spot_img
Thursday, January 29, 2026
spot_img

ಸಿದ್ದಾಪುರ ಏತ ನೀರಾವರಿ ಯೋಜನೆ: ರೈತರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಲು ಸಂತ್ರಸ್ತ ರೈತರಿಂದ ಉಸ್ತುವಾರಿ ಸಚಿವರಿಗೆ ಮನವಿ

ಸಿದ್ಧಾಪುರ: ಸಿದ್ದಾಪುರ ಏತ ನೀರಾವರಿ ಸಂತ್ರಸ್ತ ರೈತರು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಭೇಟಿಯಾಗಿ ವಾರಾಹಿ ಏತ ನೀ‌ಆವರಿ ಯೋಜನೆ ಅನಷ್ಟಾನದಲ್ಲಿ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸುವಂತೆ ಮನವಿ ಮಾಡಿದರು.
ಸಿದ್ದಾಪುರ ಏತ ನೀರಾವರಿ ಯೋಜನೆ ಎಡಭಾಗದ ಕೆಲವು ಪ್ರದೇಶಗಳು ಹಾಗೂ ಬಲಭಾಗದ ಸಂಪೂರ್ಣ ಪ್ರದೇಶವನ್ನು ಉದ್ದೇಶಪೂರ್ವಕವಾಗಿ ಕೈಬಿಟ್ಟಿರುವುದು ರೈತ ವಿರೋಧಿ ಧೋರಣೆಯಾಗಿದೆ. ಪ್ರಸ್ತುತ ಈ ಯೋಜನೆ ಹಾದು ಹೋಗುವ ಬಲಭಾಗದ ಪ್ರದೇಶವನ್ನು ಸಂಪೂರ್ಣ ಕೈಬಿಟ್ಟಿರುವುದು ಹಾಗೂ ಎಡಭಾಗದ ಅನೇಕ ಪ್ರದೇಶಗಳನ್ನು ಬದಿಗಿಡಲಾಗಿದೆ.

ಒಟ್ಟು ಸುಮಾರು ೪೦೦೦ ಹೆಕ್ಟೇರ್ ವ್ಯಾಪ್ತಿಯ ಯೋಜನೆಯಲ್ಲಿ ಕೇವಲ ೧೨೦೦ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಿ ಉಳಿದ ಸಾವಿರಾರು ಎಕರೆ ಪ್ರದೇಶಕ್ಕೆ ಅನ್ಯಾಯ ಮಾಡಲಾಗಿದೆ. ಪ್ರಸ್ತಾವಿತ ಯೋಜನೆಯ ಎಡಭಾಗದ ಕೊಳ್ಳಾಳ, ಬಾನಾಳಿ, ಕದ್ರಿ ಹಕ್ಲು, ಆರಾರಿ, ಸೇಳೋಡು ಹಾಗೂ ಬಲಭಾಗದಲ್ಲಿ ಕೆಳ ಬಾಂಡ್ಯ, ಹೆಮ್ಮಕ್ಕಿ ರೈಸ್ ಮಿಲ್, ಬಾಂಡ್ಯ, ತಗ್ಗುಂಜೆ, ಕರಮನೆ, ಆಜ್ರಿ ಚೋನಮನೆ, ಬೆಳ್ವಾಣ, ಎಳಬೇರು, ಹೊಸಂಗಡಿ, ಎಡಮೊಗೆ, ಕರ್ಕುಂಜೆ, ಅಂಪಾರು ಭಾಗದ ಶಾನ್ಕಟ್ಟು, ಗುಬ್ಯಾಡಿ ಕೆರೆ ಭಾಗವನ್ನು ಕೈಬಿಡಲಾಗಿದೆ.
ಈ ಎಲ್ಲಾ ಪ್ರದೇಶಗಳ ರೈತರು ನೀರಾವರಿ ಪೈಪ್‌ಲೈನ್ ಹಾದು ಹೋಗುವ ಪಕ್ಕದಲ್ಲೇ ಇದ್ದರೂ ಉದ್ದೇಶಪೂರ್ವಕವಾಗಿ ಅವರನ್ನು ಹೊರಗಿಟ್ಟಿರುವುದು ಇಲಾಖೆಯ ದ್ವಂದ್ವ ನೀತಿಯ ಕಟು ಸಾಕ್ಷಿಯಾಗಿದೆ.

ಸಿದ್ದಾಪುರ ಏತ ನೀರಾವರಿ ಯೋಜನೆಯನ್ನು ತಕ್ಷಣವೇ ಪುನರ್ ಪರಿಶೀಲನೆ ಮಾಡಬೇಕು. ಡಿ.ಪಿ.ಆರ್‌ನಲ್ಲಿ ಕೈಬಿಟ್ಟಿರುವ ಎಲ್ಲಾ ಪ್ರದೇಶಗಳಿಗೆ ನ್ಯಾಯಸಮ್ಮತ ಪಾಯಿಂಟ್‌ಗಳನ್ನು ತಕ್ಷಣ ನಿಗದಿಪಡಿಸಬೇಕು. ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯುವವರೆಗೆ ಪೈಪ್‌ಲೈನ್ ಕಾಮಗಾರಿಯನ್ನು ತಕ್ಷಣವೇ ಸ್ಥಗಿತಗೊಳಿಸಬೇಕು.
ಈ ಅನ್ಯಾಯವನ್ನು ಇದೇ ಕ್ಷಣದಲ್ಲಿ ಸರಿಪಡಿಸದಿದ್ದಲ್ಲಿ ಸಿದ್ದಾಪುರ ಏತ ನೀರಾವರಿ ಸಂತ್ರಸ್ತ ರೈತರು ತೀವ್ರವಾದ ಹೋರಾಟಕ್ಕೆ ಸಿದ್ಧವಾಗಲಿದ್ದಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ರೈತ ಮುಖಂಡರಾದ ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು, ಸದಾಶಿವ ಶೆಟ್ಟಿ ಶಂಕರನಾರಾಯಣ, ಕಾಳಿಂಗ ಶೆಟ್ಟಿ ಕಾವ್ರಾಡಿ ಹಾಗೂ ಅನೇಕ ರೈತರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!