆಯಾಗಿದೆ.

ಸುಹಾಸ್ ಮೂಡಬಿದ್ರೆಯ ಆಯುರ್ವೇದ ಔಷಧಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು ಶುಕ್ರವಾರ ಬೆಳಿಗ್ಗೆ ತನ್ನ ಮನೆಯಾದ ಐವರ್ನಾಡಿನ ಮಡ್ತಿಲದಿಂದ ಮೂಡಬಿದ್ರೆಗೆ ಬಂದಿದ್ದ. ಅಲ್ಲಿಂದ ಸ್ನೇಹಿತರೊಂದಿಗೆ ಸೌಡ ಹೊಳೆಗೆ ಈಜಾಡಲು ಬಂದಿದ್ದರು ಎನ್ನಲಾಗಿದೆ. ಸೌಡ ಸಮೀಪದ ಹೊಳೆಯಲ್ಲಿ ನೀರಿಗಿಳಿದ ಸುಹಾಸ್ ಅಳ ಅರಿಯದೆ ಮುಳುಗಿದ್ದು ಜೊತೆಗಿದ್ದ ಯುವಕರು ತಕ್ಷಣ ಸ್ಥಳೀಯರಿಗೆ ಸುದ್ಧಿ ಮುಟ್ಟಿಸಿದ್ದರು. ತಕ್ಷಣ ಕಾಂಗ್ರೆಸ್ ಮುಖಂಡ ಕಾನ್ಮಕ್ಕಿ ಹರಿಪ್ರಸಾದ್ ಶೆಟ್ಟಿಯವರು ಕೋಟ ಪೊಲೀಸರಿಗೆ ಹಾಗೂ ಸಂಬಂಧಿಕರಿಗೆ ಸುದ್ಧಿ ಮುಟ್ಟಿಸಿದ್ದರು.

ಅಗ್ನಿಶಾಮಕ ದಳ ಹಾಗೂ ಮುಳುಗು ತಜ್ಞರು ಧಾವಿಸಿ ಶೋಧ ಕಾರ್ಯ ನಡೆಸಿದ್ದರು. ಶೋಧ ಕಾರ್ಯದಲ್ಲಿ ಗ್ರಾ.ಪಂ. ಅಧ್ಯಕ್ಷ ಸಿ.ಜಗನ್ನಾಥ ಶೆಟ್ಟಿ, ಲವಕರ ಶೆಟ್ಟಿ, ಸ್ಥಳೀಯರು ಯುವಕರು ಶೋಧ ಕಾರ್ಯಕ್ರಮದಲ್ಲಿ ಸಹಕರಿಸಿದ್ದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!