spot_img
Thursday, March 26, 2026
spot_img

ಮಾ.20ಕ್ಕೆ ಮರವಂತೆಯಲ್ಲಿ ರಾಜ್ಯಮಟ್ಟದ ಜಲಜಾನಪದೋತ್ಸವ

ಕುಂದಾಪುರ,ಮಾ.18: ಕನ್ನಡ ಜಾನಪದ ಪರಿಷತ್ ಬೆಂಗಳೂರು, ಕನ್ನಡ ಜಾನಪದ ಯುವಬ್ರಿಗೇಡ್ ಬೆಂಗಳೂರು, ಕರಾವಳಿ ವಿಭಾಗೀಯ ಘಟಕ ಮರವಂತೆ ಮತ್ತು ಲಯನ್ಸ್ ಕ್ಲಬ್ ಕೋಸ್ಟಲ್ ಕುಂದಾಪುರ ಉಡುಪಿ ಜಿಲ್ಲೆ ಇವರ ಸಹಕಾರದೊಂದಿಗೆ ರಾಜ್ಯಮಟ್ಟದ ಜಲಜಾನಪದೋತ್ಸವ-2022 ಮಾ.20ರಂದು ಪೂರ್ವಾಹ್ನ 8ರಿಂದ ರಾತ್ರಿ 10ರ ತನಕ ಮರವಂತೆ ರಾಷ್ಟ್ರೀಯ ಹೆದ್ದಾರಿಯ ಸಮುದ್ರ ಕಿನಾರೆಯ ಸಮೀಪ ನಡೆಯಲಿದೆ ಎಂದು ಕ.ಜಾ.ಪ ಕರಾವಳಿ ವಿಭಾಗ ಸಂಚಾಲಕರಾದ ಡಾ.ಭಾರತಿ ಮರವಂತೆ ಹೇಳಿದರು.

ಶುಕ್ರವಾರ ಕುಂದಾಪುರದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧ್ವಜಾರೋಹಣದೊಂದಿಗೆ ಕಾರ್ಯಕ್ರಮ ಆರಂಭವಾಗಲಿದ್ದು, ಮರವಂತೆ ಗ್ರಾ.ಪಂ ಅಧ್ಯಕ್ಷೆ ರುಕ್ಮಿಣಿ ಧ್ವಜಾರೋಹಣ ನೆರವೇರಿಸಲಿದ್ದಾರೆ. ಬಳಿಕ ಸಮುದ್ರ ಪೂಜೆ-ನದಿ ಪೂಜೆ ನಡೆಯಲಿದೆ. ಜಲ ಜಾನಪದ ಮೆರವಣಿಗೆ ಕಾರ್ಯಕ್ರಮದ ವೇದಿಕೆಗೆ ಸಾಗಿ ಬರಲಿದೆ. ಕಾರ್ಯಕ್ರಮವನ್ನು ಬಂದರು ಒಳನಾಡು ಸಾರಿಗೆ ಮತ್ತು ಮೀನುಗಾರಿಕೆ ಇಲಾಖೆ ಸಚಿವರಾದ ಎಸ್.ಅಂಗಾರ ಉದ್ಘಾಟಿಸಲಿದ್ದಾರೆ. ಜಾನಪದ ಗೀತೆಗಳ ಸ್ಪರ್ಧೆಯನ್ನು ಇಂಧನ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ಉದ್ಘಾಟಿಸಲಿದ್ದಾರೆ. ಪುಸ್ತಕ ಪ್ರದರ್ಶನವನ್ನು ಸಂಸದ ಬಿ.ವೈ.ರಾಘವೇಂದ್ರ ಉದ್ಘಾಟಿಸಲಿದ್ದಾರೆ. ಪಾರಂಪರಿಕ ವಸ್ತು ಪ್ರದರ್ಶನವನ್ನು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಕನ್ನಡ ಜಾನಪದ ಪರಿಷತ್ ಜಾನಪದ ಯುವ ಬಿಗ್ರೇಡ್ ಬೆಂಗಳೂರು ಇದರ ರಾಜ್ಯಾಧ್ಯಕ್ಷ ಡಾ.ಎಸ್.ಬಾಲಾಜಿ ವಹಿಸಲಿದ್ದಾರೆ ಎಂದರು.

