(ಸುಬ್ರಹ್ಮಣ್ಯ ಪಡುಕೋಣೆ, ಸಂಪಾದಕ)
ಜನರಲ್ಲಿ ಭಯ ಹುಟ್ಟಿಸಿ ಕರೊನಾವನ್ನು ಹೆಚ್ಚಿಸುವ ಆಟ ಹೆಚ್ಚು ದಿನ ನೆಡೆಯುವುದಿಲ್ಲ. ಜನರೂ ಈಗ ಜಾಗೃತರಾಗುತ್ತಿದ್ದಾರೆ. ಸರಕಾರವು ತನ್ನ ಆಡಳಿತಾತ್ಮಕ ವೈಫಲ್ಯಗಳನ್ನು ಮುಚ್ಚಿ ಹಾಕಿ ಕೊಳ್ಳಲು ಕರೊನಾವನ್ನು ಒಂದು ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದೆ ಎಂಬುದನ್ನು ಜನರು ತಿಳಿದುಕೊಂಡಿದ್ದಾರೆ. ಸರಕಾರವು ಕರೊನಾ ಹೆಸರಲ್ಲಿ ಮಾಡುವ ಪ್ರತಿಯೊಂದು ಮೋಸಗಳನ್ನು, ಗೊಂದಲಗಳನ್ನು, ಆದೇಶಗಳನ್ನು ಜನ ತಿಳಿಯಲಾರಂಭಿಸಿದ್ದಾರೆ. ಕರೊನಾದ ಹೆಸರಲ್ಲಿ ಜನರನ್ನು ಸತಾಯಿಸಿ, ಸಾಯಿಸಿ, ತೊಂದರೆ ನೀಡಿದ್ದನ್ನು ಜನ ಈಗ ಮತ್ತೆ ಆಲೋಚಿಸುತ್ತಿದ್ದಾರೆ. ದೇಶದ ಕೋಟ್ಯಂತರ ಜನರು ಹಸಿವಿನಿಂದ ಬಳಲುವಂತೆ ಮಾಡಿದ ಈ ಕೊರೊನಾದ ಹಿಂದಿನ ಸತ್ಯಗಳನ್ನು ತಿಳಿಯುವಂತೆ ಮಾಡಬೇಕಾಗಿದೆ. ಇದರಲ್ಲಿ ಬಹುಪಾಲು ಬಹುರಾಷ್ಟ್ರೀಯ ಔಷದಿ ಕಂಪೆನಿಗಳ ಪಾತ್ರವೂ ಇದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಕರೊನಾ ದಾಳಿ ಇಟ್ಟಿದ್ದು ಪ್ರಮುಖವಾಗಿ ಜನ ಸಾಮಾನ್ಯರ ಮೇಲೆ. ಸಾಮಾನ್ಯ ಜನರ ಉದ್ಯೋಗಗಳನ್ನು ಕಸಿದುಕೊಂಡು ಅವರನ್ನು ಬೀದಿ ಪಾಲು ಮಾಡಿದೆ. ಸರಕಾರವು ಕೂಡ ಇದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಜನರಿಗೆ ತೊಂದರೆ ಆಗುವುದನ್ನು ಗುರುತಿಸಿ ಅವರಿಗೆ ಪರಿಹಾರ ನೀಡುವ ಕೆಲಸವನ್ನು ಮಾಡ ಬೇಕಿತ್ತು. ಆದರೆ ಅದನ್ನು ಸರಕಾರ ಮಾಡಲೇ ಇಲ್ಲ. ಇದರಿಂದಾಗಿ ಜನ ಬೀದಿಗೆ ಬೀಳುವಂತಾಯಿತು. ಒಂದೆನೆ ಅಲೆ, ಎರಡನೆ ಅಲೆ ಈಗ ಮೂರನೆ ಅಲೆ ಎಂದು ಎಲ್ಲರನ್ನು ಯಾಮಾರಿಸುವ ಕೆಲಸ ನೆಡೆಯಿತು. ಆಳುವ ವರ್ಗಗಳು ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಕೆಲಸವೂ ಕೂಡ ಇದೆ ಸಂದರ್ಭದಲ್ಲಿ ನೆಡೆಯಿತು. ಸರಕಾರ ತನ್ನ ಅನೇಕ ಪ್ರಕರಣಗಳನ್ನು ಇದೇ ಸಂದರ್ಭದಲ್ಲಿ ಮುಚ್ಚಿಹಾಕಿಕೊಂಡಿತು. ಒಟ್ಟಾರೆಯಾಗಿ ಕರೊನಾ ಆಳುವ ವರ್ಗಗಳಿಗೆ ಅನುಕೂಲವೆ ಆಯಿತು. ಮೂರನೆ ಅಲೆ ಬಂದು ಜನರನ್ನು ಮತ್ತೆ ಯಾಮಾರಿಸಲು ಸಾಧ್ಯ ಎಂದು ಸರಕಾರ ಭಾವಿಸಿತು. ಅದಕ್ಕಾಗಿ ಲಾಕ್‌ಡೌನ್ ಸಿದ್ಧತೆಯನ್ನು ಮಾಡಿಕೊಂಡಿತು. ರಾತ್ರಿ ನಿಷೇದಾಜ್ಞೆಯನ್ನು ಹೇರಿತು. ವಾರಾಂತ್ಯ ನಿಷೇದಾಜ್ಞೆಯನ್ನು ಜಾರಿ ಮಾಡಿತು. ಆದರೆ ಜನ ಯಾವುದನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಿಲ್ಲ. ಸರಕಾರ ಜನರನ್ನು ಬೆದರಿಸುವ ಎಲ್ಲಾ ಕಾರ್ಯಗಳನ್ನು ಮಾಡಿತು. ಮೆಡಿಕಲ್ ಮಾಫಿಯಾ ಅದಕ್ಕಾಗಿ ಸಿದ್ದತೆಗಳನ್ನು ಮಾಡಿಕೊಂಡಿತು. ಆದರೆ ಜನ ಹೆದರಲೆ ಇಲ್ಲ. ಸರಕಾರದ, ಆರೋಗ್ಯ ಇಲಾಖೆಯ ಯಾವುದೇ ಬೆದರಿಕೆಗೂ ಮಣಿಯದೆ ತನ್ನ ನಿತ್ಯದ ಕಾರ್ಯದಲ್ಲಿ ತೊಡಗಿಸಿಕೊಂಡರು. ಮೂರನೆಯ ಅಲೆಯ ಬಗ್ಗೆ ಭಯಂಕರವಾಗಿ ಬಿತ್ತರಿಸಿದ್ದನ್ನು ಲೆಕ್ಕಕ್ಕೆ ತೆಗೆದುಕೊಳ್ಳ್ಳಲಿಲ್ಲ. ಆಳುವ ವರ್ಗಗಳು ಬೆದರಿಸಲು ಸಾಕಷ್ಟು ರೀತಿಯಲ್ಲಿ ಪ್ರಯತ್ನಿಸಿತಾದರೂ ಜನ ಮಾತ್ರ ಹೆದರಲೇ ಇಲ್ಲ. ಇದರಿಂದಾಗಿ ಸರಕಾರವೂ ಎಚ್ಚೆತ್ತುಕೊಂಡಿತು. ರಾಜಕೀಯ ಕಾರಣವೂ ಸೇರಿದಂತೆ ಕರೊನಾಕ್ಕೆ ಮಾಡಿದ ನಿಷೇದಾಜ್ಞೆಯನ್ನು ತೆರವುಗೊಳಿಸಿತು. ಇದೀಗ ಮತ್ತೆ ಮಾಮೂಲಿಯಾಗಿ ಜನ ಓಡಾಡುತ್ತಿದ್ದಾರೆ. ರಾಜಕೀಯ ಕಾರ್ಯಕ್ರಮಗಳಿಗಿಲ್ಲದ ಕಡಿವಾಣ ಜನರ ಮೇಲೆ ಏಕೆ ಎನ್ನುವುದು ಜನರ ಪ್ರಶ್ನೆ ಸಹಜವಾಗಿ ಎದ್ದಿತ್ತು. ಇದಕ್ಕೆ ಸರಕಾರದ ಬಳಿ ಉತ್ತರವಿಲ್ಲ. ಇದೀಗ ಅಲೆಯನ್ನು ಸರಕಾರ ಮುಗಿಸದಿದ್ದರೂ ಜನ ಮುಗಿಸಿದ್ದಾರೆ. ಕರೊನಾ ಜನರೆ ಜಾಗೃತಿ ಮಾಡಿಕೊಳ್ಳ ಬೇಕಾದ ಅನಿವಾರ್ಯತೆ ಬಂದಿದೆ.