spot_img
Saturday, March 28, 2026
spot_img

ಸೆಳ್ಕೋಡು ಶಾಲೆಯಲ್ಲಿ ಕರಕುಶಲ ವಸ್ತು ಪ್ರಾತ್ಯಕ್ಷಿಕೆ ಮತ್ತು ಮಾಹಿತಿ ಶಿಬಿರ

ಬೈಂದೂರು: ಮಕ್ಕಳಿಗೆ ಸಕಾಲದಲ್ಲಿ ವಿವಿಧ ಮಾಹಿತಿಯೊಂದಿಗೆ ನಾಯಕತ್ವ, ಹೊಂದಾಣಿಕೆ ಮನೋಭಾವ ಬೆಳೆಸುವುದು ತೀರಾ ಅಗತ್ಯ. ಅದೇ ರೀತಿ ಮಕ್ಕಳಿಗೆ ವಿವಿಧ ಕರಕುಶಲ ವಸ್ತು ತಯಾರಿಸುವ ಈ ಶಿಬಿರ ಅವರ ಭಾಗವಹಿಸುವಿಕೆಯ ಹಕ್ಕನ್ನು ಪ್ರತಿಪಾದಿಸುತ್ತದೆ ಎಂದು ಜಡ್ಕಲ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ಶೆಟ್ಟಿ ಹೇಳಿದರು.

ಅವರು ಇತ್ತೀಚೆಗೆ ಅಭಿವೃದ್ಧಿ ಸಂಸ್ಥೆ (ರಿ.), ಬಾಳ್ಕುದ್ರು ಹಂಗಾರಕಟ್ಟೆ, ರೋಟರಿ ಕ್ಲಬ್ ಅಂಪಾರು, ಗ್ರಾಮ ಪಂಚಾಯತ್ ಜಡ್ಕಲ್, ಸ.ಹಿ.ಪ್ರಾ. ಶಾಲೆ ಸಳ್ಕೋಡು, ಹಾಗೂ ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿ ಇವರ ಸಂಯುಕ್ತ ಆಶ್ರಯದಲ್ಲಿ ಸ.ಹಿ.ಪ್ರಾ. ಶಾಲೆ ಸಳ್ಕೋಡು, ಬೈಂದೂರು ವಲಯ ಇಲ್ಲಿ ನಡೆದ ಒಂದು ದಿನದ ಮಕ್ಕಳಿಗೆ ಕರಕುಶಲ ವಸ್ತು ಪ್ರಾತ್ಯಕ್ಷಿಕೆ ಮತ್ತು ಮಾಹಿತಿ ಶಿಬಿರ-2022 ಉದ್ಘಾಟಿಸಿ ಮಾತನಾಡಿದರು.

ಸಭಾಧ್ಯಕ್ಷತೆಯನ್ನು ಅಂಪಾರು ರೋಟರಿ ಕ್ಲಬ್ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ವಹಿಸಿ, ಯಾವುದೇ ಕಲಾತ್ಮಕ ವಸ್ತು ತಯಾರಿಸುವಾಗ ಹೊಂದಾಣಿಕೆ ಮನೋಭಾವ, ಸಮಸ್ಯೆ ಎದುರಿಸುವಿಕೆ, ಗುಂಪು ನಿರ್ವಹಣೆ ಮತ್ತು ಸಮಯದ ಸದ್ಬಳಕೆಯ ಮಹತ್ವ ತಿಳಿಯುತ್ತದೆ. ಅಲ್ಲದೇ ಇಂತಹ ಪ್ರಾತ್ಯಕ್ಷಿಕೆ ಶಿಬಿರಗಳಿಂದ ಮಕ್ಕಳಿಗೆ ತುಂಬಾ ಪ್ರಯೋಜನವಾಗುತ್ತದೆ ಎಂದು ತಿಳಿಸಿದರು.

ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷೆ ಮಾಲತಿ ನಾಯ್ಕ್ ಮಾತನಾಡಿ, ಇಂತಹ ಉಪಯುಕ್ತ ಮಾಹಿತಿ ಶಿಬಿರದಿಂದ ಮಕ್ಕಳು ಕ್ರಿಯಾಶೀಲರಾಗುತ್ತಾರೆ. ಸದಾ ಕಲಿಕೆಯಲ್ಲೂ ಮುಂದೆ ಬರುತ್ತಾರೆ. ಇದರಿಂದ ಮಕ್ಕಳಲ್ಲಿ ಏಕಾಗ್ರತೆ ಹೆಚ್ಚುತ್ತದೆ ಅಲ್ಲದೇ ಮಕ್ಕಳು ತಯಾರಿಸುವ ವಿವಿಧ ಮುಖವಾಡ, ಸ್ಪಂಜಿನಿಂದ ಗೊಂಬೆ, ಎಂಬೋಸಿಂಗ್ ಪೈಂಟ್, ಹೂದಾನಿ ತಯಾರಿ, ಫೈಲ್ ತಯಾರಿ ಮತ್ತು ಕಾಗದದಿಂದ ಕೈಚೀಲ, ಮುಖವಾಡ ಇವುಗಳಲ್ಲಿ ಸೂಕ್ಷ್ಮತೆಯನ್ನು ಗಮನಿಸಬಹುದು ಎಂದರು.

ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ನಕ್ಷತ್ರ ನಾಯ್ಕ್, ಗ್ರಾ.ಪಂ. ಸದಸ್ಯ ನಾರಾಯಣ ಶೆಟ್ಟಿ, ಅಂಪಾರು ರೋಟರಿ ಕ್ಲಬ್ ಕಾರ್ಯದರ್ಶಿ ಗುರುರಾಜ ಶೆಟ್ಟಿ, ಶಾಲಾ ಮುಖ್ಯ ಶಿಕ್ಷಕ ಭಾಸ್ಕರ ನಾಯ್ಕ್, ಅಭಿವೃದ್ಧಿ ಸಂಸ್ಥೆ ಬಾಳ್ಕುದ್ರು ಹಂಗಾರಕಟ್ಟೆ ಕಾರ್ಯದರ್ಶಿ ರಮೇಶ್ ವಕ್ವಾಡಿ ಉಪಸ್ಥಿತರಿದ್ದರು.

ವಿದ್ಯಾ ಮೋಹನ್ ಉದ್ಯಾವರ ಕಾರ್ಯಕ್ರಮ ನಿರ್ವಹಿಸಿ, ರಮೇಶ್ ವಕ್ವಾಡಿ ಸ್ವಾಗತಿಸಿ ಪ್ರಾಸ್ತಾವನೆಗೈದರು. ಶ್ರೀರಕ್ಷಾ ವಂದಿಸಿದರು. ಸುಮಾರು ೬೨ ವಿದ್ಯಾರ್ಥಿಗಳು ಈ ಶಿಬಿರದ ಪ್ರಯೋಜನ ಪಡೆದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!