Sunday, April 28, 2024

ಶಿಲ್ಪಾ ದೇವಾಡಿಗ ಆತ್ಮಹತ್ಯೆ ಪ್ರಕರಣ: ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ದೇವಾಡಿಗ ಸಮಾಜ ಒತ್ತಾಯ

ಕುಂದಾಪುರ, ಮೇ.30: ಉಪ್ಪಿನಕುದ್ರು ನಿವಾಸಿ ಬಡಕುಟುಂಬದ ಯುವತಿ ಶಿಲ್ಪಾ ದೇವಾಡಿಗಗೆ ಪ್ರೀತಿಯ ಆಮಿಷ ಒಡ್ಡಿ ಆಕೆಯ ಆತ್ಮಹತ್ಯೆಗೆ ಕಾರಣನಾದ ಮೂಡುಗೋಪಾಡಿಯ ನಿವಾಸಿ ಅಜೀಜ್ ಹಾಗು ಆತನ ಪತ್ನಿ ಸಲ್ಮಾ ದಂಪತಿಗಳಿಗೆ ಕಾನೂನು ಪ್ರಕಾರ ಕಠಿಣ ಶಿಕ್ಷೆ ನೀಡಬೇಕು, ಈ ಬಗ್ಗೆ ಸಮಗ್ರ ತನಿಖೆಯಾಗಬೇಕು. ಲವ್ ಜಿಹಾದ್‌ನಿಂದ ಸಾವಿಗೀಡಾದ ಶಿಲ್ಪಾ ಕುಟುಂಬಕ್ಕೆ ಸರಕಾರದ ವತಿಯಿಂದ ಆರ್ಥಿಕ ಪರಿಹಾರ ದೊರಕಿಸಿಕೊಡಬೇಕು ಎಂದು ದೇವಾಡಿಗ ಸಮಾಜ ಸೇವಾ ಸಂಘದ ವತಿಯಿಂದ ಕುಂದಾಪುರದ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಬಟ್ಟೆಯಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ ಶಿಲ್ಪಾಳನ್ನು ವಿವಾಹಿತ ಅಜೀಜ್ ಪ್ರೇಮದ ಬಲೆಗೆ ಸಿಲುಕಿಸಿ, ಅವಳನ್ನು ದೈಹಿಕವಾಗಿ ಬಳಸಿಕೊಂಡು, ಅವಳ ಪೋಟೋಗಳನ್ನು ಬಳಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟು ಮಾನಹಾನಿ ಮಾಡುತ್ತೇನೆಂದು ಕಿರುಕುಳ ನೀಡಿ, ಮುಸ್ಲಿಂ ಧರ್ಮಕ್ಕೆ ಮತಾಂತರ ಹೊಂದುವಂತೆ ಒತ್ತಡ ಹಾಕಿದ್ದರಿಂದ ಶಿಲ್ಪಾ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಬಗ್ಗೆ ಅಜೀಜ್‌ನ ಕೂಲಂಕಷವಾಗಿ ತನಿಖೆ ನಡೆಸಬೇಕು. ಈ ಜಾಲ ಇನ್ನಷ್ಟು ವ್ಯಾಪಿಸಿರುವ ಸಾಧ್ಯತೆಯಿದ್ದು ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.

ಮನವಿ ಸ್ವೀಕರಿಸಿದ ಸಹಾಯಕ ಆಯುಕ್ತ ರಾಜು ಅವರು ಮನವಿಯನ್ನು ಮೇಲಾಧಿಕಾರಿಗಳಿಗೆ ರವಾನಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ದೇವಾಡಿಗ ಸಮಾಜದ ಮುಂದಾಳು ಶಂಕರ ಅಂಕದಕಟ್ಟೆ, ಈಗಾಗಲೇ ಆರೋಪಿಗಳನ್ನು ಬಂಧಿಸಿರುವ ಪೊಲೀಸ್ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇವೆ. ನಮ್ಮ ಬೇಡಿಕೆ ಇಷ್ಟು ಮಾತ್ರವಲ್ಲ. ಈ ಬಗ್ಗೆ ಸಮಗ್ರವಾದ ತನಿಖೆ ನಡೆಯಬೇಕು. ಈ ಪ್ರಕರಣ ಗಂಭೀರವಾಗಿದ್ದು, ಲವ್ ಜಿಹಾದ್ ಮೂಲಕ ಅಮಾಯಕ ಹೆಣ್ಣುಮಕ್ಕಳನ್ನು ವಂಚಿಸುತ್ತಿರುವುದು ಕಂಡು ಬರುತ್ತದೆ. ಆರೋಪಿಗಳಿಗೆ ಕಠಿಣವಾದ ಶಿಕ್ಷೆಯಾಗಬೇಕು ಮತ್ತು ನೊಂದ ಕುಟುಂಬಕ್ಕೆ ಸರಕಾರದಿಂದ ಆರ್ಥಿಕ ಪರಿಹಾರ ದೊರಕಿಸಿಕೊಡುವ ಕಾರ್ಯ ಆಗಬೇಕಾಗಿದೆ ಎಂದರು.

