Sunday, September 8, 2024

ವಿಶ್ವ ವಿನಾಯಕ ಸಿ.ಬಿ.ಎಸ್.ಇ ಸ್ಕೂಲ್: ವಿದ್ಯಾರ್ಥಿಗಳ ಮಾರ್ಗದರ್ಶನ ಕಾರ್‍ಯಗಾರ

ತೆಕ್ಕಟ್ಟೆ: ವಿಶ್ವ ವಿನಾಯಕ ಸಿ.ಬಿ.ಎಸ್.ಇ ಸ್ಕೂಲ್‌ನಲ್ಲಿ ವಿದ್ಯಾರ್ಥಿಗಳಿಗೆ ಕಲಿಕಾ ಮಾರ್ಗದರ್ಶನ ಕಾರ್‍ಯಗಾರವನ್ನು ಆಯೋಜಿಸಲಾಗಿತ್ತು.

ಕಾರ್‍ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಚಿತ್ರಾ ಕಾರಂತ್‌ರವರು ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು. ಕಲಿಕೆಯಲ್ಲಿ ನಿರಂತರ ಅಭ್ಯಾಸ ಬಹಳ ಪ್ರಮುಖವಾದ ಅಂಶವೆಂದು ತಿಳಿಸಿದರು. ದೈನಂದಿನ ಕಲಿಕಾ ಚಟುವಟಿಕೆಗಳ ಮುಖ್ಯಾಂಶಗಳನ್ನು ಅಭ್ಯಾಸ ಪುಸ್ತಕಗಳಲ್ಲಿ ದಾಖಲಿಸಿ ಪ್ರತಿನಿತ್ಯ ಓದಿನ ಕಡೆಗೆ ಗಮನ ಹರಿಸಿದರೆ ಪರೀಕ್ಷೆಗಳನ್ನು ಬಹಳ ಸುಲಭವಾಗಿ ಎದುರಿಸಬಹುದು ಎಂದು ತಿಳಿಸಿದರು. ಪ್ರತಿಯೊಬ್ಬ ವಿದ್ಯಾರ್ಥಿಯೂ ಕಲಿಕಾ ವೇಳಾಪಟ್ಟಿಯನ್ನು ಸಿದ್ಧಪಡಿಸಿ ಶಿಸ್ತುಬದ್ಧವಾಗಿ ಪಾಲಿಸಿದ್ದಲ್ಲಿ ಉತ್ತಮ ಅಂಕ ಗಳಿಕೆಯೊಂದಿಗೆ ಉತ್ತಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂದು ತಿಳಿಸಿದರು. ಶಿಕ್ಷಕರಲ್ಲಿ ಉದ್ದೇಶಿಸಿ ಮಾತನಾಡಿ ಪ್ರತಿಯೊಬ್ಬ ಶಿಕ್ಷಕನೂ ನಿರಂತರ ವಿದ್ಯಾರ್ಥಿಯಾಗಿ ಕಲಿಕೆಯನ್ನು ಮಾಡಿ ಜ್ಞಾನಾರ್ಜನೆಯನ್ನು ಮಾಡುವುದರ ಜೊತೆಗೆ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣವನ್ನು ಒದಗಿಸಿ ಆದರ್ಶ ಶಿಕ್ಷಕರಾಗಬೇಕು ಎಂದು ತಿಳಿಸಿದರು.

ಕಾರ್‍ಯಕ್ರಮದಲ್ಲಿ ಶಾಲಾ ಮೇನೆಜಿಂಗ್ ಡೈರೆಕ್ಟರ್ ಎಮ್. ಪ್ರಭಾಕರ ಶೆಟ್ಟಿಯವರು, ಮ್ಯಾನೆಜಿಂಗ್ ಟ್ರಸ್ಟಿ ಕರುಣಾಕರ ಶೆಟ್ಟಿ ಯವರು, ವಿ.ವಿ. ರಾಜ್ ಹೆಗ್ಡೆ ಹಾಗೂ ಶಾಲಾ ಪ್ರಾಂಶುಪಾಲರಾದ ನಿತಿನ್ ಡಿ ಆಲ್ಮೇಡಾರವರು ಉಪಸ್ಥಿತರಿದ್ದರು.

ಪ್ರಜ್ಞಾ ಕಾಮತ್ ಕಾರ್‍ಯಕ್ರಮ ನಿರೂಪಿಸಿದರು. ಪ್ರಾಂಶುಪಾಲ ನಿತಿನ್ ಡಿ ಆಲ್ಮೇಡಾರವರು ಸ್ವಾಗತಿಸಿ ವ್ಯಕ್ತಿ ಪರಿಚಯ ಮಾಡಿದರು. ಪ್ರಿಯಾ ಜೇಮ್ಸ್‌ರವರು ವಂದಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!