spot_img
Thursday, January 29, 2026
spot_img

ಗಂಗೊಳ್ಳಿಯಲ್ಲಿ ‘ಅವಳ ನಿಟ್ಟುಸಿರು’ ಬಿಡುಗಡೆ

ಗಂಗೊಳ್ಳಿ : ಬೆಂಗಳೂರಿನ ಜಯರಾಮ ಪಬ್ಲಿಕೇಶನ್ಸ್ ಪ್ರಕಟಿಸಿರುವ ಲೇಖಕ ನರೇಂದ್ರ ಎಸ್ ಗಂಗೊಳ್ಳಿ ಅವರ ಆರನೇ ಕೃತಿ ‘ಅವಳ ನಿಟ್ಟುಸಿರು’ ಬಿಡುಗಡೆ ಸಮಾರಂಭವು  ಎಸ್ ವಿ ಕಾಮರ್ಸ್ ಕ್ಲಬ್ ಮತ್ತು ಗಂಗೊಳ್ಳಿಯ ಸಂಜೀವ ಪಾರ್ವತಿ ಪ್ರಕಾಶನದ ಜಂಟಿ ಆಶ್ರಯದಲ್ಲಿ ಇಲ್ಲಿನ   ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ನಡೆಯಲಿದೆ. ಕಾಲೇಜಿನ ಪ್ರಾಂಶುಪಾಲೆ ಕವಿತಾ ಎಂ ಸಿ ಅಧ್ಯಕ್ಷತೆ ವಹಿಸಲಿದ್ದು,  ಹಿಂದಿ ಉಪನ್ಯಾಸಕ ನಾರಾಯಣ ಈ ನಾಯ್ಕ್ ಕೃತಿಯನ್ನು ಬಿಡುಗಡೆಗೊಳಿಸಲಿದ್ದಾರೆ.   ವಿಜಯಕುಮಾರ್ ಎನ್, ದೀಕ್ಷಾ ಪೂಜಾರಿ, ಆದಿತ್ಯ ಮೊದಲಾದವರು ಉಪಸ್ಥಿತರಿರಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
‘ಹೇಳದೆ ಹೋದ ಮಗಳಿಗೆ,  ‘ನಾಯಿ ನಾನು’,  ‘ನಿಭ್ರತ’. ಮೊದಲಾದ ಕೃತಿಗಳ ಮೂಲಕ ಸಾಹಿತ್ಯ ವಲಯದಲ್ಲಿ ಹೆಸರು ಗಳಿಸಿರುವ ನರೇಂದ್ರ ಎಸ್ ಗಂಗೊಳ್ಳಿ ಅವರ 50 ವೈವಿಧ್ಯಮಯ  ಬರಹಗಳ ಸಂಕಲನವು ‘ಅವಳ ನಿಟ್ಟುಸಿರು’ ಹೆಸರಿನಲ್ಲಿ ಪ್ರಕಟವಾಗುತ್ತಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!