Sunday, September 8, 2024

ಚುನಾವಣೆ: ಹೆಚ್ಚಳವಾಗದ ಕಾರ್ಯಕರ್ತರ ಸಂಭಾವನೆ!?


ಚುನಾವಣೆ ಎಂದಾಗ ಅದರಲ್ಲಿ ಮೇಲ್ನೋಟಕ್ಕೆ ಗುರುತಿಸಲ್ಪಡುವವರು ಅಭ್ಯರ್ಥಿಗಳು, ಪಕ್ಷದ ಮುಖಂಡರುಗಳು. ಆದರೆ ಇಡಿ ಚುನಾವಣೆಯನ್ನು ವ್ಯವಸ್ಥಿತಗೊಳಿಸುವಲ್ಲಿ ಕಾರ್ಯಕರ್ತರು ಪಡುವ ಪರಿಶ್ರಮ ಯಾರ ಗಮನಕ್ಕೂ ಬರುವುದಿಲ್ಲ. ಚುನಾವಣೆಯಲ್ಲಿ ಮನೆ ಭೇಟಿ, ಮತದಾರರ ಓಲೈಸುವಿಕೆಯಿಂದ ಆರಂಭಿಸಿ ಪಾದಯಾತ್ರೆ, ರೋಡ್ ಶೋ, ಸಮಾವೇಶಗಳಲ್ಲಿ ಪ್ರಮುಖ ಕೆಲಸಗಳನ್ನು ನಿರ್ವಹಿಸುತ್ತಾರೆ. ಜನರನ್ನು ಒಟ್ಟುಗುಡಿಸುವುದು, ಅವರಿಂದ ಬೈಗುಳಗಳನ್ನು ಕೇಳುವುದು ಕೂಡಾ ಕಾರ್ಯಕರ್ತನೇ ಆಗಿರುತ್ತಾನೆ. ಆದರೆ ಕಾರ್ಯಕರ್ತನ ಸಂಭಾವನೆ ಮಾತ್ರ ಇನ್ನೂ ರೂ.೫೦೦ ರಲ್ಲಿಯೇ ಇರುವುದು ವಿಪರ್ಯಾಸ.

ಕೆಲವೊಂದು ರಾಜಕೀಯ ಮುಖಂಡರು, ಅಭ್ಯರ್ಥಿಗಳಿಗೆ ಮಾತ್ರ ಕಾರ್ಯಕರ್ತರ ಶ್ರಮದ ಅರಿವಿರುತ್ತದೆ. ಉಳಿದವರು ಹಣ ಕೊಡುತ್ತೇವೆ. ಅವರು ಕೆಲಸ ಮಾಡುತ್ತಾರೆ ಎನ್ನುವ ಮನೋಭಾವದಲ್ಲಿ ಇರುತ್ತಾರೆ. ಈ ಕಟ್ಟಕಡೆಯ ಕಾರ್ಯಕರ್ತ ಮಾತ್ರ ತಮ್ಮ ಅಭ್ಯರ್ಥಿಯ ಗೆಲುವಿಗೆ ಬಿಸಿಲು, ಸೆಖೆ, ಮಳೆಯನ್ನು ಲೆಕ್ಕಿಸದೇ ತಿರುಗಾಟ ಮಾಡುತ್ತಾನೆ. ಆತನ ಶ್ರಮಕ್ಕೆ ಮಾತ್ರ ಸೂಕ್ತ ಸಂಭಾವನೆ ಇಂದಿಗೂ ಸಿಗುತ್ತಿಲ್ಲ. ಹಲವಾರು ಚುನಾವಣೆಗಳಲ್ಲಿ ಕೆಲಸ ಮಾಡಿರುವ ಕಾರ್ಯಕರ್ತರು ಈ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸುತ್ತಾರೆ. ಈಗ ನಿತ್ಯವೂ ಅಗತ್ಯ ವಸ್ತುಗಳ ಧಾರಣೆ ಹೆಚ್ಚಳ ವಾಗುತ್ತದೆ. ಆದರೆ ಐದು ವರ್ಷಕ್ಕೊಮ್ಮೆ ಬರುವ ಚುನಾವಣೆ ಸಂದರ್ಭದಲ್ಲಿ ಕಟ್ಟಕಡೆಯ ಕಾರ್ಯಕರ್ತನಿಗೆ ಸಿಗುವ ಸಂಭಾವನೆ ಮಾತ್ರ ಹೆಚ್ಚಳವಾಗುವುದಿಲ್ಲ.

ಈ ಬಾರಿ 500ರಿಂದ 1000 ತನಕ ಕಾರ್ಯಕರ್ತರ ಸಂಭಾವನೆ ಇದೆ. ಕೆಲವೆಡೆ ಪಕ್ಷದಲ್ಲಿ ಅವರ ಹಿರಿತನದಲ್ಲಿ ಸಂಭಾವನೆಯಿದೆ. ಇನ್ನೂ ಕೆಲವೆಡೆ ಪಕ್ಷಾಂತರ ಮಾಡಿದ ಕಾರ್ಯಕರ್ತರಿಗೆ ಸ್ವಲ್ಪ ಗೌರವ, ಸಂಭಾವನೆಯಲ್ಲಿಯೂ ವಿಶೇಷ ಮಾನದಂಡ ಎಲ್ಲ ಪಕ್ಷಗಳೂ ಮಾಡಿಕೊಂಡಿವೆ. ಆದರೆ ಮೂಲ ಪಕ್ಷದಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ಕಾರ್ಯಕರ್ತ ಮಾತ್ರ ಸ್ಥಳೀಯ ಮುಖಂಡರು ಕೊಟ್ಟಿದ್ದನ್ನು ಸ್ವೀಕರಿಸುವ ಸ್ವೀಕೃತ ಮನಸ್ಥಿತಿಯವರು.

ಆದರೆ ಇವತ್ತು ಚುನಾವಣೆ ಎಂದರೆ ಕೋಟ್ಯಾಂತರ ರೂಪಾಯಿ ಹಣವನ್ನು ಹೂಡುವ ವ್ಯವಹಾರದ ರೀತಿಯಾಗಿದೆ. ಎಲ್ಲದ್ದಕ್ಕೂ ಬೇಕಾಬಿಟ್ಟಿ ಖರ್ಚು ಮಾಡುವ ಪಕ್ಷಗಳ ಮುಖಂಡರು ಕಾರ್ಯಕರ್ತರ ವಿಚಾರ ಬಂದಾಗ ಜಿಪುಣತನ ತೋರಿಸುತ್ತಾರೆ. ಕೆಲವೆಡೆ ಸ್ಥಳೀಯ ಮರಿ ನಾಯಕರುಗಳಿಗೆ ಹಣದ ಜವಬ್ದಾರಿ ನೀಡಿರುತ್ತಾರೆ. ಅವರು ಅಲ್ಲಿಯೂ ತಮ್ಮ ಕಮಿಷನ್ ಇರಿಸಿಕೊಂಡು ಕಾರ್ಯಕರ್ತರಿಗೆ ಕೊಡುವ ಪರಿಪಾಠವಿದೆ. ಪಕ್ಷದ ಪ್ರಮುಖರಲ್ಲಿ ಕಾರ್ಯಕರ್ತರಿಗೆ 1000 ಕೊಡಬೇಕು ಎಂದು ಹೇಳಿ ತಗೆದುಕೊಂಡು 500, 750 ಕೊಡುವ ಮಂದಿಯೂ ಇದ್ದಾರೆ. ರಾಜಕೀಯ ವ್ಯವಸ್ಥೆ ಎಂದರೆ ಈಗ ನಂಬಿಕೆಯನ್ನೇ ಕಳೆದುಕೊಂಡಿದೆ. ವಿಶ್ವಾಸ ಕಳೆದುಕೊಂಡ ಹಾದಿಯಲ್ಲಿ ರಾಜಕೀಯ ರಥ ಸಾಗುತ್ತಿದೆ.

ಚುನಾವಣೆಯ ಹಬ್ಬದಲ್ಲಿ ಕೆಲವೊಂದಿಷ್ಟು ಮಂದಿ ಬೇಜಾನ್ ಹಣ ಮಾಡಿಕೊಳ್ಳುತ್ತಾರೆ. ಪಾಪದ ಕಾರ್ಯಕರ್ತ ಮಾತ್ರ ಬಿಸಿಲು ಬೆಂಕಿಯಲ್ಲಿ ಸುತ್ತಾಡಿದ್ದೇ ಬಂತು. ಕೊನೆಗೊಂದು ಕೃತಜ್ಞತೆ ಕೂಡಾ ಸಿಗುವುದಿಲ್ಲ. ಸಮಾವೇಶ, ರೋಡ್ ಶೋ, ದೊಡ್ಡ ದೊಡ್ಡ ನಾಯಕರುಗಳ ಭೇಟಿಯ ಸಂದರ್ಭ ಜನರನ್ನು ಕರೆ ತರುವಲ್ಲಿ ಜವಬ್ದಾರಿ ತಗೆದುಕೊಂಡು ಮರಿ ನಾಯಕರುಗಳು ಅಲ್ಲಿಯೇ ಒಂದಿಷ್ಟು ಹಣ ಮಾಡಿಕೊಳ್ಳುತ್ತಾರೆ. ಚುನಾವಣೆ ಸಂದರ್ಭದಲ್ಲಿ ಜನರ ತಲೆಗೆ ಕೆಲವಡೆ 1000, 2000 ಇದೆ. ಬೆಂಗಳೂರಿನಂತಹ ನಗರ ಪ್ರದೇಶದಲ್ಲಿ ಕನಿಷ್ಠ 2000 ಇದೆ. ಈ ಖರ್ಚುವೆಚ್ಚಗಳು ಚುನಾವಣಾ ಆಯೋಗದ ಗಮನಕ್ಕೇ ಬರುವುದಿಲ್ಲ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!