spot_img
Wednesday, January 22, 2025
spot_img

‘ನಮ್ಮೂರು ನಮ್ಮ ಕೆರೆ’ ಕಾರ್ಯಕ್ರಮದಡಿ ತೆಕ್ಕಟ್ಟೆ ಕಣ್ವಕೆರೆ ಹೂಳೆತ್ತುವ ಕಾರ್ಯಕ್ಕೆ ಭೂಮಿ ಪೂಜೆ

ಕುಂದಾಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ ಕುಂದಾಪುರ ತಾಲೂಕು, ಗ್ರಾಮ ಪಂಚಾಯತ್ ತೆಕ್ಕಟ್ಟೆ, ಕೆರೆ ಅಭಿವೃದ್ಧಿ ಸಮಿತಿ ಕಣ್ಣುಕೆರೆ ತೆಕ್ಕಟ್ಟೆ, ಕಣ್ಣುಕೆರೆ ಫ್ರೆಂಡ್ಸ್ ತೆಕ್ಕಟ್ಟೆ, ಜನ ಸೇವಾ ಟ್ರಸ್ಟ್ ಮೂಡುಗಿಳಿಯಾರು, ಸಾರ್ವಜನಿಕ ಗಣೇಶೋತ್ಸವ ಸಮಿತಿ ಕಣ್ಣುಕೆರೆ ತೆಕ್ಕಟ್ಟೆ ಹಾಗೂ ರೋಟರಿ ಕ್ಲಬ್ ತೆಕ್ಕಟ್ಟೆ ಇವರ ಸಹಭಾಗಿತ್ವದಲ್ಲಿ 405ನೇ ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದಡಿಯಲ್ಲಿ ತೆಕ್ಕಟ್ಟೆ ಗ್ರಾಮದ ಕಣ್ವಕೆರೆ ಹೂಳೆತ್ತುವ ಕಾಮಗಾರಿಯ ಭೂಮಿ ಪೂಜೆ ಕಾರ್ಯಕ್ರಮ ಮಾ.18ರಂದು ನಡೆಯಿತು.

ಉಡುಪಿ ಜಿಲ್ಲಾ ಹಿರಿಯ ನಿರ್ದೇಶಕರಾದ ಗಣೇಶ್ .ಬಿ. ದೀಪ ಬೆಳಗಿಸುವ ಮೂಲಕ ಕಾಮಗಾರಿಗೆ ಚಾಲನೆ ನೀಡಿ ಹೇಮಾವತಿ ವಿ ಹೆಗ್ಗಡೆಯವರ ಆಶಯದ ಮಹತ್ವಪೂರ್ಣ ಯೋಜನೆಯಾದ ನಮ್ಮೂರು-ನಮ್ಮ ಕೆರೆ ಉಡುಪಿ ಜಿಲ್ಲೆಯಲ್ಲಿ 13ನೇ ಹಾಗೂ ಕುಂದಾಪುರ ತಾಲೂಕಿನ 3ನೇ ಕೆರೆಯಾಗಿ ಕಣ್ವಕೆರೆ’ ಆಯ್ಕೆಗೊಂಡಿದೆ. ಯೋಜನೆಯಿಂದ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ರೂ. 4,51,000 ಅನುದಾನ ನೀಡಿದ್ದಾರೆ ಎಂದರು.

ಜನಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷರಾದ ಬಿ.ಅಪ್ಪಣ್ಣ ಹೆಗ್ಡೆಯವರು ಗುದ್ದಲಿ ಪೂಜೆ ನೆರವೇರಿಸಿದರು.

ಕುಂದಾಪುರ ತಾಲ್ಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಆರ್. ನವೀನ್‌ಚಂದ್ರ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ತೆಕ್ಕಟ್ಟೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಮಲ್ಯಾಡಿ ಶಿವರಾಮ್ ಶೆಟ್ಟಿ, ಯಶಸ್ವಿ ಕಲಾವೃಂದ ತೆಕ್ಕಟ್ಟೆಯ ಅಧ್ಯಕ್ಷರಾದ ಮಲ್ಯಾಡಿ ಸೀತಾರಾಮ್ ಶೆಟ್ಟಿ, ಪರಿಸರವಾದಿ ಕೊರ್ಗಿ ವಿಠಲ್ ಶೆಟ್ಟಿ, ಜನಸೇವಾ ಟ್ರಸ್ಟ್‌ನ ವಸಂತ ಗಿಳಿಯಾರು, ಉದ್ಯಮಿಗಳಾದ ಗೋಪಾಲಕೃಷ್ಣ ಪುರಾಣಿಕ್, ಗಣೇಶ್ ಪುತ್ರನ್ , ಸಂತೋಷ್ ನಾಯಕ್, ಗಣಪತಿ ಟಿ ನಾಯಕ್, ರೋಟರಿ ಕ್ಲಬ್ ಅಧ್ಯಕ್ಷರಾದ ಮಂಜುನಾಥ್ ಕಾಂಚನ್, ಗ್ರಾಪಂ ಸದಸ್ಯರಾದ ಪ್ರತಿಮಾ ಚಾತ್ರ, ಹಿರಿಯ ಯೋಜನಾಧಿಕಾರಿ ಮುರಳೀಧರ ಕೆ ಶೆಟ್ಟಿ, ಕೆರೆ ಅಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷರಾದ ಸುಧಾಕರ ಶೆಟ್ಟಿ, ಸಮಿತಿಯ ಅಧ್ಯಕ್ಷರಾದ ಕೆ.ಆರ್ ಗಣೇಶ್, ಒಕ್ಕೂಟದ ವಲಯಾಧ್ಯಕ್ಷರಾದ ಜಯಂತಿ ಕಾಂಚನ್, ವಲಯದ ಮೇಲ್ವಿಚಾರಕ ಪಾಂಡ್ಯನ್, ಕೃಷಿ ಅದಿಕಾರಿ ಚೇತನ್ ಕುಮಾರ್ ಉಪಸ್ಥಿತರಿದ್ದರು.

ಹಾಸ್ಯ ಕಲಾವಿದ ನಾಗರಾಜ್ ಕನ್ನುಕೆರೆ ಕಾರ್ಯಕ್ರಮ ನಿರ್ವಹಿಸಿದರು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!