spot_img
Sunday, March 29, 2026
spot_img

ವೃದ್ಧಾಶ್ರಮಗಳಲ್ಲಿ ಸೇವಾ ಮನೋಭಾವನೆ ಮೊದಲ ಗುರಿ-ರವಿಕಿರಣ್ ಮುರುಡೇಶ್ವರ

ಕುಂದಾಪುರ: ಮನುಷ್ಯನಿಗೆ ಮಾನವೀಯತೆ ಬೇಕು. ಮನಬಿಚ್ಚಿ ಮಾತನಾಡಲು ನಿರ್ಮಲ ಮನಸ್ಸು ಬೇಕು. ಹಣವೊಂದೇ ಮುಖ್ಯವಲ್ಲ, ಇಲ್ಲಿ ಒಬ್ಬರನ್ನೊಬ್ಬರು ಆಸರೆಯಾಗಿದ್ದರೆ ಅದಕ್ಕಿಂತ ಪುಣ್ಯ ಮತ್ತೊಂದಿಲ್ಲ ಸೇವೇಯೇ ಪರಮಗುರಿ ಎಂದು ಹಿರಿಯ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ ಅವರು ಕುಂದಾಪುರದ ಶಾಂತಿಧಾಮ ವೃದ್ಧಾಶ್ರಮದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಬಸ್ರೂರು ಇದರ ಆಡಳಿತ ಧರ್ಮದರ್ಶಿಗಳಾದ ಬಿ. ಅಪ್ಪಣ್ಣ ಹೆಗ್ಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಹಿರಿಯ ಪತ್ರಕರ್ತರಾದ ರಾಜೇಶ್ ಕೆ. ಸಿ ಅವರು ಇಂದಿನ ಕಾಲಘಟ್ಟದಲ್ಲಿ ವೃದ್ಧಾಶ್ರಮಗಳು ಅನಿವಾರ್ಯ, ಆದರೆ ವೃದ್ಧರು ಯಾರು ಎಂಬುದೇ ಜಿಜ್ಞಾಸೆ ಉಂಟಾಗಿದೆ. ರಾಜ್ಯದ ಬಹುತೇಕ ರಾಜಕಾರಣಿಗಳಲ್ಲಿ ಸುಮಾರು 60 ವರ್ಷ ಮೇಲ್ಪಟ್ಟವರು ರಾಜಕೀಯದಲ್ಲಿ ಬಹಳ ಚುರುಕಾಗಿದ್ದಾರೆ. ಇದೊಂದು ಒಳ್ಳೆಯ ಉದ್ದೇಶದಿಂದ ಮಾಡಿದ ಪುಣ್ಯದ ಕೆಲಸ ಎಂದು ಶುಭ ಹಾರೈಸಿದರು.

ವೇದಿಕೆಯಲ್ಲಿ ನಿವೃತ್ತ ಶಿಕ್ಷಕ ಶಶಿಧರ್ ಶೆಟ್ಟಿ ಸಾಲ್ಗದ್ದೆ, ಉದ್ಯಮಿ ಸೀತಾರಾಮ ಶೆಟ್ಟಿ ನೆಂಪು, ಸಂತೋಷ್ ಶೆಟ್ಟಿ, ಮಂಜುನಾಥ ಸಾಲಿಯಾನ್ ತ್ರಾಸಿ, ಹಂಗಳೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಆನಂದ ಪೂಜಾರಿ, ಕೊಲ್ಲೂರು ಮೂಕಾಂಬಿಕ ದೇವಸ್ಥಾನದ ವ್ಯವಸ್ಥಾಪನ ಮಂಡಳಿ ಅಧ್ಯಕ್ಷರಾದ ಚಂದ್ರಶೇಖರ ಶೆಟ್ಟಿ ಕೆರಾಡಿ, ಶಾಂತಿಧಾಮ ಟ್ರಸ್ಟ್ ಇದರ ನಿರ್ವಾಹಕರಾದ ಶ್ರೀಮತಿ ಸುಗಂಧಿ. ಬಿ.ಶೆಟ್ಟಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಸಮಾಜದಲ್ಲಿ ಸೇವೆಗೈದ ವಿವಿಧ ಸಾಧಕರನ್ನು ಸನ್ಮಾನಿಸಲಾಯಿತು, ಮಹಿಳಾ ವೀರಬಾಹು ಶ್ರೀಮತಿ ವನಜಾ ಪೂಜಾರ್ತಿ, ಹಿಂದೂ ರುದ್ರಭೂಮಿ ಬೀಡಿನಗುಡ್ಡೆ ಉಡುಪಿ, ರವಿಕಿರಣ್ ಮುರುಡೇಶ್ವರ, ಬೇಬಿ ಕೊಠಾರಿ, ರವಿ ಕಟಪಾಡಿ ಇವರುಗಳನ್ನು ಸಾರ್ವಜನಿಕವಾಗಿ ಸನ್ಮಾನಿಸಲಾಯಿತು.
ಮಿರಾಕಲ್ ಇವೆಂಟ್ ಇವರಿಂದ ಡ್ಯಾನ್ಸ್ ಶೋ, ಖ್ಯಾತ ಹಿನ್ನೆಲೆಗಾಯಕಿ ಶ್ರೀಮತಿ ಕಲಾವತಿ ದಯಾನಂದ್ ಇವರಿಂದ ಸಂಗೀತ ಸಂಜೆ, ಹಾಗೂ ಮನು ಹಂದಾಡಿ ಇವರಿಂದ ನಗೆ ಸಂಜೆ, ಪ್ರದರ್ಶನಗೊಂಡಿತು.

ನಾಗರಾಜ್ ಭಟ್ಕಳ ಕಾರ್ಯಕ್ರಮ ನಿರೂಪಿಸಿದರು. ಶಾಂತಿಧಾಮ ಟ್ರಸ್ಟ್ ಇದರ ಸ್ಥಾಪಕ ಅಧ್ಯಕ್ಷ ಎ.ಭಾಸ್ಕರ್ ಶೆಟ್ಟಿ ಸ್ವಾಗತಿಸಿ, ಸನ್ಮಾನ ಪತ್ರ ವಾಚಿಸಿ, ವಂದಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!