Sunday, September 8, 2024

ಎರಡುವರೆ ತಿಂಗಳೊಳಗೆ ಹೆದ್ದಾರಿಯಿಂದ ಕುಂದಾಪುರ ನಗರಕ್ಕೆ ಪ್ರವೇಶ-ಪಿ.ಡಿ ಭರವಸೆ

ಕುಂದಾಪುರ:ಮಾ.18: ಪುರಸಭಾ ವ್ಯಾಪ್ತಿಗೆ ರಾಷ್ಟ್ರೀಯ ಹೆದ್ದಾರಿಯಿಂದ ಪ್ರವೇಶ ನೀಡಬೇಕು ಎನ್ನುವ ಮನವಿಯಂತೆ ಹೆದ್ದಾರಿ ಯೋಜನಾ ನಿರ್ದೇಶಕ ಲಿಂಗೇಗೌಡ ಅವರು ಶುಕ್ರವಾರ ಪ್ರಸ್ತಾವಿತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನೆಡೆಸಿದರು.

ಬೇಡಿಕೆ ಇರುವ ಕುಂದಾಪುರ ಎಲ್.ಐ.ಸಿ ರಸ್ತೆ ಹತ್ತಿರ ಮೆಸ್ಕಾಂ ಕಛೇರಿ ಎದುರುಗಡೆ ಕುಂದಾಪುರ ನಗರಕ್ಕೆ ಪ್ರವೇಶ ನೀಡುವುದಕ್ಕೆ ಒಪ್ಪಿಗೆ ನೀಡಿದ ಅವರು, ಮುಂದಿನ ಎರಡುವರೆ ತಿಂಗಳ ಒಳಗಡೆ ಇಲ್ಲಿ ಹೆದ್ದಾರಿಯಂದ ಸರ್ವೀಸ್ ರಸ್ತೆಗೆ ಪ್ರವೇಶ ನೀಡಲಾಗುವುದು. ಇಲ್ಲಿ ಸರ್ವೀಸ್ ರಸ್ತೆಯನ್ನು ಇನ್ನಷ್ಟು ವಿಸ್ತಾರಗೊಳಿಸಿಕೊಂಡು ಈಗಿರುವ ಸರ್ವೀಸ್ ರಸ್ತೆಯಲ್ಲಿ ಪ್ರವೇಶ ಮಾರ್ಗದ ಒಂದಷ್ಟು ದೂರ ಹೆದ್ದಾರಿ ಮಟ್ಟದಲ್ಲಿ ಎತ್ತರ ಪಡಿಸಿಕೊಂಡು ನಗರಕ್ಕೆ ಪ್ರವೇಶ ನೀಡಲಾಗುವುದು. ಅದೇ ರೀತಿ ಆಚೆ ಕಡೆಯಲ್ಲಿಯೂ ಕೂಡಾ ಹೆದ್ದಾರಿಯಿಂದ ಸರ್ವೀಸ್ ರಸ್ತೆಗೆ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗುವುದು. ಎರಡರಿಂದ ಎರಡುವರೆ ತಿಂಗಳೊಳಗೆ ಈ ಪ್ರಕ್ರಿಯೆ ಆಗುತ್ತದೆ ಎಂದು ಭರವಸೆಯ ಮಾತನಾಡಿದರು.

ಈ ಸಂದರ್ಭದಲ್ಲಿ ಮೇಲ್ಸೇತುವೆಯಲ್ಲಿ ಇನ್ನೂ ಕೂಡಾ ದಾರಿದೀಪ ಅಳವಡಿಸಿಲ್ಲ. ರಾತ್ರಿ ಹೊತ್ತು ಅಪಘಾತ ಸಂಭವಿಸುತ್ತದೆ ಎಂದು ಅಧಿಕಾರಿಗಳ ಗಮನಕ್ಕೆ ತರಲಾಯಿತು. ಅದಕ್ಕೆ ಉತ್ತರಿಸಿದ ಪಿ.ಡಿ ಅವರು ಮಾ.೩೦ರ ಒಳಗೆ ಮೇಲ್ಸೇತುವೆಗೆ ದಾರಿದೀಪಗಳ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಈ ಸಂದರ್ಭದಲ್ಲಿ ಕುಂದಾಪುರ ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್, ಉಪಾಧ್ಯಕ್ಷ ಸಂದೀಪ್ ಖಾರ್ವಿ, ಕ್ಷೇತ್ರ ಬಿಜೆಪಿ ಅಧ್ಯಕ್ಷ ಶಂಕರ ಅಂಕದಕಟ್ಟೆ, ಹೆದ್ದಾರಿ ಹೋರಾಟ ಸಮಿತಿಯ ಕೆಂಚನೂರು ಸೋಮಶೇಖರ ಶೆಟ್ಟಿ, ಬಿ.ಕಿಶೋರ್ ಕುಮಾರ್, ರಾಜೇಶ ಕಾವೇರಿ, ವಿವೇಕ್ ನಾಯಕ್, ಪುರಸಭಾ ಸದಸ್ಯರಾದ ಪ್ರಭಾಕರ, ಶೇಖರ ಪೂಜಾರಿ, ಸಂತೋಷ್ ಕುಮಾರ್ ಶೆಟ್ಟಿ, ರೋಹಿಣಿ ಉದಯಕುಮಾರ್, ವನಿತಾ ಬಿಲ್ಲವ, ರಾಘವೇಂದ್ರ ಖಾರ್ವಿ ಹಾಗೂ ಅವಿನಾಶ್ ಉಳ್ತೂರು, ರಾಘವೇಂದ್ರ ಶೇಟ್, ಸತೀಶ್ ಪೂಜಾರಿ, ನಾಗರಾಜ್ ಆಚಾರ್ಯ, ಸುರೇಂದ್ರ ಕಾಂಚನ್, ಅಭಿಷೇಕ್, ರಾಘವೇಂದ್ರ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!