spot_img
Friday, March 27, 2026
spot_img

ಏ.10ರಿಂದ 30ರ ತನಕ ತೆಕ್ಕಟ್ಟೆಯಲ್ಲಿ ‘ರಜಾರಂಗು-2022’: ವಿಭಿನ್ನ ಕಲಾ ಪ್ರಕಾರಗಳ ತರಬೇತಿ, ಪ್ರಾತ್ಯಕ್ಷಿಕೆ


ತೆಕ್ಕಟ್ಟೆ: ಮಮತೆಯ ಬೆಳಕಲ್ಲಿ ಸಮತೆಯ ಶಿಬಿರ, ಜ್ಞಾನ ವಿಕಸನಕ್ಕಾಗಿ ಗ್ರಾಮ್ಯ ಲೇಪನ ಶಿಬಿರದ ಕನಸನ್ನು ಹೊತ್ತ ಯಶಸ್ವೀ ಕಲಾವೃಂದ ಕೊಮೆ-ತೆಕ್ಕಟ್ಟೆ ಹಾಗೂ ಶ್ರೀ ಕೈಲಾಸ ಕಲಾಕ್ಷೇತ್ರ ಟ್ರಸ್ಟ್ ತೆಕ್ಕಟ್ಟೆ ಉಭಯ ಸಂಸ್ಥೆಗಳು ರಜಾರಂಗು-2022 ಒಂದೇ ಸೂರಿನಡಿಯಲ್ಲಿ ವಿಭಿನ್ನ ಕಲಾ ಪ್ರಕಾರಗಳ ತರಬೇತಿ, ಪ್ರಾತ್ಯಕ್ಷಿಕೆಯನ್ನು ತೆಕ್ಕಟ್ಟೆಯ ಹಯಗ್ರೀವದ ಸಮೀಪದ ಬಯಲು ರಂಗಮಂದಿರದ ಹಸಿರು ತಾಣದಲ್ಲಿ ಆಯೋಜಿಸಿದೆ.

ಏಪ್ರಿಲ್ 10ರಿಂದ ಏಪ್ರಿಲ್ 30ರವರೆಗೆ ಏರ್ಪಡಿಸುವ ಶಿಬಿರ ಬೆಳಿಗ್ಗೆ 9ರಿಂದ ಸಂಜೆ5ರ ತನಕ ನಡೆಯುತ್ತಿದೆ. ವಸತಿ ಸೌಲಭ್ಯವನ್ನೂ ವ್ಯವಸ್ಥೆ ನೀಡುವ ಈ ಸಂಸ್ಥೆ ಎರಡನೇ ಬಾರಿಗೆ ದೊಡ್ಡ ಶಿಬಿರವನ್ನು ಆಯೋಜಿಸಿಕೊಂಡಿದೆ. ಕೊರೋನ ಪೂರ್ವದಲ್ಲಿ 2019ರಲ್ಲಿ ನೂರು ಮಕ್ಕಳ ಶಿಬಿರವನ್ನು ಒಂದು ತಿಂಗಳ ಪರ್ಯಂತ ಆಯೋಜಿಸಲಾಗಿತ್ತು. ನಟನ ರಂಗ ಶಾಲೆ ಮೈಸೂರು ಇದರ ನಿರ್ದೇಶಕ ಮಂಡ್ಯ ರಮೇಶ್, ನಟನದ ಪ್ರಾಂಶುಪಾಲ ಮೇಘ ಸಮೀರ, ನಟನ ಶಿಕ್ಷಕಿ ದಿಶಾ ಮಂಡ್ಯ ರಮೇಶ್, ರಾಷ್ಟ್ರೀಯ ರಂಗ ನಿರ್ದೇಶಕ ಗೋಪಾಲಕೃಷ್ಣ ನಾಯರಿ ಹೀಗೆ ಹಲವಾರು ಗಣ್ಯರು ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಶಿಬಿರದ ಕಳೆಯನ್ನು ಹೆಚ್ಚಿಸಿದರು.

