spot_img
Saturday, March 28, 2026
spot_img

ಬಿಲ್ಲವ ಸೇವಾ ಸಂಘ ಕುಂದಾಪುರ ಮುಂಬಯಿ: ಮಾಜಿ ಆಧ್ಯಕ್ಷ ಬಿ. ಪಿ. ಪೂಜಾರಿಯವರಿಗೆ ನುಡಿ-ನಮನ

ಮುಂಬೈ: ಬಿಲ್ಲವ ಸೇವಾ ಸಂಘ ಕುಂದಾಪುರ (ರಿ) ಮುಂಬಯಿ ಇದರ ಮಾಜಿ ಅಧ್ಯಕ್ಷರಾದ ಬಿ. ಪಿ. ಪೂಜಾರಿಯವರು ಡಿ. 15 ರಂದು ವಿಧಿವಶರಾಗಿದ್ದು, ಸಂಘವು ಅಗಲಿದ ದಿವ್ಯಾತ್ಮಕ್ಕೆ ನುಡಿ ನಮನದ ಶ್ರದ್ದಾಂಜಲಿ ಸಭೆಯನ್ನು ಜ.26 ಥಾಣೆ ಪಶ್ಚಿಮದಲ್ಲಿರುವ ರೋಟರಿ ಕ್ಲಬ್ ಸಭಾಗೃಹದಲ್ಲಿ ಆಯೋಜಿಸಲಾಗಿತ್ತು.

ಸಂಘದ ಅಧ್ಯಕ್ಷ ಸೂರ್ಯ ಎಸ್. ಪೂಜಾರಿ ಮಾತನಾಡಿ, ಅಗಲಿದ ಬಿ, ಪಿ, ಪೂಜಾರಿಯವರು ನೇರ ನಡೆ ನುಡಿಯ ನಿಷ್ಠುರವಾದಿಯಾಗಿದ್ದರು ಮಹಾನಗರದ ಹಲವಾರು ಸಂಘಟನೆಯ ಮೂಲಕ ಸಮಾಜಸೇವೆಗೈದ ಅವರು ನಮ್ಮ ಸಂಘದ ಅಧ್ಯಕ್ಷರಾಗಿ ಸಂಘಟನೆಯ ಬಲವರ್ಧನೆಗಾಗಿ ಶ್ರಮಿಸಿದ್ದರು ಧೀಮಂತ ವ್ಯಕ್ತಿತ್ವದ ಅವರನ್ನು ಕಳೆದುಕೊಂಡಿರುವುದು ನಮ್ಮ ಸಂಘಕ್ಕೆ ಮತ್ತು ಸಮುದಾಯಕ್ಕೆ ತುಂಬಲಾರದ ನಷ್ಟ ಎಂದರು.

ಕುಟುಂಬದವರ ಪರವಾಗಿ ಭಾಸ್ಕರ ಕೆ. ಪೂಜಾರಿ ಮತ್ತು ರಾಜು ಪೂಜಾರಿ ನುಡಿನಮನ ಸಲ್ಲಿಸಿದರು. ಸಂಘದ ಉಪಾಧ್ಯಕ್ಷರುಗಳಾದ ನರಸಿಂಹ ಎಮ್. ಬಿಲ್ಲವ ಮತ್ತು ಎಸ್. ಕೆ, ಪೂಜಾರಿ ಅವರ ಜೊತೆಗಿರುವ ಒಡನಾಟವನ್ನು ಮೆಲಕು ಹಾಕಿ ಶ್ರದ್ದಾಂಜಲಿ ಸಲ್ಲಿಸಿದರು.

ಗೌರವ ಪ್ರಧಾನ ಕಾರ್ಯದರ್ಶಿ ಅಶೋಕ ಎನ್. ಪೂಜಾರಿ ವಂದಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!