spot_img
Thursday, January 29, 2026
spot_img

ಪಡುಕೋಣೆ ಸ.ಹಿ.ಪ್ರಾ ಶಾಲೆಯಲ್ಲಿ ಯಕ್ಷಗಾನ ತರಬೇತಿ ಉದ್ಘಾಟನೆ

ಶಾಲೆಗಳು ಪಠ್ಯದ ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸುವಂತೆ ಮಾಡಬೇಕು. ಆಗ ಶಿಕ್ಷಣ ಪರಿಪೂರ್ಣವಾಗುತ್ತದೆ. ಆ ನಿಟ್ಟಿನಲ್ಲಿ ಎಲ್ಲರೂ ಶ್ರಮವಹಿಸಬೇಕು ಎಂದು ಹವ್ಯಾಸಿ ಯಕ್ಷಗಾನ ಕಲಾವಿದರು, ಲಂಡನ್ನಿನಲ್ಲಿ ವೈಮಾನಿಕ ವಿಜ್ಞಾನಿಯಾಗಿ ಕೆಲಸ ಮಾಡುತ್ತಿರುವ ಯೋಗೀಂದ್ರ ಮರವಂತೆ ಹೇಳಿದರು.

ಅವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಡುಕೋಣೆ ಇಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಯಕ್ಷಗಾನ ತರಬೇತಿಯನ್ನು ಯಕ್ಷಗಾನ ಚಂಡೆಯನ್ನು ಭಾರಿಸುವುದರ ಮೂಲಕ ಯಕ್ಷಗಾನ ತರಬೇತಿಗೆ ಚಾಲನೆ ನೀಡಿದರು.

ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ದಿನೇಶ್ ಪೂಜಾರಿ ಯವರು ರಾಷ್ಟ್ರ ಧ್ವಜಾರೋಹಣಗೈದು, ಅಧ್ಯಕ್ಷತೆ ವಹಿಸಿ ಮಕ್ಕಳಿಗೆ ಶುಭ ಹಾರೈಸಿದರು. ಪಡುಕೋಣೆ ಕೋಟೆಗುಡ್ಡೆ ಎಜುಕೇಶನ್ ಡೆವಲಪ್‌ಮೆಂಟ್ ಟ್ರಸ್ಟ್ ಅಧ್ಯಕ್ಷರಾದ ಸುಬ್ರಹ್ಮಣ್ಯ ಪಡುಕೋಣೆ ಉಪಸ್ಥಿತರಿದ್ದು, ಯಕ್ಷಗಾನದ ತರಗತಿಯನ್ನು ಟ್ರಸ್ಟ್ ಆಯೋಜಿಸಿರುವುದರ ಔಚಿತ್ಯದ ಕುರಿತು ಮಾತನ್ನಾಡಿ ಶುಭ ಹಾರೈಸಿದರು. ಯಕ್ಷ ಗುರುಗಳಾದ ಯೋಗೀಂದ್ರ ಆಚಾರ್ಯ ಗುಜ್ಜಾಡಿಯವರು ಯಕ್ಷಗಾನ ಕಲಿಕೆಯ ಮಹತ್ವವನ್ನು ವಿವರಿಸಿದರು. ಸಮಾರಂಭದಲ್ಲಿ ಟ್ರಸ್ಟ್ ಉಪಾಧ್ಯಕ್ಷರಾದ ರಾಮ ಪೂಜಾರಿ ಮುಲ್ಲಿಮನೆ, ಕಾರ್ಯದರ್ಶಿ ರಾಜೀವ ಪಡುಕೋಣೆ, ಕೋಶಾಧಿಕಾರಿ ಅರವಿಂದ ಪೂಜಾರಿ, ಟ್ರಸ್ಟಿಗಳಾದ ಪಿ. ಎನ್. ಶ್ರೀಧರ್, ಯೋಗಶಿಕ್ಷಕರಾದ ನರಸಿಂಹಮೂರ್ತಿ ಪೋಷಕ ವೃಂದದವರು ಉಪಸ್ಥಿತರಿದ್ದರು.

ಶಾಲಾ ಮುಖ್ಯಶಿಕ್ಷಕರಾದ ಆನಂದ ಜಿ. ಪ್ರಾಸ್ತಾವಿಕ ಮಾತುಗಳನ್ನಾಡಿ ಗಣರಾಜ್ಯೋತ್ಸವದ ಹಾಗೂ ಯಕ್ಷಗಾನ ತರಗತಿಯ ಕುರಿತು ವಿಷದವಾಗಿ ವಿವರಿಸಿದರು. ಸಹಶಿಕ್ಷಕಿಯರಾದ ಶ್ಯಾಮಲ ಕಾರ್ಯಕ್ರಮ ನಿರೂಪಿಸಿ, ಅಮಿತಾ ಸ್ವಾಗತಿಸಿದರು. ಸುಜಾತಾ ವಂದಿಸಿದರು. ಶಿಕ್ಷಕರಾದ ದಿನೇಶ್, ಮೇಘನಾ, ಪ್ರೀತಿ, ಪ್ರಜ್ಞಾ ಸಹಕರಿಸಿದರು. ಸ್ಥಳೀಯ ಅಂಗನವಾಡಿಯ ಶಿಕ್ಷಕಿ ಗೀತಾ, sಸಮಿತಿ ಸದಸ್ಯರುಗಳಾದ ರಮೇಶ್ ಕೆ., ಕೃಷ್ಣ ಮೊಗವೀರ, ರಾಜೇಶ್ ಆಚಾರ್, ಸಹನಾ, ಸುಮತಿ ಮೊದಲಾದವರು, ಕುಸುಮಾ, ಉಮಾ ಹಾಗೂ ಪೋಷಕರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಹಾಗೂ ಕೊನೆಯಲ್ಲಿ ಮಕ್ಕಳಿಂದ ದೇಶಭಕ್ತಿ ಗೀತಗಾಯನ, ಭಾಷಣ ಹಾಗೂ ಮಕ್ಕಳೇ ಬರೆದು, ನಿರ್ದೇಶಿಸಿದ ಡಾ. ಬಿ. ಆರ್. ಅಂಬೇಡ್ಕರ್‌ರವರ ಜೀವನದ ಕುರಿತಾದ ಕಿರುನಾಟಕ ಪ್ರದರ್ಶನಗೊಂಡಿತು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!