ಪೂರ್ವಾಹ್ನ 11-30ರಿಂದ ಜನಪದ ಕಲಾ ಪ್ರದರ್ಶನ, 12-30ರಿಂದ ಸಾಧಕರಿಗೆ ಸನ್ಮಾನ, ವಿಶೇಷ ಗೌರವ ಸಮರ್ಪಣೆ, ಮಧ್ಯಾಹ್ನ 1 ಗಂಟೆಗೆ ಜಾನಪದ ಹಾಡುಗಳ ಸ್ಪರ್ಧೆ, ಕೊರಗರ ಸಾಂಸ್ಕೃತಿಕ ವೈಭವ, ಅಪರಾಹ್ನ 3.30ಕ್ಕೆ ಜಲಜಾನಪದ ಗೋಷ್ಠಿ, 5 ಗಂಟೆಯಿಂದ ಕೋಲಾಟ ಮತ್ತು ಗುಮಟೆ ನೃತ್ಯ,ಸಂಜೆ 6 ಗಂಟೆಗೆ ಸಮಾರೋಪ ಸಮಾರಂಭ ಮತ್ತು ಬಹುಮಾನ ವಿತರಣೆ, ಜಾನಪದ ಶೈಲಿಯಲ್ಲಿ ಸ್ತಬ್ದಚಿತ್ರ ಪ್ರದರ್ಶನ, ಕುಂದಗನ್ನಡ ಹಾಸ್ಯಲಹರಿ ನಡೆಯಲಿದೆ ಎಂದರು.

ಹಿಂದುಳಿದ ವರ್ಗ ಮತ್ತು ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಸಮಾರೋಪ ಭಾಷಣ ಮಾಡಲಿದ್ದಾರೆ. ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ರಾತ್ರಿ 9ರಿಂದ ಕ್ಯಾದಗಿ ಸಾರಥ್ಯದಲ್ಲಿ ಯಕ್ಷಹಾಸ್ಯ ವೈಭವ ನಡೆಯಲಿದೆ ಎಂದರು.

ಆಧುನಿಕ ವಿಜ್ಞಾನದ ಸಂಕೀರ್ಣ ಯುಗದಲ್ಲಿ ಕನ್ನಡ ಜಾನಪದ ಪರಿಷತ್ ಜಲ ಜಾನಪದಕ್ಕೆ ಸಂಬಂಧಿಸಿ ಎರಡನೇ ಸಮಾರಂಭವಾಗಿ ಮರವಂತೆಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಿದೆ. ಕನ್ನಡ ಜಾನಪದ ಪರಿಷತ್ ಆರಂಭವಾಗಿ 7 ವರ್ಷಗಳಲ್ಲಿ ಸರ್ಕಾರದ ಯಾವುದೇ ಅನುದಾನವಿಲ್ಲದೇ 4,500ಕ್ಕಿಂತ ಹೆಚ್ಚು ಕಾರ್ಯಕ್ರಮಗಳನ್ನು ರಾಜ್ಯದಾದ್ಯಂತ ಸಂಘಟಿಸಿದೆ. 12 ರಾಜ್ಯ ಸಮ್ಮೇಳನಗಳನ್ನು , ರಾಜ್ಯ ಗೊರವರ ಸಮ್ಮೇಳನ, ರಾಜ್ಯ ಜೋಗಿ ಸಮ್ಮೇಳನ, ರಾಜ್ಯ ಸುಡುಗಾಡು ಸಿದ್ಧರ ಸಮ್ಮೇಳನ ಜೊತೆಗೆ ರಾಜ್ಯ ಮಟ್ಟದ ಗಾದೆ ಸ್ಪರ್ಧೆ, ಒಗಟು ಸ್ಪರ್ಧೆ, ಒಡಪು ಸ್ಪರ್ಧೆಗಳನ್ನು ಯಶಸ್ವಿಯಾಗಿ ಆಯೋಜಿಸಿದೆ. ಕರಾವಳಿ ವಿಭಾಗದಲ್ಲಿ ಮೂಲ ಜನಪದ ಕಲೆ ಮತ್ತು ಕಲಾವಿದರನ್ನು ಸಂರಕ್ಷಿಸುವ ದೃಷ್ಟಿಯಿಂದ ಕರಾವಳಿ ವಿಭಾಗದ ಮೂರು ಜಿಲ್ಲೆಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸಲಾಗುವುದು ಎಂದರು.

ಸುದ್ಧಿಗೋಷ್ಠಿಯಲ್ಲಿ ಜಲಜಾನದೋತ್ಸವದ ಸಮಿತಿ ಗೌರವ ಸಲಹೆಗಾರರಾದ ಪ್ರೊ.ಕನರಾಡಿ ವಾದಿರಾಜ್ ಭಟ್, ಲಯನ್ಸ್ ಕ್ಲಬ್ ಕೋಸ್ಟಲ್ ಕುಂದಾಪುರ ಇದರ ಅಧ್ಯಕ್ಷರಾದ ಜಯಶೀಲ ಶೆಟ್ಟಿ, ಜಲಜಾನಪದೋತ್ಸವ ಕಾರ್ಯಕಾರಿ ಸಮಿತಿ ಸಂಚಾಲಕ ದಯಾನಂದ ಬಳೆಗಾರ್ ಮೊದಲಾದವರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!