spot_img
Thursday, January 29, 2026
spot_img

ರಾಯಪ್ಪನ ಮಠದ ಕ್ಷೇತ್ರ ಪರಿಚಯ ಪುಸ್ತಕ ಬಿಡುಗಡೆ

ಕುಂದಾಪುರ: ಕುಂದಾಪುರ ವಡೆರಹೋಬಳಿಯ ರಾಯಪ್ಪನ ಮಠದ ಕ್ಷೇತ್ರ ಪರಿಚಯ ಪುಸ್ತಕ ಬಿಡುಗಡೆ ಸಮಾರಂಭ ಇತ್ತೀಚಿಗೆ ಕೆರೆಕಟ್ಟೆ ಶೇಷ ಬನದಲ್ಲಿ ನಡೆಯಿತು.
ರಾಯಪ್ಪನ ಮಠದ ದಿ. ಮಾದಪ್ಪ ಹೊಳ್ಳರ ಪುತ್ರ ಶ್ರೀಕಾಂತ್ ಹೊಳ್ಳರು ಪುಸ್ತಕ ರಚನೆ ಮಾಡಿದ್ದು ಪ್ರೊಫೆಸರ್ ಮುರುಗೇಶಿ ಅವರು ಪುಸ್ತಕ ಬಿಡುಗಡೆ ಮಾಡಿ ಶುಭ ಹಾರೈಸಿದರು.
ಇದೆ ಸಂದರ್ಭದಲ್ಲಿ ಡಾ ಸ್ಫೂರ್ತಿ ಹೊಳ್ಳ ರಚಿಸಿದ ರಾಯಪ್ಪನ ಮಠದ ಶ್ರೀ ಚನ್ನಕೇಶವ ದೇವರ ಅಕ್ರಿಲಿಕ್ ಪೇಂಟಿಂಗ್ ಅನ್ನು ನಾರಾಯಣ ಯಾಜಿ ಅನಾವರಣಗೊಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕೆರೆ ಕಟ್ಟೆ ಶೇಷ ಬನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾದ ಪ್ರಸಾದ್ ಐತಾಳ ವಹಿಸಿದ್ದರು.
ಈ ಸಂದರ್ಭದಲ್ಲಿ ಸೆಲ್ಕೋ ಸೋಲಾರ್ ಇದರ ಸಿ ಇ ಓ ಮೋಹನ್ ಹೆಗ್ಡೆ ಉಪಸ್ಥಿತರಿದ್ದರು.
ಶ್ರೀಕಾಂತ್ ಹೊಳ್ಳ ಸ್ವಾಗತದೊಂದಿಗೆ ಪ್ರಾಸ್ತವಿಕ ಮಾತನಾಡಿದರು. ಡಾ ಕಾರ್ತಿಕ್ ಐತಾಳ ಪ್ರಾರ್ಥನೆ ಮಾಡಿದರು. ಜೀರ್ಣೋದ್ದಾರ ಸಮಿತಿ ಪ್ರಧಾನ ಕಾರ್ಯದರ್ಶಿ ನಾಗರಾಜ್ ರಾಯಪ್ಪನ ಮಠ ಕಾರ್ಯಕ್ರಮ ನಿರೂಪಿಸಿ ಡಾ ಸ್ಫೂರ್ತಿ ಹೊಳ್ಳ ವಂದಿಸಿದರು.
Sourcekundapura

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!