spot_img
Monday, March 30, 2026
spot_img

ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರಿಗೆ  “ಮೋಸ್ಟ್ ಇನ್ನೋವೇಟೀವ್ ಬ್ಯುಸಿನೆಸ್ ಅವಾರ್ಡ್” 

ಮಂಗಳೂರು: ಗ್ಲೋಬಲ್ ಲೀಡರ್ಸ್ ಫೌಂಡೇಶನ್ (ಜಿಎಲ್ ಎಘ್ ) ನವದೆಹಲಿ  ಅತ್ಯುತ್ತಮ ಸಾಂಸ್ಥಿಕ ನಾಯಕತ್ವದ ಆಧಾರದಲ್ಲಿ ನೀಡುವ “ಮೋಸ್ಟ್ ಆನ್ನೋವೇಟೀವ್ ಬ್ಯುಸಿನೆಸ್ ಲೀಡರ್ಸ್ ಅವಾರ್ಡ್ – 2022″ ವೈಯಕ್ತಿಕ ಪ್ರಶಸ್ತಿಯು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್ ಸಿಡಿಸಿಸಿ ಬ್ಯಾಂಕ್) ಅಧ್ಯಕ್ಷರಾದ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರಿಗೆ ಲಭಿಸಿದೆ.ಭಾರತದಲ್ಲಿನ ಕಾರ್ಪೊರೇಟ್ ನಾಯಕತ್ವ ಕಾರ್ಯ ಚಟುವಟಿಕೆಗಳಿಗೆ ಸಂಬಂಧಿಸಿದ ಹೊಸ ಅಭಿವೃದ್ಧಿ, ಕಾರ್ಯಕ್ಷಮತೆ ಹಾಗೂ ಅದ್ಬುತ ಸಾಧನೆಯನ್ನು ಗುರುತಿಸಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಗ್ಲೋಬಲ್ ಲೀಡರ್ಸ್ ಫೌಂಡೇಶನ್ ನೀಡುತ್ತಿದ್ದು, ರಾಜೇಂದ್ರ ಕುಮಾರ್ ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ನೀಡಿದ ಗಣನೀಯ ಸೇವೆಯನ್ನು  ಪರಿಗಣಿಸಿ 2022ರ ” ಮೋಸ್ಟ್ ಇನ್ನೋವೇಟೀವ್ ಬ್ಯುಸಿನೆಸ್ ಅವಾರ್ಡ್ ” ಗೆ ಆಯ್ಕೆ ಮಾಡಿದೆ .
ಗೋವಾದಲ್ಲಿ ನಡೆಯುವ ಗ್ಲೋಬಲ್ ಲೀಡರ್ ಶಿಪ್ ಶೃಂಗಸಭೆಯಲ್ಲಿ ರಾಜೇಂದ್ರ ಕುಮಾರ್ ಅವರು ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಕರಿಸಲಿರುವರು.ಡಾ.ಎಂ.ಎನ್ . ರಾಜೇಂದ್ರ ಕುಮಾರ್ ಸಾರಥ್ಯದಲ್ಲಿ   ಎಸ್ ಸಿಡಿಸಿಸಿ ಬ್ಯಾಂಕ್, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೊಸ ಹೊಸ ಆವಿಷ್ಕಾರಗಳೊಂದಿಗೆ  ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಜನಸಾಮಾನ್ಯರ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರವ ಎಸ್ ಸಿಡಿಸಿಸಿ ಬ್ಯಾಂಕ್ ರಾಜೇಂದ್ರ ಕುಮಾರ್ ಅವರ ಕಾರ್ಯ ವೈಖರಿಯಿಂದಲೇ  “ಜನಸ್ನೇಹಿ” ಬ್ಯಾಂಕ್ ಎನಿಸಿಕೊಂಡಿದೆ.ಭಾರತ ಸರ್ಕಾರದ ಬಹು ಮಹಾತ್ವಾಕಾಂಕ್ಷೆಯ  ಅಟಲ್ ಪಿಂಚಣಿ ಯೋಜನೆಯನ್ನು ಸಮರ್ಪಕವಾಗಿ ಜ್ಯಾರಿಗೆ ತರುವಲ್ಲೂ ಎಸ್ ಸಿಡಿಸಿಸಿ ಬ್ಯಾಂಕ್ ಮುಂಚೂಣಿಯಲ್ಲಿ ಗುರುತಿಸುವಲ್ಲೂ ರಾಜೇಂದ್ರ ಕುಮಾರ್ ಕಾರ್ಯ ಸಾಧನೆ ಮೇಲೈಸಿದೆ . ಈ ಯೋಜನೆಯಲ್ಲಿ ದಾಖಲೆಯ ಪ್ರಮಾಣದಲ್ಲಿ ಚಂದಾದಾರರನ್ನು ನೊಂದಾಯಿಸಿದ  ಎಸ್ ಸಿಡಿಸಿಸಿ ಬ್ಯಾಂಕ್ ವರದಿ ವರ್ಷದಲ್ಲಿ ಎರಡು ಬಾರಿ ಭಾರತ ಸರ್ಕಾರದ ಹಣಕಾಸು ಸಚಿವಾಲಯದ ಹಣಕಾಸು ಸೇವೆಗಳ ಇಲಾಖೆಯಿಂದ ಪ್ರಶಸ್ತಿಗೆ ಪಾತ್ರವಾಗಿದೆ. ಹೀಗೆ ಜನೋಪಯೋಗಿ ಕಾರ್ಯನಿರ್ವಹಣೆಯ ಮೂಲಕ ಎಸ್ ಸಿಡಿಸಿಸಿ ಬ್ಯಾಂಕಿನ ಪ್ರಗತಿಗೆ ಕಾರಣರಾಗಿರುವ ರಾಜೇಂದ್ರ ಕುಮಾರ್ ಹಲವಾರು ರಾಷ್ಟ್ರೀಯ , ಅಂತರರಾಷ್ಟ್ರೀಯ ಪ್ರಶಸ್ತಿಗಳಿಂದ ಪುರಸ್ಕೃತರಾಗಿದ್ದಾರೆ.
ಈಚೆಗೆ ಇನ್ಸ್ಟಿಟ್ಯೂಟ್ ಆಫ್ ಎಕನಾಮಿಕ್ ಸ್ಟಡೀಸ್ ನವದೆಹಲಿ ಇವರು ಈಚೆಗೆ ಔಟ್ ಸ್ಟಾಂಡಿಂಗ್ ಲೀಡರ್ ಶಿಪ್ ಅವಾರ್ಡ್ ನ್ನು ಕೂಡ ನೀಡಿ ಗೌರವಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!