spot_img
Sunday, March 15, 2026
spot_img

ರಾಷ್ಟ್ರ ಮಟ್ಟದ ಮೆಂಟಲ್ ಅರ್ಥ್‌ಮೆಟಿಕ್ ಚಾಂಪಿಯನ್‌ಶಿಪ್: ಲಕ್ಷ್ ರಾಜೇಶಗೆ ಚಿನ್ನ

ಕುಂದಾಪುರ: ಹೊಸಾಡು ಗ್ರಾಮದ ಅರಾಟೆ ಲಕ್ಷ್ ರಾಜೇಶ್ ಜ.24-2026ರಂದು ತಮಿಳುನಾಡಿನ ಪುದುಚೇರಿಯಲ್ಲಿ ಜರುಗಿದ ರಾಷ್ಟ್ರ ಮಟ್ಟದ 2ನೇ “WEKIE CHAMP” ಮೆಂಟಲ್ ಅರ್ಥ್‌ಮೆಟಿಕ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಬಹುಮಾನದೊಂದಿಗೆ ಪ್ರಶಸ್ತಿ ಪಡೆದಿದ್ದಾರೆ. ಮಾತ್ರವಲ್ಲದೆ ಪುದುಚೇರಿಯಲ್ಲಿ ಜ.25 ನಡೆದ 21ನೇ ರಾಷ್ಟ್ರ ಮಟ್ಟದ ಅಬಕಾಸ್ ಮೆಂಟಲ್ ಅರ್ಥ್‌ಮೆಟಿಕ್ ಚಾಂಪಿಯನ್ ಶಿಫ್ ನಲ್ಲಿ ಕುಂದಾಪುರ ಸೆಂಟರ್‌ನಿಂದ ಭಾಗವಹಿಸಿದ 85 ವಿದ್ಯಾರ್ಥಿಗಳಲ್ಲಿ ಲಕ್ಷ್ ರಾಜೇಶ್ ಸೂಪರ್ ಚಾಂಪಿಯನ್ ಪ್ರಶಸ್ತಿಯನ್ನು ಪಡೆದಿದ್ದಾರೆ. ಈ ಸ್ಪರ್ಧೆಯಲ್ಲಿ ರಾಷ್ಟ್ರದ ವಿವಿಧ ಭಾಗಗಳಿಂದ 2200 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಐಪಿ‌ಎ ಕುಂದಾಪುರ ಸೆಂಟರಿನ ಪ್ರಸನ್ನ ಕೆ.ಬಿ., ಮಹಾಲಕ್ಷ್ಮಿ, ಮತ್ತು ದೀಪಾ ಇವರುಗಳು ತರಬೇತಿ ನೀಡಿದ್ದಾರೆ. ಪ್ರಸ್ತುತ ಕುಂದಾಪುರದ ಓಕ್‌ವುಡ್ ಇಂಡಿಯನ್ ಸ್ಕೂಲಿನಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಲಕ್ಸ್ ರಾಜೇಶ್ ಅರಾಟೆ ರೇಷ್ಮಾ ರಾಜೇಶ್ ದಂಪತಿ ಪುತ್ರ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!