ಈ ಬಾರಿಯ ಶಿಬಿರದಲ್ಲಿ ರಾಷ್ಟ್ರೀಯ ರಂಗ ನಿರ್ದೇಶಕ ಗೋಪಾಲಕೃಷ್ಣ ನಾಯರಿ, ರಂಗ ನಿರ್ದೇಶಕರಾದ ಶ್ರೀಪಾದ ಭಟ್, ನಟನ ಮೈಸೂರು ಪ್ರಾಂಶುಪಾಲರಾದ ಮೇಘ ಸಮೀರ, ನಟನಾ ಶಿಕ್ಷಕಿ ದಿಶಾ ಮಂಡ್ಯ ರಮೇಶ್, ಜೀ ಕನ್ನಡ ಕಾಮಿಡಿ ಕಿಲಾಡಿ ವಿಜೇತರಾದ ರಾಕೇಶ ಪೂಜಾರಿ, ನೀಲಾವರ ಸುರೇಂದ್ರ ಅಡಿಗ, ನೀನಾಸಂ ಪದವೀದರರಾದ ರಂಗ ಶಿಕ್ಷಕ ಸತ್ಯನಾ ಕೊಡೇರಿ, ಟೆರ್ರಾಕೊಟ್ಟಾ ಕಲಾವಿದರಾದ ಅಕ್ಷಯ್ ರಾಜ್, ಕುಂದಾಪ್ರ ಕನ್ನಡ ಸಂಸ್ಕೃತಿಯ ಚಿಂತಕರಾದ ಮನು ಹಂದಾಡಿ, ವಿದುಷಿ ಮಾನಸಿ ಸುಧೀರ್, ಮರಳು ಶಿಲ್ಪಿ ಹರೀಶ್ ಸಾಗ, ಯಕ್ಷ ಚಿಂತಕರಾದ ಸುಜಯೀಂದ್ರ ಹಂದೆ, ವರ್ಲಿ ಚಿತ್ರಕಾರರಾದ ವೃಂದ ಕೊನ್ನಾರ್, ಕಾರ್ಟೂನಿಸ್ಟ್ ಜೀವನ್ ಶೆಟ್ಟಿ, ಜಾದೂಗಾರರಾದ ಮುಬಿನಾ ಪರ್ವಿನ್ ತಾಜ್, ಲಿಪಿ ಹಾಗೂ ಜ್ಞಾಪನ ತಜ್ಞರಾದ ಅಶೋಕ್ ತೆಕ್ಕಟ್ಟೆ, ಜನಪದ ನೃತ್ಯ ಕಲಾವಿದ ಶಂಕರ್‌ದಾಸ್ ಚೆಂಡ್ಕಳ, ಗೊಂಬೆಯಾಟದ ನಿರ್ದೇಶಕ ಕೊಗ್ಗ ಭಾಸ್ಕರ್ ಕಾಮತ್, ಪ್ರಸಾಧನ ಕಲಾವಿದರಾದ ಮಿಥುನ್ ಬ್ರಹ್ಮಾವರ, ರಮೇಶ್ ಕಪಿಲೇಶ್ವರ, ವಿದುಷಿ ಮಂಜುಳಾ ಸುಬ್ರಹ್ಮಣ್ಯ, ಟ್ರಾಫಿಕ್ ಪೋಲೀಸ್ ನವೀನ್ ಕುಮಾರ್ ಎಸ್., ಗಾಳಿಪಟ ತಜ್ಞರಾದ ದಿನೇಶ್ ಹೊಳ್ಳ ಮಂಗಳೂರು, ಸಿನಿಮಾ ಮತ್ತು ರಂಗ ನಟಿ ಆರ್.ಜೆ. ಕಾಜಲ್ ನಗ್ಮ, ಏ.ಎಸ್,ಐ ಮುಕ್ತ, ಶ್ರೀಮತಿ ಗುಲಾಬಿ ತೆಕ್ಕಟ್ಟೆ, ಡಾ. ನಾರಾಯಣ ಶೆಣೈ ಮಣಿಪಾಲ ಹಾಗೂ ಇನ್ನಿತರ ಗಣ್ಯರು ಸಂಪನ್ಮೂಲ ವ್ಯಕ್ತಿಗಳಾಗಿ ಜ್ಞಾನಧಾರೆಯನ್ನು ಚಿಣ್ಣರಲ್ಲಿ ಬಿತ್ತರಿಸಲಿದ್ದಾರೆ.

