spot_img
Thursday, January 29, 2026
spot_img

ಇ.ಎಸ್.ಐ ಯೋಜನೆ: ಉಡುಪಿ ಜಿಲ್ಲೆಯಲ್ಲಿ ಕೆ.ಎಂ.ಸಿ ಮಣಿಪಾಲ ಆಸ್ಪತ್ರೆಯನ್ನು ಯೋಜನೆಯಡಿಯಲ್ಲಿ ಮುಂದುವರಿಕೆಗೆ ಶಾಸಕ ಗುರುರಾಜ ಗಂಟಿಹೊಳೆ ಅಧಿವೇಶನದಲ್ಲಿ ಆಗ್ರಹ

ಬೆಂಗಳೂರು: ರಾಜ್ಯದಲ್ಲಿ ಇತ್ತೀಚಿಗೆ ಇ.ಎಸ್.ಐ ಎಂಪನೆಲ್ಡ್ ಆಸ್ಪತ್ರೆಗಳ ಸಂಖ್ಯೆಯನ್ನು ಕಡಿತಗೊಳಿಸಿರುವುದು ಮುಖ್ಯವಾಗಿ ಉಡುಪಿ ಜಿಲ್ಲೆಯಲ್ಲಿರುವ ಕಸ್ತೂರ್ಬಾ ಆಸ್ಪತ್ರೆಯನ್ನು ಇ.ಎಸ್.ಐ ಆರೋಗ್ಯ ಸೇವೆ ನೀಡುವ ಎಂಪನೆಲ್ಡ್ ಆಸ್ಪತ್ರೆಗಳ ಪಟ್ಟಿಯಿಂದ ಕೈ ಬಿಟ್ಟ ಕಾರಣ ಉಡುಪಿ ಜಿಲ್ಲೆ ಸೇರಿದಂತೆ ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಯ ಕಾರ್ಮಿಕರು ಮಣಿಪಾಲ ಆಸ್ಪತ್ರೆಯಲ್ಲಿ ಆರೋಗ್ಯ ಸೇವೆಗಳನ್ನು ನಿರಂತರವಾಗಿ ಪಡೆಯುತ್ತಿದ್ದು, ಪ್ರಸ್ತುತ ಈ ಆಸ್ಪತ್ರೆಯನ್ನು ಕೈ ಬಿಟ್ಟಿರುವುದರಿಂದ ಸಾಕಷ್ಟು ಸಮಸ್ಯೆ ಆಗುತ್ತಿರುವುದರಿಂದ ಈ ಕೆಎಂಸಿ ಆಸ್ಪತ್ರೆಯನ್ನು ಮುಂದುವರಿಸುವಂತೆ ಬೈಂದೂರು ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಅವರು ರಾಜ್ಯ ವಿಧಾನ ಮಂಡಲದ ಅಧಿವೇಶನದಲ್ಲಿ ಸರಕಾರದನ್ನು ಆಗ್ರಹಿಸಿದ್ದಾರೆ.

ಚುಕ್ಕೆ ರಹಿತ ಪ್ರಶ್ನೆಗೆ ಉತ್ತರಿಸಿದ ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಉತ್ತರಿಸಿದ್ದಾರೆ.

ಕಾರ್ಮಿಕರ ರಾಜ್ಯ ಜೀವ ವಿಮಾ ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆ ಗಳೊಂದಿಗೆ ಹೊಸದಾಗಿ ಟೆಂಡರ್ ಮೂಲಕ ಒಡಂಬಡಿಕೆ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ಇ-ಟೆಂಡರ್ ಪೆÇೀರ್ಟಲ್ ನಲ್ಲಿ ಒಂದೇ ಪ್ಯಾನ್ ಕಾರ್ಡ್ ಮೂಲಕ ಹಲವು ಶಾಖೆಗಳಿಗೆ ಅರ್ಜಿ ಸಲ್ಲಿಸಿದ 30 ಆಸ್ಪತ್ರೆಗಳ ಅರ್ಜಿಗಳು ಇ – ಪೆÇೀರ್ಟಲ್ ನಲ್ಲಿ ತಿರಸ್ಕೃತ ಗೊಂಡಿರುತ್ತದೆ. ಇ-ಪೆÇೀರ್ಟಲ್ ಅರ್ಜಿ ಸಲ್ಲಿಕೆಗೆ ಸಂಬಂಧಿಸಿದಂತೆ ತಿರಸ್ಕೃತಗೊಂಡಿರುವ ಎಲ್ಲಾ ಆಸ್ಪತ್ರೆಗಳ ಪ್ರಕರಣಗಳನ್ನು ಪರಿಗಣಿಸುವ ಪ್ರಸ್ತಾವನೆ ಸರಕಾರದ ಹಂತದಲ್ಲಿ ಪರಿಶೀಲನೆಯಲ್ಲಿದೆ ಎಂದಿದ್ದಾರೆ.

ಪ್ರಸ್ತುತ ರಾಜ್ಯದಲ್ಲಿರುವ ಇ.ಎಸ್.ಐ ಎಂಪಾನೆಲ್ಡ್ ಆಸ್ಪತ್ರೆಗಳ ಸಂಖ್ಯೆ 116, ಉಡುಪಿ, ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಇರುವ ಇ.ಎಸ್.ಐ ನೋಂದಾಯಿತ ಕಾರ್ಮಿಕರ ಸಂಖ್ಯೆ ಉಡುಪಿ-69882, ಶಿವಮೊಗ್ಗ- 71200, ಉತ್ತರ ಕನ್ನಡ- 19745,
ಉಡುಪಿ ಜಿಲ್ಲೆಯಲ್ಲಿ ಪ್ರಸ್ತುತ ಒಳಗೊಂಡಿರುವ ಆಸ್ಪತ್ರೆಗಳ ಸಂಖ್ಯೆ-7 (ಆದರ್ಶ ಆಸ್ಪತ್ರೆ ಉಡುಪಿ, ನ್ಯೂ ಸಿಟಿ ಉಡುಪಿ, ಹೈ ಟೆಕ್ ಮೆಡಿಕೆರ್ ಉಡುಪಿ, ಮಹೇಶ್ ಆಸ್ಪತ್ರೆ ಉಡುಪಿ, ಪ್ರಸಾದ್ ನೇತ್ರಾಲಯ ಉಡುಪಿ, ಡಾ.ಎ.ವಿ ಬಾಳಿಗ ಆಸ್ಪತ್ರೆ ಉಡುಪಿ, ಮಂಜುನಾಥ್ ಆಸ್ಪತ್ರೆ ಕುಂದಾಪುರ) ಈ ಬಗ್ಗೆ ಕಾರ್ಮಿಕ ಸಚಿವಾಲಯ ಮಾಹಿತಿ ನೀಡಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!