spot_img
Sunday, March 29, 2026
spot_img

‘ಅಮೃತಧಾರಾ’ಗೆ ಲಯನ್ಸ್ ಜಿಲ್ಲಾ ರಾಜ್ಯಪಾಲರ ಭೇಟಿ

ಕುಂದಾಪುರ: ಲಯನ್ಸ್ ಕ್ಲಬ್ ಕುಂದಾಪುರ ಅಮೃತಧಾರಾಗೆ ಲಯನ್ಸ್ ಜಿಲ್ಲಾ ರಾಜ್ಯಪಾಲ ಹೆರ್ಗ ವಿಶ್ವನಾಥ್ ಶೆಟ್ಟಿ ಅವರು ಅಧಿಕೃತ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಕುಂದಾಪುರ ಅಮೃತಧಾರಾದ ನಿರ್ದೇಶಕ ಮಂಡಳಿ ಸಭೆ ನಡೆಸಿ ವಿಸ್ತೃತ ಚರ್ಚೆ ನಡೆಸಿ ಮಾರ್ಗದರ್ಶನ ನೀಡಿದರು.

ಸಂಜೆ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಜಿಲ್ಲಾ ರಾಜ್ಯಪಾಲ ವಿಶ್ವನಾಥ್ ಶೆಟ್ಟಿಯವರು ನೂತನವಾಗಿ ಇತ್ತೀಚೆಗೆ ಸ್ಥಾಪನೆಗೊಂಡ ಲಯನ್ಸ್ ಕ್ಲಬ್ ಕುಂದಾಪುರ ಅಮೃತಧಾರಾ ಜಿಲ್ಲೆಯಲ್ಲಿ ಅತ್ಯಂತ ಮಾದರಿಯಾಗಿ ಮೂಡಿಬರುತ್ತಿರುವುದು ಸಂತಸದ ವಿಚಾರ, ಕೇವಲ ಮಹಿಳೆಯರಿಂದಲೇ ಕೂಡಿದ ಈ ಸಂಸ್ಥೆಯ ಸಾಮಾಜಿಕ ಕಳಕಳಿ ಬದ್ಧತೆ ಪರಿಸರ ಸಂಬಂಧಿತ ಕಾಳಜಿ ಇತರ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಸಪ್ನಾ ಸುರೇಶ್, ಜಿಲ್ಲಾ ಖಜಾಂಚಿ ಜಯಪ್ರಕಾಶ್ ಭಂಡಾರಿ, ವಲಯಾಧ್ಯಕ್ಷ ಬನ್ನಾಡಿ ಸೋಮನಾಥ ಹೆಗ್ಡೆ, ಹಿರಿಯ ಲಯನ್ ಏಕನಾಥ ಬೋಳಾರ್ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಡಾ. ವಾಣಿಶ್ರೀ ಐತಾಳ್ ನೂತನ ಸದಸ್ಯೆಯಾಗಿ ಪ್ರಮಾಣವಚನ ಸ್ವೀಕರಿಸಿದರು. ಲಯನ್ಸ್ ಪ್ರಮುಖರುಗಳಾದ ರಾಜೀವ ಕೋಟ್ಯಾನ್, ರಮಾನಂದ ಇಂಜಿನಿಯರ್, ಸೀತಾರಾಮ್ ಶೆಟ್ಟಿ ಅರುಣ್ ಕುಮಾರ್ ಹೆಗಡೆ, ಮೋಹನ್ ದಾಸ್ ಶೆಟ್ಟಿ, ದೀನಪಾಲ ಶೆಟ್ಟಿ, ಧರ್ಮರಾಜ್ ಮೊದಲಿಯಾರ್, ಬನ್ನಾಡಿ ಉದಯ ಕುಮಾರ್ ಶೆಟ್ಟಿ, ರವಿರಾಜ್ ಯು ಎಸ್, ಚಂದ್ರಶೇಖರ ಶೆಟ್ಟಿ, ಚಂದ್ರಶೇಖರ್ ಹೆಗಡೆ, ರಾಧಾಕೃಷ್ಣ ನಾಯಕ್, ದಿನಕರ್ ಶೆಟ್ಟಿ, ರಮಾ ಬೋಳಾರ್, ರೋ. ಮಹೇಂದ್ರ ಶೆಟ್ಟಿ, ರೆಡ್ ಕ್ರಾಸ್‌ನ ಶಿವರಾಮ ಶೆಟ್ಟಿ, ಮ್ಯಾಥೀವ್ ಜೋಸೆಫ್, ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಮೃತಧಾರಾ ಅಧ್ಯಕ್ಷೆ ಸರಸ್ವತಿ ಗಣೇಶ್ ಪುತ್ರನ್ ವಹಿಸಿ ಸ್ವಾಗತಿಸಿ ಪ್ರಾಸ್ತಾಪಿಸಿದರು, ಜಯಶೀಲಾ ಕಾಮತ್ ಹತ್ತು ತಿಂಗಳ ಕಾರ್ಯಚಟುವಟಿಕೆಗಳ ವರದಿಯನ್ನು ಮಂಡಿಸಿದರು. ಅಮೃತಾ ಬನವಾಲಿಕರ್ ಮುಖ್ಯ ಅಥಿತಿಗಳನ್ನ ಪರಿಚಯಿಸಿದರು. ಚಂದ್ರಿಕಾ ಧನ್ಯ ಆಶಾಲತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಡಾ.ಮೈತ್ರಿ ಲಯನ್ಸ್ ಧ್ಯೇಯ ಉದ್ದೇಶಗಳನ್ನು ವಾಚಿಸಿದರು. ಕಲ್ಪನಾ ಭಾಸ್ಕರ್ ವಂದಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!