ರೇಖೆಗಳೊಂದಿಗೆ ಆಟ, ಚಿತ್ತು-ಚಿತ್ತಾರ-ಬಣ್ಣಗಳ ಮೋಡಿ, ಜನಪದ ಹಜ್ಜೆ-ಗೆಜ್ಜೆ, ಇಂದ್ರಜಾಲ-ಮಾಯದೀಪ, ಮಣ್ಣಿನೊಂದಿಗೆ ಆಟ, ಬಣ್ಣದೊಂದಿಗೆ ಆಟ, ದೃಶ್ಯ ಕಾವ್ಯ, ಬದುಕುವುದು ಕಲಿ, ಪಯಣ ಪರ್ವ, ಯಕ್ಷ-ನಾಟಕ, ಕುಂದಗನ್ನಡದಲ್ಲಿ ಹಾಸ್ಯ, ಥಿಯೇಟರ್ ಡಾನ್ಸ್, ಸ್ವರ ಸಾಗರ ಸಂಗೀತ, ಕಲಾ ವಿಹಾರ, ಕಸದಿಂದ ರಸ, ನಿಮ್ಮ ಪ್ರಶ್ನೆಗೆ ನಮ್ಮ ಉತ್ತರ, ಕಥೆ ಹೇಳುವೆ ನಾ, ಸ್ಮರಣ ಶಕ್ತಿ, ಸುಂದರ ಅಕ್ಷರ ಬರಹ, ಯಕ್ಷಲೋಕದಲ್ಲೊಂದು ಪಯಣ, ಭರತನಾಟ್ಯಬೋಧಿನಿಕ, ದೇಸೀ ಆಟಗಳು, ಭಿತ್ತಿ ಹಸೆ ಚಿತ್ರಗಳು, ನವರಸಾಭಿನಯ, ಗೊಂಬೆಯಾಟ ಪ್ರಾತ್ಯಕ್ಷಿಕೆ, ಮರಳು ಶಿಲ್ಪ, ಸಂವಿಧಾನದಲ್ಲಿ ಮಕ್ಕಳ ಹಕ್ಕುಗಳು, ಟೆರ್ರಾಕೊಟ್ಟ, ಕಳಾರಿಪಯಟ್ಟು, ಅಗ್ನಿಶಾಮಕ ಸಿಬ್ಬಂದಿಗಳಿಂದ ಪ್ರಾತ್ಯಕ್ಷಿಕೆ, ಸಂಚಾರಿ ನಿಯಮಗಳ ಅರಿವು, ಜಲ ಸಂರಕ್ಷಣೆ, ಮಕ್ಕಳ ಸಿನಿಮಾ ಪ್ರದರ್ಶನ, ಶಿಬಿರಾರ್ಥಿಗಳಿಂದ ನಾಟಕ_ಯಕ್ಷಗಾನ ಪ್ರಯೋಗ, ರಸ್ತೆ ಸುರಕ್ಷತೆ ಮತ್ತು ಸಾಮಾಜಿಕ ಜಾಗೃತೆ, ಯೋಗ ಮತ್ತು ಬದುಕು, ಬಾನ ಆಟ ಗಾಳಿಪಟ, ರಸಪ್ರಶ್ನೆ.. ಹೀಗೆ ಹಲವಾರು ವಿಷಯಗಳ ವಿಶೇಷತೆಯನ್ನು ಶಿಬಿರದಲ್ಲಿ ಮಕ್ಕಳಿಗೆ ಅರಿವು ಮೂಡಿಸುವುದರೊಂದಿಗೆ ಬೆರೆಯುವುದಕ್ಕ ಅವಕಾಳ ಕಲ್ಪಿಸಲಾಗಿದೆ.

ಎಂಟು ವರ್ಷಕ್ಕೆ ಮೇಲ್ಪಟ್ಟ ಮಕ್ಕಳಿಗೆ ಶಿಬಿರಕ್ಕೆ ಸೇರುವ ಅವಕಾಶವಿದ್ದು ನೂರು ಮಕ್ಕಳ ಮಿತಿಯನ್ನು ಅಳವಡಿಸಿಕೊಂಡಿದೆ. 18 ವರ್ಷಕ್ಕೆ ಮೇಲ್ಪಟ್ಟ ಸೀನಿಯರ್ ವಿಭಾಗದ ರಂಗ ಶಿಬಿರವು ಸಂಜೆ ಗಂಟೆ 6ರಿಂದ ತೆಕ್ಕಟ್ಟೆ ಹಯಗ್ರೀವದಲ್ಲಿ ನಡೆಯುತ್ತದೆ.

ಮಂದಾರ (ರಿ.) ಬೈಕಾಡಿ ಬ್ರಹ್ಮಾವರ, ಅಭಿಮಾನ್ ಯುವಕ ಮಂಡಲ ಕೊಮೆ, ರಂಗಸಂಪದ ಕೋಟ, ರೋಟರಿ ಕ್ಲಬ್ ತೆಕ್ಕಟ್ಟೆ, ಶ್ರೀ ದೇವಿ ಸೌಂಡ್ಸ್ ಮಣೂರು, ಯಕ್ಷದೀಪ ಕಲಾ ಟ್ರಸ್ಟ್ ಮಲ್ಯಾಡಿ ಸಂಸ್ಥೆಗಳ ಸಹಕಾರದಲ್ಲಿ ನಡೆಯುವ ಶಿಬಿರದ ಕೊನೆಯಲ್ಲಿ ರಂಗ ಪ್ರಯೋಗಗಳೂ ಶಿಬಿರದ ಮಕ್ಕಳಿಂದ ಪ್ರದರ್ಶನ ಕಾಣಲಿದೆ.

ರೋಹಿತ್ ಎಸ್. ಬೈಕಾಡಿ, ಪ್ರಶಾಂತ್ ಶೆಟ್ಟಿ, ಕೋಟ, ಸೀತಾರಾಮ ಶೆಟ್ಟಿ ಶಿಬಿರದ ನಿರ್ದೇಶಕರಾಗಿ ಪಾಲ್ಗೊಳ್ಳಲಿದ್ದಾರೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!