spot_img
Friday, May 15, 2026
spot_img

ಹನೆಹಳ್ಳಿ: ಹಿಂದೂ ರುದ್ರ ಭೂಮಿಗೆ ಹೊಸ ಕಾಯಕಲ್ಪ

ಬ್ರಹ್ಮಾವರ: ಬಾರಕೂರು ಹನೆಹಳ್ಳಿ ಗ್ರಾಮ ಪಂಚಾಯತಿ ಬಳಿ ಇರುವ ಹಿಂದೂ ರುದ್ರ ಭೂಮಿಗೆ ಹೊಸ ಕಾಯಕಲ್ಪ ದೊರಕಲಿದೆ.

ಸ್ಮಶಾನ ಅಂದರೆ ಭಯದ ವಾತಾವರಣ ದೂರ ಮಾಡಿ ಭಕ್ತಿಯೂ ಕೂಡಾ ಬರ ಬೇಕು ಎನ್ನುವ ದೃಷ್ಟಿಯಲ್ಲಿ ಇಲ್ಲಿನ ಸಾರ್ವ ಜನಿಕರು ದಾನಿಗಳು ಮತ್ತು ಗ್ರಾಮ ಪಂಚಾಯತಿ ವತಿಯಿಂದ ಬೃಹತ್ ಶಿವನ ಪ್ರತಿಮೆ ನೆಲೆಗೊಳ್ಳಲಿದೆ.

ಬುಧವಾರ ಬೆಳಿಗ್ಗೆ ವೇದ ಮೂರ್ತಿ ರಮೇಶ್ ಭಟ್ ನಾಯರ್ ಬೆಟ್ಟು ಇವರಿಂದ ನಾನಾ ಧಾರ್ಮಿಕ ಕಾರ್ಯಕ್ರಮ ಜರುಗಿ ಗ್ರಾಮ ಪಂಚಾಯತಿ ಅಧ್ಯಕ್ಷ ಚಂದ್ರ ಶೇಖರ ಶೆಟ್ಟಿ ಶಿಲಾನ್ಯಾಸ ಮಾಡಿದರು.
ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಅರುಂಧತಿ ಏಸುಮನೆ ಕಾರ್ಯದರ್ಶಿ ಉಮೇಶ್ ಕಲ್ಯಾಣಪುರ , ಉಡುಪಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ನಾಗರಾಜ ಗಾಣಿಗ , ನಿವೃತ್ತ ಮುಖ್ಯೋಪದ್ಯಾಯ ಸುಧಾಕರ ರಾವ್ , ಸಂತೋಷ ಪೂಜಾರಿ , ಅನಿಲ್ ಬೈಕಾಡಿ , ಗ್ರಾಮ ಪಂಚಾಯತಿ ಸದಸ್ಯರಾದ ರಮಾನಂದ ಶೆಟ್ಟಿ , ಚಂದ್ರ ಮರಕಾಲ , ಗಣೇಶ್ ಗಾಣಿಗ , ಜ್ಯೋತಿ, ಸುಜಾತ ಎಸ್ ಪೂಜಾರಿ, ಶಿಲ್ಪಿ ಪೂರ್ಣೆಶ್ ಇನ್ನಿತರು ಉಪಸ್ಥಿತರಿದ್ದರು.

ಶವಾಗಾರ ಸೇರಿದಂತೆ ಒಟ್ಟು 56 ಸೆಂಟ್ಸ್ ಜಾಗದಲ್ಲಿ ಉಳಿದ ಖಾಲಿ ಜಾಗದಲ್ಲಿ ಹೂ ಗಿಡಗಳನ್ನು ಬೆಳೆಸುವ ಮತ್ತು ಮಿನಿ ಪಾರ್ಕ್ ಕೂಡಾ ಮಾಡುವ ಉದ್ದೇಶ ಗ್ರಾಮ ಪಂಚಾಯತಿಯ ಮುಂದಿನ ಯೋಜನೆಯಲ್ಲಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!