ಉಡುಪಿ ನಗರ ಸಭಾ ಸದಸ್ಯ ವಿಜಯ ಕೊಡವೂರು ಮಾತನಾಡಿ, ಶಿಲ್ಪ ದೇವಾಡಿಗ ಆತ್ಮಹತ್ಯೆಯ ರೂವಾರಿ ಅಜೀಜ್‌ಗೆ ಗಲ್ಲು ಶಿಕ್ಷೆವಿಧಿಸಬೇಕು. ಇಂಥಹ ಕೃತ್ಯ ಮಾಡುವುವರಿಗೆ ಈ ಘಟನೆ ಪಾಠವಾಗಬೇಕು. ಈತನ ಬಗ್ಗೆ ಕೊಲಂಕಷ ತನಿಖೆಯಿಂದ ಇನ್ನಷ್ಟು ಪ್ರಕರಣಗಳು ಹೊರಬರುವ ಸಾಧ್ಯತೆಗಳಿವೆ. ಇಂತಹವರಿಗೆ ಬೆಂಬಲ ನೀಡುವವರನ್ನು ನಾವು ದೂರವಿಡಬೇಕು. ಧರ್ಮ ಜಾಗೃತಿಯಾಗಬೇಕು ಎಂದರು.

ಈ ಸಂದರ್ಭದಲ್ಲಿ ದೇವಾಡಿಗ ಸಮಾಜ ಸೇವಾ ಸಂಘ ಕುಂದಾಪುರ ತಾಲೂಕು ಅಧ್ಯಕ್ಷ ನಾಗರಾಜ ರಾಯಪ್ಪನಮಠ, ಸಮಾಜದ ಪ್ರಮುಖರಾದ ಗೌರಿ ದೇವಾಡಿಗ, ಸಂಜೀವ ದೇವಾಡಿಗ, ಜಗದೀಶ ದೇವಾಡಿಗ, ರಾಜೇಶ ದೇವಾಡಿಗ ಕಂಬದದೋಣೆ, ಚಂದ್ರಶೇಖರ ದೇವಾಡಿಗ ಕೋಟೇಶ್ವರ, ನರಸಿಂಹ ದೇವಾಡಿಗ, ಚರಣ್ ದೇವಾಡಿಗ, ಉದಯ ಹೇರಿಕೆರೆ, ಆನಂದ, ಶ್ರೀಮತಿ ದೇವಾಡಿಗ, ಚಂದ್ರಶೇಖರ ದೇವಾಡಿಗ, ಶ್ರೀನಿವಾಸ ದೇವಾಡಿಗ, ರವಿ ದೇವಾಡಿಗ ಉಪ್ಪಿನಕುದ್ರು, ಕರುಣಾಕರ ಬಳ್ಕೂರು ಮೊದಲಾದವರು ಉಪಸ್ಥಿತರಿದ್ದರು.

ಬಳಿಕ ಉಪ್ಪಿನಕುದ್ರುವಿನಲ್ಲಿರುವ ಮೃತ ಶಿಲ್ಪಾ ದೇವಾಡಿಗ ಮನೆಗೆ ಭೇಟಿ ನೀಡಿ, ಈ ಪ್ರಕರಣದಲ್ಲಿ ಇಡೀ ದೇವಾಡಿಗ ಸಮಾಜ ನಿಮ್ಮೊಂದಿಗೆ ಇರುತ್ತದೆ ಎಂದು ಧೈರ್ಯದ ಮಾತುಗಳನ್ನಾಡಿ, ಸಾಂತ್ವನ ಹೇಳಲಾಯಿತು.

Related Articles

Stay Connected

21,961FansLike
3,912FollowersFollow
21,600SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!